Home » KRS Reservoir: ಬೆಂಗಳೂರಿಗೆ ತಟ್ಟಲಿದ್ಯಾ ನೀರಿನ ಅಭಾವ? ಕೆಆರ್​ಎಸ್​ ಜಲಾಶಯದ ನೀರಿನ ಮಟ್ಟ ಕುಸಿತ‌‌..!

KRS Reservoir: ಬೆಂಗಳೂರಿಗೆ ತಟ್ಟಲಿದ್ಯಾ ನೀರಿನ ಅಭಾವ? ಕೆಆರ್​ಎಸ್​ ಜಲಾಶಯದ ನೀರಿನ ಮಟ್ಟ ಕುಸಿತ‌‌..!

0 comments
KRS Reservoir

KRS Reservoir: ಕರ್ನಾಟಕ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಕೆಆರ್​ಎಸ್​ ಜಲಾಶಯದ ನೀರಿನ ಮಟ್ಟ ಕುಸಿತ‌‌ಗೊಂಡಿದ್ದು, ಬೆಂಗಳೂರಲ್ಲೂ ನೀರಿನ ಸಮಸ್ಯೆ ಎದುರಾಗುವ ಎಲ್ಲಾ ಸಾಧ್ಯತೆಗಳಿವೆ ಎಂಬ ಶಾಕಿಂಗ್‌ ಮಾಹಿತಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾವೇರಿ ನೀರಾವರಿ ನಿಗಮಕ್ಕೆ ಪತ್ರ ಬರೆದಿದೆ.

ರಾಜ್ಯಾದ್ಯಂತ ಮುಂಗಾರು ಮಳೆಯ ಪ್ರವೇಶ ವಿಳಂಬವಾದಂತೆ ನೀರಿನ ಸಮಸ್ಯೆ ಸಾಮಾನ್ಯವಾಗಿ ಹೆಚ್ಚಾಗುತ್ತದೆ ಅದರಲ್ಲೂ ಗಾರ್ಡನ್‌ ಸಿಟಿ ಬೆಂಗಳೂರಿಗೆ ಬೆಲೆ ಏರಿಕೆ ನಡುವೆ ಇದೀಗ ನೀರಿನ ಅಭಾವದಂತ ಹೊಸ ಸಂಕಷ್ಟ ಎದುರಾಗುವ ಎಲ್ಲಾ ಸಾಧ್ಯತೆಗಳಿಗೆ ಈಗಾಗಲೇ KRS ಜಲಾಶಯದಲ್ಲಿ (KRS Reservoir) ಕೇವಲ 11 TMC ನೀರು ಮಾತ್ರ ಲಭ್ಯವಾಗಲಿದ್ದು, ಕಾವೇರಿ ನೀರಿನ ಸರಬರಾಜಿನಲ್ಲಿ ಭಾರೀ ವ್ಯತ್ಯಾಸ ಕಾಣಲಿದೆ.

ಬೆಂಗಳೂರು ಜನತೆ ಪ್ರತಿನಿತ್ಯ 1,450 ಮಿಲಿಯನ್ ಲೀಟರ್ ನೀರು ಅತ್ಯಗತ್ಯವಾಗಿದೆ. ಕಾವೇರಿ ನೀರಾವರಿ ನಿಗಮ ಮಂಡಳಿ ಗೆ ” ಜೂನ್, ಜುಲೈ ,ಆಗಸ್ಟ್​​ವರೆಗೆ ಅಗತ್ಯ ಇರುವ ಕನಿಷ್ಠ 4.8 ಟಿಎಂಸಿ ಕಾಯ್ದಿರಿಸಿ “ಬೆಂಗಳೂರು ಜಲಮಂಡಳಿಯ ಮುಖ್ಯ ಇಂಜಿನಿಯರ್​ ಪತ್ರ ಬರೆಯುವ ಮೂಲಕ ಎಚ್ಚರಿಕೆಯ ಸೂಚನೆ ನೀಡಲಾಗಿದೆ.

ಬೆಂಗಳೂರು ನಗರಕ್ಕೆ ನಿರಂತರ ನೀರು ಪೂರೈಕೆಗೆ ತಿಂಗಳಿಗೆ 1.6 ಟಿಎಂಸಿ ನೀರು ಬೇಕು. ಜೂನ್‌ನಿಂದ ಆಗಸ್ಟ್‌ವರೆಗೆ ಬೆಂಗಳೂರು ನಗರಕ್ಕೆ 4.8 ಟಿಎಂಸಿ ನೀರು ಬೇಕಾಗುತ್ತದೆ. ಬೆಂಗಳೂರಿನ ಜನರಿಗೆ ನೀರು ಪೂರೈಸಲು, ಅಣೆಕಟ್ಟಿನಲ್ಲಿ ನಗರಕ್ಕೆ ನೀರು ಕಾಯ್ದಿರಿಸುವಂತೆ ಮುನ್ಸೂಚನೆಯನ್ನು ನೀಡಲಾಗಿದೆ. ಈ ನಿಟ್ಟಿನಲ್ಲಿ ಆದರೂ ನೀರಿನ ಉಪಯೋಗವನ್ನು ಸ್ವಲ್ಪ ಜಾಗರೂಕತೆ ವಹಿಸೋದು ಸೂಕ್ತ. ಮುಂದಿನ ದಿನಗಳಲ್ಲಿ ನೀರಿನ ದೊಡ್ಡ ಅಭಾವ ಎದುರಾಗುವ ಮುನ್ನವೇ ಸ್ವಯಂ ಮುನ್ನೆಚ್ಚರಿಕೆ ಕಂಡು ಕೊಳ್ಳುವುದರ ಬಗ್ಗೆ ಜನರು ಗಮನಹರಿಸಬೇಕಾಗಿದೆ.
ಇಡೀ ದೇಶದಲ್ಲಿ ನೀರಿನ ಬವಣೆಗೆ ಸಿಲುಕುವ ಮೊದಲ ನಗರ ಬೆಂಗಳೂರು ಎನ್ನುವ ಆತಂಕಕಾರಿ ವರದಿಯೊಂದನ್ನು ವಿಶ್ವಸಂಸ್ಥೆ ಮತ್ತು ಏಷ್ಯನ್‌ ಡೆವಲಪ್‌ಮೆಂಟ್‌ ಬ್ಯಾಂಕ್‌ ಅಧ್ಯಯನವನ್ನಾಧರಿಸಿದ ವರದಿ ಬಹಿರಂಗ ಪಡಿಸಿತ್ತು ಅಲ್ಲದೇ ಈ ಬಗ್ಗೆ ಈ ಹಿಂದೆಯೇ ಚಿಂತನ ಮಂಥನ ನಡೆಸಬೇಕಾದ ತುರ್ತು ಸಭೆಯನ್ನು ಮಾಡಲಾಗಿತ್ತು ಎಂದು ತಿಳಿಯಬಹುದಾಗಿದೆ.

You may also like

Leave a Comment