Home » Ramadan festival: ಇಂದು ರಂಜಾನ್‌ ಹಬ್ಬ ಹಿನ್ನೆಲೆ; ಮೈಸೂರು ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ತಾತ್ಕಾಲಿಕ ನಿಷೇಧ, ಎಲ್ಲೆಲ್ಲಿ ಗೊತ್ತಾ?

Ramadan festival: ಇಂದು ರಂಜಾನ್‌ ಹಬ್ಬ ಹಿನ್ನೆಲೆ; ಮೈಸೂರು ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ತಾತ್ಕಾಲಿಕ ನಿಷೇಧ, ಎಲ್ಲೆಲ್ಲಿ ಗೊತ್ತಾ?

0 comments
Ramadan festival

Ramadan festival: ಬೆಂಗಳೂರು: ನಾಡಿನೆಲ್ಲೆಡೆ ರಂಜಾನ್‌ ಹಬ್ಬದ(Ramadan festival) ಸಡಗರ ಸಂಭ್ರಮ. ಇಂದು ಮುಸ್ಲಿಂ ಸಮಾಜದವರಿಂದ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಮೈಸೂರು ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ತಾತ್ಕಾಲಿಕ ನಿಷೇಧ ಹೇರಲಾಗಿದೆ. ಇಂದು ಬೆಳಗ್ಗೆ 8.30ರಿಂದ ಬೆಳಗ್ಗೆ 11 ಗಂಟೆವರೆಗೆ ಸಂಚಾರ ನಿರ್ಬಂಧಿಸಿದ್ದು, ಪೊಲೀಸರು ಮಾರ್ಗ ಬದಲಾವಣೆ ಮಾಡಿದ್ದಾರೆ.

ಮೈಸೂರು ಬ್ಯಾಂಕ್ ನಿಂದ ಟೌನ್ ಹಾಲ್ ಕಡೆಗೆ ಬರುವ ವಾಹನಗಳು ಕಿಮ್ಕೊ ಜಂಕ್ಷನ್​ನಲ್ಲಿ ವಿಜಯನಗರ ಮೂಲಕ ಸಂಚಾರಿಸಬಹುದು. ಟೌನ್ ಹಾಲ್ ಕಡೆಯಿಂದ ಮೈಸೂರು ಕಡೆಗೆ ಬರುವ ವಾಹನಗಳು ಬಿಜಿಎಸ್ ಪ್ಲೈಓವರ್ ಕೆಳಗಡೆ ಸರ್ವಿಸ್ ರಸ್ತೆಯನ್ನು ಬಳಸಿಕೊಂಡು ಶಿರಸಿ ಜಂಕ್ಷನ್​ನಲ್ಲಿ ಮೂಲಕ ಹಾದು ಹೋಗಬಹುದು. ಜೆಜೆ ನಗರ, ಟ್ಯಾಂಕ್ ಬಂಡೆ ರಸ್ತೆ, ಬಿನ್ನಿಮಿಲ್ ಜಂಕ್ಷನ್​, ಹುಣಸೇಮ ಜಂಕ್ಷನ್ ಮೂಲಕ ಸಂಚಾರಿಸುವಂತೆ ಸಾರ್ವಜನಿಕರಲ್ಲಿ ಸಂಚಾರಿ ಪೊಲೀಸರು ಮನವಿ ಮಾಡಿದ್ದಾರೆ.

ಇನ್ನು ಗುರುವಾರರಂದು ಚಂದ್ರದರ್ಶನವಾಗದ ಹಿನ್ನೆಲೆಯಲ್ಲಿ ರಾಜ್ಯದ ಕರಾವಳಿ ಭಾಗದಲ್ಲಿ ಶನಿವಾರ ಪವಿತ್ರ ಈದ್ ಉಲ್ ಫಿತರ್ ಆಚರಿಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತಕ್ವಾ ಅಹ್ಮದ್ ಮುಸ್ಲಿಯಾರ್ ನಿನ್ನೆ ತಿಳಿಸಿದ್ದರು. ಹೀಗಾಗಿ ಶುಕ್ರವಾರ ಕರಾವಳಿ ಭಾಗದ ಮುಸ್ಲಿಮರು ಉಪವಾಸ ವೃತ ಕೈಗೊಳ್ಳಬಹುದಾಗಿದೆ. ಈ ಮೂಲಕ ಶುಕ್ರವಾರದೊಂದಿಗೆ 1 ತಿಂಗಳ ಮುಸ್ಲಿಮರ ಅತ್ಯಂತ ಪವಿತ್ರ ಹಾಗೂ ಧಾರ್ಮಿಕ ಹಬ್ಬ ರಂಜಾನ್ ಉಪವಾಸ ಅಂತ್ಯವಾಗಲಿದೆ.

 

 

ಇದನ್ನು ಓದಿ: Secret talk: ನಿಮ್ಮ ಪ್ರೇಯಸಿಯೊಂದಿಗೆ ನೀವು ಈ ವಿಷಯಗಳನ್ನು ತಪ್ಪಾಗಿ ಚರ್ಚಿಸುತ್ತಿದ್ದೀರಾ? 

You may also like

Leave a Comment