Home » ಸಿಗ್ನಲ್‌ನಲ್ಲಿ ಚಾಪೆ ಹಾಸಿ ಬಕ್ರೀದ್ ಆಚರಿಸುವಂತಿಲ್ಲ – ಸರ್ಕಾರದ ಆದೇಶ !

ಸಿಗ್ನಲ್‌ನಲ್ಲಿ ಚಾಪೆ ಹಾಸಿ ಬಕ್ರೀದ್ ಆಚರಿಸುವಂತಿಲ್ಲ – ಸರ್ಕಾರದ ಆದೇಶ !

0 comments

ಬೆಂಗಳೂರು : ಪ್ರತಿ ವರ್ಷದಂತೆ ಈ ವರ್ಷವೂ ಚಾಮರಾಜನಗರ ಈದ್ಗಾ ಮೈದಾನದಲ್ಲಿ ಜುಲೈ 10ಕ್ಕೆ ಮುಸ್ಲಿಂ ಜನಾಂಗದ ಬಕ್ರೀದ್‌ ಹಬ್ಬದ ಆಚರಣೆಗೆ ಅವಕಾಶ ನೀಡಲಾಗುತ್ತದೆ. ಸುಪ್ರೀಂನಲ್ಲಿ ನಮಾಝ್‌ಗೆ ಅವಕಾಶವಿದೆ. ಆದರೆ ಸಿಗ್ನಲ್‌ನಲ್ಲಿ ಚಾಪೆ ಹಾಕುವುದಕ್ಕೆಅವಕಾಶವಿಲ್ಲ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಎಚ್ಚರಿಕೆ ನೀಡಿದ್ದಾರೆ.

ಚಾಮರಾಜನಗರ ಈದ್ಗಾ ಮೈದಾನ ವಿವಾದ ನಡುವೆ ಜುಲೈ 10ಕ್ಕೆ ಬಕ್ರೀದ್‌ ಹಬ್ಬದ ಆಚರಣೆ ಹಿನ್ನೆಲೆ ʻ ಪ್ರಾರ್ಥನೆಗೆ ಯಾವುದೇ ಅಡ್ಡಿಯಿಲ್ಲ ʼ ಎಂದು ಬಿಬಿಎಂಪಿ ಆದೇಶ ನೀಡಿದೆ.

ಹಬ್ಬದ ಆಚರಣೆಗೆ ರಸ್ತೆ ಕ್ಲೋಸ್‌ ಮಾಡಿದ್ರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಟ್ರಾಫಿಕ್‌ ಆಗುವಂತೆ ಹಬ್ಬ ಆಚರಣೆ ಮಾಡುವಂತಿಲ್ಲ. ಸಿಗ್ನಲ್‌ನಲ್ಲಿ ಚಾಪೆ ಹಾಕುವುದಕ್ಕೆಅವಕಾಶವಿಲ್ಲ. ಪ್ರಾರ್ಥನೆಗೆ ಯಾವುದೇ ಅಡ್ಡಿಯಿಲ್ಲ ಎಂದು ಬಿಬಿಎಂಪಿ  ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಎಚ್ಚರಿಕೆ ನೀಡಿದ್ದಾರೆ.

You may also like

Leave a Comment