Bengaluru : ಬೈಕ್‌ನಲ್ಲಿ (Bike)ಮಗಳನ್ನು(Daughter )ಶಾಲೆಗೆ (School)ಬಿಡಲು ಹೋಗುತ್ತಿದ್ದ ಸಂದರ್ಭ ಯಮಸ್ವರೂಪಿಯಾಗಿ ಬಂದ ಬಿಎಂಟಿಸಿ ಬಸ್( BMTC)ಬೈಕ್‌ಗೆ ಡಿಕ್ಕಿ ಹೊಡೆದಿದ್ದು ಅಲ್ಲದೇ ಬಿದ್ದ ಬಾಲಕಿಯ ಮೇಲೆ ಬಿಎಂಟಿಸಿ ಬಸ್ ಹರಿದು ಬಾಲಕಿ ಸ್ಥಳದಲ್ಲೇ ಸಾವನ್ನಪಿದ(Death)ದಾರುಣ ಘಟನೆ ನಡೆದಿದೆ.
ಬೆಂಗಳೂರಿನ (Bengaluru) ಉತ್ತರಹಳ್ಳಿ ಮುಖ್ಯರಸ್ತೆಯ ಪದ್ಮಾವತಿ ಸಿಲ್ಕ್ ಶೋ ರೂಂ ಬಳಿ ನಡೆದಿದ್ದು, ಮೃತ ಬಾಲಕಿಯನ್ನು ಪೂರ್ವಿ ಎಂದು ಗುರುತಿಸಲಾಗಿದೆ. ಬಾಲಕಿಯ ತಂದೆ ಪ್ರಸನ್ನ ಸಿಸ್ಕೋ ಕಂಪನಿಯ ಉದ್ಯೋಗಿಯಾಗಿದ್ದು, ಎಂದಿನಂತೆ ಮಗಳು ಪೂರ್ವಿಯನ್ನೂ ಬೆಂಗಳೂರು ಇಂಟರ್ ನ್ಯಾಶನಲ್ ಪಬ್ಲಿಲ್ ಸ್ಕೂಲ್ ಬಳಿ ಬಿಡಲು ಬೈಕ್ ನಲ್ಲಿ ಸಾಗುತ್ತಿದ್ದ ಸಂದರ್ಭ ದುರ್ಘಟನೆ ಸಂಭವಿಸಿದೆ.
ಈ ದುರ್ಘಟನೆಯಲ್ಲಿ ಸಾವನ್ನಪ್ಪಿದ ಶಾಲಾ ಬಾಲಕಿ ಆಗಿದ್ದಾಳೆ. ತಂದೆ ಪ್ರಸನ್ನ ಮಗಳನ್ನ ಶಾಲೆಗೆ ಬಿಡಲು ಬೈಕ್ ನಲ್ಲಿ ಕರೆದೊಯ್ಯುತ್ತಿದ್ದ ಸಂದರ್ಭ ವೇಗವಾಗಿ ಬಂದ ಬಸ್ ಬೈಕ್ ಡಿಕ್ಕಿ ಹೊಡೆದಿದ್ದು(Accident )ಈ ವೇಳೆ ಪೂರ್ವಿ (4 ವರ್ಷ 6 ತಿಂಗಳು) ನೆಲಕ್ಕೆ ಬಿದ್ದಿದ್ದು, ಬಿದ್ದ ಬಾಲಕಿ ಮೇಲೆ ವೇಗವಾಗಿ ಬಂದ ಬಿಎಂಟಿಸಿ ಬಸ್ ಹರಿದು ಸ್ಥಳದಲ್ಲೇ ಬಾಲಕಿ ಮೃತಪಟ್ಟ ಘಟನೆ ವರದಿಯಾಗಿದೆ. ಇದೇ ವೇಳೆ,ಅದೃಷ್ಟವಶಾತ್ ತಂದೆ ಪಾರಾಗಿದ್ದು, ಮನೆಯಲ್ಲಿ ಶೋಕ ಮಡುಗಟ್ಟಿದೆ. ಈ ಘಟನೆ ಕುರಿತಂತೆ ಕುಮಾರಸ್ವಾಮಿ ಲೇಔಟ್ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಬಂದು ಪರಿಶೀಲನೆ ನಡೆಸಿ ಕುಮಾರಸ್ವಾಮಿ ಲೇಔಟ್ ಪೊಲೀಸರು ಬಸ್ ಚಾಲಕನನ್ನ ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: Kadaba: ನದಿಯ ಬದಿ ಬೈಕ್ ನಿಲ್ಲಿಸಿ ವ್ಯಕ್ತಿ ಅದೃಶ್ಯ: ಹುಡುಕಾಟ ನಿರತ ಅಗ್ನಿ ಶಾಮಕ ಮತ್ತು ಶೌರ್ಯ ತಂಡ
