Home » Love vs crime: ನೀನಿಲ್ಲದಿದ್ರೆ ಸಾಯುತ್ತೇನೆ ಎಂದ ಭಗ್ನ ಪ್ರೇಯಸಿ; ಉಲ್ಟಾ ಹೊಡೆದ ಪ್ರೇಮಿ, ವಿಷ ತಂದುಕೊಟ್ಟು ನೈಸ್ ಆಗಿ ಕೊಂದೇ ಬಿಟ್ಟ!

Love vs crime: ನೀನಿಲ್ಲದಿದ್ರೆ ಸಾಯುತ್ತೇನೆ ಎಂದ ಭಗ್ನ ಪ್ರೇಯಸಿ; ಉಲ್ಟಾ ಹೊಡೆದ ಪ್ರೇಮಿ, ವಿಷ ತಂದುಕೊಟ್ಟು ನೈಸ್ ಆಗಿ ಕೊಂದೇ ಬಿಟ್ಟ!

1 comment
Bengaluru

Bengaluru: ಇತ್ತೀಚಿನ ಪ್ರೀತಿ ಬರೀ ಮೂರು ದಿನದ ಕಥೆಯಾಗಿ ಜೀವ ಜೀವನ ಎರಡು ಮುಗಿದು ಹೋಗುತ್ತದೆ (Love Vs Crime). ಅದೇ ರೀತಿ ಇಲ್ಲೊಂದು ಜೋಡಿ ಅಬ್ರಾರ್ ಮತ್ತು ಮುಸ್ಕಾನ್ ಎಂಬವರು , ಟಿಕ್‌ಟಾಕ್‌ ಮತ್ತು ಇನ್ಸ್ಟಾ ಮೂಲಕ ಪ್ರೀತಿ ಹೆಸರಲ್ಲಿ ಬೆಂಗಳೂರಿನ(Bengaluru) ಮೂಲೆ ಮೂಲೆಯನ್ನ ಐದು ವರ್ಷ ಸುತ್ತಾಡಿದ್ದಾರೆ.

ಆದ್ರೆ ಈ ನಡುವೆ ಇದ್ದಕ್ಕಿದ್ದ ಹಾಗೆ ಮುಸ್ಕಾನ್ ಮದುವೆ ಯೋಚನೆ ಮಾಡಿದ್ದಳು, ಇದರಿಂದಾಗಿ ಅಬ್ರಾರ್ ನಿಧಾನವಾಗಿ ಬದಲಾಗೋದಕ್ಕೆ ಶುರು ಮಾಡಿದ್ದಾನೆ. ಅವಳ ಮೇಲೆ ಇಂಟರೆಸ್ಟ್ ಕಳೆದುಕೊಳ್ಳೋಕೆ ಶುರುವಾಗಿದೆ. ಕೊನೆಗೆ ಅವಳು ಬೇಡವೇ ಬೇಡ ಅನ್ನೋ ನಿರ್ಧಾರ ಕೂಡ ಮಾಡಿದ್ದನು. ಇನ್ನೂ ಆಕೆಯನ್ನ ಎಷ್ಟರ ಮಟ್ಟಿಗೆ ಆತ ದ್ವೇಷಿಸೋಕೆ ಶುರು ಮಾಡಿದ ಅಂದ್ರೆ ಮುಸ್ಕಾನ್ ಆತನ ಬದಲಾವಣೆಯಿಂದ ಬೇಸತ್ತು, ವಿಷ ತಂದು ಕೊಡು ಅಂದ ತಕ್ಷಣ ಈ ಕಟುಕ ಹೋಗಿ ಒಂದು ಬಾಟೆಲ್ ಇಲಿ ಪಾಷಾಣ ತಂದುಕೊಟ್ಟುಬಿಟ್ಟಿದ್ದಾನೆ.

ಒಂದು ಕಾಲದಲ್ಲಿ ನೀನು ಸತ್ತರೂ ಮದುವೆಯಾಗಲ್ಲ ಅಂದಿದ್ದ ಪ್ರೇಮಿಯೇ 5 ವರ್ಷ ಪ್ರೀತಿಸಿದ ಪ್ರೇಯಸಿಗೆ ವಿಷ ತಂದುಕೊಟ್ಟಿದ್ದಾನೆ. ಇನ್ನು ಇದರಿಂದ ಆಘಾತ ಗೊಂಡ ಮುಸ್ಕಾನ್ ಅವನೇ ಬೇಡ ಅಂದಮೇಲೆ ನಾನೇಕೆ ಬದುಕಿರಬೇಕು ಅಂತ ಯೋಚಿಸಿ ಆತ ತಂದುಕೊಟ್ಟ ವಿಷವನ್ನ ಕುಡಿದು ಬಿಟ್ಟಿದ್ದಾಳೆ.

ವಿಷಯ ತಿಳಿದ ಹೆತ್ತವರು ಹೆತ್ತು ಹೊತ್ತ ಮಗಳನ್ನು ಬದುಕಿಸಲು ಆಸ್ಪತ್ರೆಗೆ ಸೇರಿಸಿದ್ದಾರೆ. ಆದ್ರೆ ಆಕೆ ಮಾತ್ರ ಬದುಕುಳಿಯಲಿಲ್ಲ. ಇನ್ನು ಇತ್ತ ಬುದ್ದಿವಂತ ಅಬ್ರಾರ್ , ಮುಸ್ಕಾನ್ ಸತ್ತ ನಂತರ ಆಸ್ಪತ್ರೆಗೆ ಬಂದು ಅವಳ ಮೊಬೈಲ್ ಅನ್ನೇ ಕದ್ದೋಯ್ದು, ಅವರಿಬ್ಬರು ಜೊತೆಗಿರುವ ಎಲ್ಲ ಫೋಟೋ, ವಿಡಿಯೋ, ಚಾಟಿಂಗ್‌ ಅನ್ನು ಡಿಲೀಟ್‌ ಮಾಡಿದ್ದಾನೆ.

ಇದನ್ನೂ ಓದಿ: ನನ್ನ ಸುದ್ದಿಗೆ ಬಂದವರ ಸೆಟಲ್‌ಮೆಂಟ್ ಆಗಿದೆ – ಅಚ್ಚರಿಯ ಸ್ಟೇಟ್ಮೆಂಟ್ ನೀಡಿದ ಡಿ.ಕೆ.ಶಿವಕುಮಾರ್

You may also like

Leave a Comment