Home » Bengaluru Crime News: ಪತ್ನಿಗೆ ಅಶ್ಲೀಲ ವೀಡಿಯೋ ಕಳುಹಿಸಿದ ಪತಿ; ಜೈಲು ಶಿಕ್ಷೆ ಜೊತೆಗೆ ರೂ.45 ಸಾವಿರ ದಂಡ

Bengaluru Crime News: ಪತ್ನಿಗೆ ಅಶ್ಲೀಲ ವೀಡಿಯೋ ಕಳುಹಿಸಿದ ಪತಿ; ಜೈಲು ಶಿಕ್ಷೆ ಜೊತೆಗೆ ರೂ.45 ಸಾವಿರ ದಂಡ

1 comment
Bengaluru Crime News

ಬೆಂಗಳೂರು: ಮಾಜಿ ಪತ್ನಿಗೆ ಇ-ಮೇಲ್ ಮುಖಾಂತರ ಅಶ್ಲೀಲ ವಿಡಿಯೋ ಕಳುಹಿಸಿದ್ದ ಖಾಸಗಿ ಕಂಪನಿ ಉದ್ಯೋಗಿಗೆ 1 ತಿಂಗಳು ಸಾದಾ ಜೈಲು, 45 ಸಾವಿರ ರೂ. ದಂಡ ವಿಧಿಸಿ ನಗರದ ಒಂದನೇ ಎಸಿಎಂಎಂ ನ್ಯಾಯಾಲಯ ಆದೇಶಿಸಿದೆ. ರಾಘವನ್ ಸಂಪತ್ ಶಿಕ್ಷೆಗೆ ಗುರಿಯಾದವರು.

2017ರಲ್ಲಿ ಅಶ್ಲೀಲ ವಿಡಿಯೊ ಕಳುಹಿಸಿ, ಗೌರವಕ್ಕೆ ಧಕ್ಕೆ ತರುವ ಬರಹ ಬರೆದಿದ್ದಾರೆ ಎಂದು ಆರೋಪಿಸಿ ಸಂತ್ರಸ್ತೆ ಸಂಪತ್ ರಾಘವನ್ ವಿರುದ್ಧ ಸುಬ್ರಹ್ಮಣ್ಯನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ಸಿಐಡಿಗೆ ವರ್ಗಾವಣೆಗೊಂಡಿದ್ದು, ತನಿಖೆ ಪೂರ್ಣಗೊಳಿಸಿದ್ದ ತನಿಖಾಧಿಕಾರಿಗಳು ರಾಘವನ್ ವಿರುದ್ಧ ಐಟಿ ಕಾಯಿದೆಯಡಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ವಿದೇಶದಲ್ಲಿ ಉದ್ಯೋಗಿಯಾಗಿದ್ದ ಸಂತ್ರಸ್ತೆ 2016ರಲ್ಲಿ ನಗರಕ್ಕೆ ಆಗಮಿಸಿ ಸಂಪತ್ ರಾಘವನ್‌ರನ್ನು ಮದುವೆ ಆಗಿದ್ದರು. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಇಬ್ಬರೂ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಜತೆಗೆ, ಸಂತ್ರಸ್ತೆ ಕೆಲಸದ ಸಲುವಾಗಿ ಪುನಃ ವಿದೇಶಕ್ಕೆ ಹೋಗಿದ್ದರು.

ಈ ನಡುವೆ ಸಂಪತ್ ರಾಘವನ್, ಅಶ್ಲೀಲ ವಿಡಿಯೋವನ್ನು ಸಂತ್ರಸ್ತೆಗೆ ಇ-ಮೇಲ್ ಮೂಲಕ ಕಳುಹಿಸಿದ್ದರು. ಇದನ್ನು ಗಮನಿಸಿದ ಸಂತ್ರಸ್ತೆ ತನ್ನ ಸಹೋದರನಿಗೆ ವಿಚಾರ ತಿಳಿಸಿದ್ದರು. ಸಂತ್ರಸ್ತೆ ಸಹೋದರನೇ ಮೊದಲಿಗೆ ಸುಬ್ರಹ್ಮಣ್ಯ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ವಿದೇಶದಿಂದ ಬಂದ ನಂತರ ಸಂತ್ರಸ್ತೆಯೂ ಪ್ರತ್ಯೇಕ ದೂರು ದಾಖಲಿಸಿ ಹೇಳಿಕೆ ದಾಖಲಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

You may also like

Leave a Comment