Home » Girl Nude Photo: ಪ್ರಿಯತಮೆ ಪಾಲಿಗೆ ವಿಕೃತ ಕಾಮಿಯಾದ ಪ್ರಿಯತಮ – ತನ್ನವಳ ನಗ್ನ ಫೋಟೋವನ್ನೇ ಎಲ್ಲರಿಗೂ ಹಂಚಿದ

Girl Nude Photo: ಪ್ರಿಯತಮೆ ಪಾಲಿಗೆ ವಿಕೃತ ಕಾಮಿಯಾದ ಪ್ರಿಯತಮ – ತನ್ನವಳ ನಗ್ನ ಫೋಟೋವನ್ನೇ ಎಲ್ಲರಿಗೂ ಹಂಚಿದ

2 comments
Girl Nude Photo

Girl Nude Photo: ದಿನಂಪ್ರತಿ ಅದೆಷ್ಟೋ ಕ್ರಿಮಿನಲ್ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಬೆಂಗಳೂರಿನಲ್ಲಿ ಪ್ರಿಯಕರನೊಬ್ಬ ಅವನ ಪ್ರೇಯಸಿಯ ಪಾಲಿಗೆ ವಿಕೃತ ಕಾಮಿಯಾಗಿ(Psycho Lover) ಬಿಟ್ಟಿದ್ದಾನೆ.

ಈ ರೀತಿ ಕೃತ್ಯ ಎಸಗುತ್ತಿದ್ದ ಆರೋಪಿಯನ್ನು ತಮಿಳುನಾಡಿನ ವೆಲ್ಲೂರು ಮೂಲದವನಾದ ಸಂಜಯ್‌ ಕುಮಾರ್‌ (26) ಎಂದು ಗುರುತಿಸಲಾಗಿದೆ. ಈತನ ಪ್ರೇಯಸಿ ಹಾಗೂ ಈತ ಬಿ ಪ್ಲಾನಿಂಗ್ ಕೊರ್ಸ್ ಮಾಡುತ್ತಿದ್ದರಂತೆ. ಸಂಜಯ್‌ ಹಾಗೂ ಆತನ ಸ್ನೇಹಿತರು 12 ಜನ ಸೇರಿಕೊಂಡು ಟೆಲಿಗ್ರಾಂ ಗ್ರೂಪ್ ಮಾಡಿಕೊಂಡಿದ್ದು, ಅದರಲ್ಲಿ ಮೊದಲಿಗೆ ಅರೆನಗ್ನ ಪೋಟೊಗಳನ್ನು( Girl Nude Photo) ಶೇರ್ ಮಾಡುತ್ತಿದ್ದರು. ಆ ಪೋಟೊಗಳ ಜತೆಗೆ, ಯುವತಿಯರ ಅರೆನಗ್ನ ಫೋಟೋಗಳನ್ನು ಸೃಷ್ಟಿಸುವ ಸಲುವಾಗಿ ತಾನೇ ಪ್ರೋಗ್ರಾಂ ಬರೆದು bot ಹೆಸರಿನ ಆ್ಯಪ್‌ ಸಿದ್ಧಪಡಿಸಿದ್ದನಂತೆ. ಇದರಲ್ಲಿ ಅಕ್ಕಪಕ್ಕದ ಯುವತಿಯರ ಅಶ್ಲೀಲ ಸೃಷ್ಟಿಸಿ ಗ್ರೂಪ್‌ನಲ್ಲಿ ಹಂಚಿ ವಿಕೃತಕಾಮಿ ಖುಶಿ ಪಡುತ್ತಿದ್ದ. ಈ ಫೋಟೋಗಳನ್ನು ಇನ್‌ಸ್ಟಾದಲ್ಲೂ, ಟೆಲಿಗ್ರಾಂ ಗ್ರೂಪ್‌ಗಳಲ್ಲೂ ಶೇರ್ ಮಾಡುತ್ತಿದ್ದ. ಈತ ನೂರಾರು ಯುವತಿಯರ ಫೋಟೋಗಳನ್ನು ನಗ್ನ ವಾಗಿ ಮಾರ್ಪಡಿಸಿದ್ದಲ್ಲದೆ, ತನ್ನ ಗರ್ಲ್‌ಫ್ರೆಂಡ್‌ ಫೋಟೋವನ್ನು ಕೂಡ ಮಾರ್ಪಡಿಸಿ ಗ್ರೂಪ್‌ಗಳಲ್ಲಿ ಹಂಚಿ ವೈರಲ್‌ ಮಾಡಿದ್ದಾನೆ.

ಶೇರ್ ಆಗುತ್ತಿದ್ದಂತೆ ಪೋಟೊ ನೋಡಿ ಸಂಜಯ್ ಪ್ರೇಯಸಿ ಶಾಕ್ ಆಗಿ, ಆಗ್ನೇಯ ವಿಭಾಗದ ಸೆನ್ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾಳೆ.ಈ ಸಂದರ್ಭ ಸಂಜಯ್‌ ಕುಮಾರ್‌ ಕೂಡ ಪೊಲೀಸ್ ಠಾಣೆಗೆ ಬಂದಿದ್ದಾಳೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ತನಿಖೆ ನಡೆಸಿದಾಗ ಪ್ರಿಯಕರನೇ ಇನ್‌ಸ್ಟಾದಲ್ಲಿ ಶೇರ್ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಸದ್ಯ, ಆರೋಪಿ ಸಂಜಯ್ ಕುಮಾರ್‌ನನ್ನು ಬಂಧಿಸಲಾಗಿದ್ದು, ಆತನಿಂದ 2 ಮೊಬೈಲ್, ಲ್ಯಾಪ್‌ಟಾಪ್, ಹಾರ್ಡ್ ಡಿಸ್ಕ್, ಪೆನ್ ಡ್ರೈವ್ ವಶ ಪಡಿಸಿಕೊಳ್ಳಲಾಗಿದೆ. ಈ ಪ್ರಕರಣ ತನಿಖೆ ನಡೆಸಿದ ಸಂದರ್ಭ bot ಆ್ಯಪ್‌ ವಿಚಾರ ಬಯಲಿಗೆ ಬಂದಿದೆ.

ಇದನ್ನೂ ಓದಿ: BBK 10: ಬಿಗ್‌ಬಾಸ್‌ ಮನೆಗೆ ಹೋದ MLA ಪ್ರದೀಪ್‌ ಈಶ್ವರ್‌ ಪಡೆದ ಸಂಭಾವನೆ ಎಷ್ಟು ಗೊತ್ತೇ?

You may also like

Leave a Comment