Home » Bengaluru Crime News: ಪತಿ ಮೇಲಿನ ಸಿಟ್ಟು, ಮಗುವಿಗೆ ಸಿಗರೇಟ್‌ನಿಂದ ಸುಟ್ಟು, ಫ್ರಿಡ್ಜ್‌ ನೀರು ಎರಚಿ ಹಲ್ಲೆ, ಕೇಸು ದಾಖಲು

Bengaluru Crime News: ಪತಿ ಮೇಲಿನ ಸಿಟ್ಟು, ಮಗುವಿಗೆ ಸಿಗರೇಟ್‌ನಿಂದ ಸುಟ್ಟು, ಫ್ರಿಡ್ಜ್‌ ನೀರು ಎರಚಿ ಹಲ್ಲೆ, ಕೇಸು ದಾಖಲು

0 comments

Bengaluru: ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ತಾಯಿಯೊಬ್ಬಳು ತನ್ನ ಮಗುವಿನ ಮೇಲೆ ಕ್ರೌರ್ಯ ರೀತಿಯಲ್ಲಿ ವರ್ತಿಸಿರುವ ಘಟನೆ ಮಾಸುವ ಮುನ್ನವೇ ಇನ್ನೋರ್ವ ತಾಯಿ ತನ್ನ ಪತಿಯ ಮೇಲಿನ ಕೋಪದಿಂದ ಪ್ರಿಯಕರನೊದಿಗೆ ಸೇರಿ ತನ್ನದೇ ಮೂರು ವರ್ಷದ ಮಗುವಿಗೆ ಚಿತ್ರಹಿಂಸೆ ನೀಡಿದ ಆರೋಪವೊಂದು ಕೇಳಿ ಬಂದಿದೆ.

 

ಮಗುವನ್ನು ಮನೆಯಲ್ಲಿ ಕೂಡಿ ಹಾಕಿ, ಮನಬಂದಂತೆ ಹೊಡೆದು ಬಡಿದು ಹಲ್ಲೆ ಮಾಡಿದ್ದ ಘಟನೆ ನಡೆದಿರುವ ಕೃತ್ಯವೊಂದು ಬೆಳಕಿಗೆ ಬಂದಿದೆ. ಈ ಕ್ರೂರಿ ತಾಯಿಯ ಹೆಸರೇ ಆಯೇಷಾ ಎಂದು. ಈಕೆ ಇಮ್ರಾನ್‌ ಖಾನ್‌ ಎಂಬಾತನನ್ನು ವಿವಾಹವಾಗಿದ್ದು, ಹೆಣ್ಣು ಮಗು ಇದೆ. ದಂಪತಿ ವಿಚ್ಛೇದನ ಪಡೆದಿದ್ದು, ಆಯೇಷಾ ತನ್ನ ತವರಿಗೆ ಹೋಗಿ ತಾಯಿ ಜೊತೆ ನೆಲೆಸಿದ್ದಾಳೆ. ಆಯೇಷಾಗೆ ಇತ್ತ ಸಲೀಂ ಎಂಬ ಪ್ರಿಯಕರ ಕೂಡಾ ಇದ್ದಾನೆ. ಪತಿ ಇಮ್ರಾನ್‌ ಮೇಲಿನ ಕೋಪದಿಂದ ಆಯೇಷಾ ತನ್ನ ಪ್ರಿಯಕರ ಸಲೀಂ ಜೊತೆ ಸೇರಿ ತಾನೇ ಹೆತ್ತ ಮಗುವಿನ ಜೊತೆ ಮೃಗದ ರೀತಿ ನಡೆದುಕೊಂಡಿದ್ದಾಳೆ.

 

ಮಗುವನ್ನು ಕಚ್ಚಿ, ಅದಕ್ಕೆ ಫ್ರಿಡ್ಜ್ ನೀರು ಸರಿದು ಚಿತ್ರಹಿಂಸೆ ನೀಡಿದ್ದಳೆ. ಅಲ್ಲದೆ, ಮಗಳ ಕೈಗೆ ಸಿಗರೇಟ್ನಿಂದ ಸುಡಲಾಗಿದೆ. ಬಳಿಕ ಈ ಮಗುವಿನ ಮೇಲೆ ಸಲೀಂ ಹಲ್ಲೆ ನಡೆಸಿದ್ದಾನೆ. ಕೆಆರ್ಎಸ್ ಬಳಿಯ ಲಾಡ್ಜ್ನಲ್ಲಿ ಹೋಗಿ ಮಗಳನ್ನು ನೆಲಕ್ಕೆ ಬಿಸಾಡಿರುವ ಆರೋಪವೂ ಕೇಳಿಬಂದಿದೆ. ಇಷ್ಟೆಲ್ಲ ಚಿತ್ರಹಿಂಸೆ ನೀಡಿದ ಮೇಲೆ ತಂದೆಗೆ ಇದನ್ನು ಹೇಳಿದರೆ ಕೊಲೆ ಮಾಡುವ ಬೆದರಿಕೆ ಕೂಡಾ ಹಾಕಲಾಗಿದೆ. ಭಯಗೊಂಡ ಮಗು ಯಾರಿಗೂ ಹೇಳಿಕೊಂಡಿರಲಿಲ್ಲ. ಇದೀಗ ಮಗು ಘಟನೆ ಬಗ್ಗೆ ಹೇಳಿದೆ. ಇಮ್ರಾನ್‌ ನೀಡಿದ ದೂರಿನ ಅನ್ವಯ ಆಯೇಷಾ, ಆಕೆಯ ಪ್ರಿಯಕರ ಸಲೀಂ ಮತ್ತು ಜಬೀರ್‌ ಎಂಬುವವರ ಮೇಲೆ ಜೆಜೆನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

You may also like

Leave a Comment