Home » ಮೊಬೈಲ್‌ ಗೂಗಲ್‌ನಲ್ಲಿ ‘ಮಲ್ಪೆ’ ಎಂದು ಸರ್ಚ್ ಮಾಡಿದ್ದ ಬಾಲಕ ನಾಪತ್ತೆ..!ಮುಂದೆನಾಯ್ತು ಗೊತ್ತಾ?

ಮೊಬೈಲ್‌ ಗೂಗಲ್‌ನಲ್ಲಿ ‘ಮಲ್ಪೆ’ ಎಂದು ಸರ್ಚ್ ಮಾಡಿದ್ದ ಬಾಲಕ ನಾಪತ್ತೆ..!ಮುಂದೆನಾಯ್ತು ಗೊತ್ತಾ?

0 comments
Bengaluru

 

Bengaluru: ಆಧುನಿಕ ಜಗತ್ತಿನಲ್ಲಿ ಪೋಷಕರು ಆನ್‌ಲೈನ್‌ ಕ್ಲಾಸ್‌ ನೆಪದಲ್ಲಿ ಅನಿವಾರ್ಯಕ್ಕಾಗಿ ಮೊಬೈಲ್‌ ಖರೀದಿಸಿ ಮಕ್ಕಳಿದೆ ನೀಡಿದ್ದೇ ತಡ ಮಕ್ಕಳು ಹೊಸ ಚಟಕ್ಕೆ ಸಿಲುಕಿದ್ದಾರೆ. ಇದೀಗ ರಾಜ್ಯದಲ್ಲಿ ಮಕ್ಕಳು ಮೊಬೈಲ್‌ ಬಳಕೆ ಮಾಡುವುದು ಹೆಚ್ಚಾಗಿದೆ. ಅದರಲ್ಲೂ ರಾಜಧಾನಿ ಬೆಂಗಳೂರಿನ(Bengaluru) ಪುಟ್ಟ ಬಾಲಕನೊಬ್ಬ ಮೊಬೈಲ್‌ ಗೂಗಲ್‌ನಲ್ಲಿ ‘ಮಲ್ಪೆ’ ಎಂದು ಸರ್ಜ್‌ ಮಾಡಿದ್ದ ಬಾಲಕ ನಾಪತ್ತೆಯಾದ ‘ವಿಚಿತ್ರ ಘಟನೆ’ಯೊಂದು ಬೆಳಕಿಗೆ ಬಂದಿದೆ.

9ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕ ಆದಿತ್ಯ ಎಂಬಾತ ಹೇರ್‌ ಕಟ್ಟಿಂಗ್‌ ಮಾಡೋದಕ್ಕೆಂದು ಮನೆಯಿಂದ 120ರೂಪಾಯಿ ಪಡೆದು ತೆರಳಿದ್ದವ ನಾಪತ್ತೆಯಾಗಿದ್ದಾನೆ. ಆತ ತನ್ನ ಕೈನಲ್ಲಿದ್ದ ಮೊಬೈಲ್‌ನಲ್ಲಿ ಮಲ್ಪೆ ಎಂದು ಸರ್ಜ್‌ ಮಾಡಿರುವುದು ತಿಳಿಯಲಾಗಿದೆ.ಈ ವಿಚಾರ ತಿಳಿದು ಮಗನನ್ನು ಕಳೆದುಕೊಂಡ ಪೋಷಕರು ಆತಂಕಗೊಂಡಿದ್ದಾರೆ.

ಅಲ್ಲದೇ ಮನೆಯಲ್ಲಿದ್ದ ತನ್ನ ಬಟ್ಟೆಯನ್ನು ಬಾಲಕ ಆದಿತ್ಯ ತೆಗೆದುಕೊಂಡು ಹೋಗಿದ್ದಾನೆ ಎಂದು ತಿಳಿಯಲಾಗಿದೆ.

ಈ ಘಟನೆಯ ಬಗ್ಗೆ ಪೋಷಕರು ಈತ ಮೊಬೈಲ್‌ನಲ್ಲಿ ಮಲ್ಪೆ ಎಂದು ಸರ್ಜ್‌ ಮಾಡಿದ್ದನ್ನು ಕಂಡು ಕರಾವಳಿ ಭಾಗಕ್ಕೆ ತೆರಳಿರಬಹುದು ಎಂದು ಶಂಕಿಸಲಾಗಿದೆ. ಅಲ್ಲದೇ ಉಡುಪಿ ಜಿಲ್ಲೆಯ ಎಲ್ಲಾ ಠಾಣೆಗಳಿಗೆ ಬಾಲಕನ ಪೋಷಕರು ದೂರು ನೀಡಿದ್ದಾರೆ. ಬಳಿಕ ಪೋಷಕರು ಮಗನ ಪಡೆಯೋದಕ್ಕಾಗಿ ಜ್ಯೋತಿಷ್ಯನ ಮೊರೆ ಹೋಗಿದ್ದಾರೆ, ಅಲ್ಲದೇ ದಕ್ಷಿಣ ಕನ್ನಡ ಭಾಗದಲ್ಲಿ ಬಾಲಕ ಇದ್ದಾನೆಂದು ಜ್ಯೋತಿಷ್ಯರು ಸೂಚನಾ ಮಾಹಿತಿ ನೀಡಿದ್ದಾರೆ . ಬಾಲಕನಿಗಾಗಿ ಮುಂದುವರಿದ ಹುಡುಕಾಟ ನಡೆಸಲಾಗುತ್ತಿದೆ.

ಇದನ್ನೂ ಓದಿ: Finance Related Important Work: ಜೂನ್ 30 ರೊಳಗೆ ಹಣಕಾಸು ಸಂಬಂಧಿತ ಈ 4 ಪ್ರಮುಖ ಕಾರ್ಯಗಳನ್ನು ಪೂರ್ಣಗೊಳಿಸಿದರೆ ನಿಮಗೇ ಉತ್ತಮ!

You may also like

Leave a Comment