Home » ಬೆಂಗಳೂರು: ರೈಲು ನಿಲ್ದಾಣದ ಪ್ಲಾಸ್ಟಿಕ್ ಡ್ರಮ್‌ನಲ್ಲಿ ಮಹಿಳೆಯ ಶವ ಪತ್ತೆ

ಬೆಂಗಳೂರು: ರೈಲು ನಿಲ್ದಾಣದ ಪ್ಲಾಸ್ಟಿಕ್ ಡ್ರಮ್‌ನಲ್ಲಿ ಮಹಿಳೆಯ ಶವ ಪತ್ತೆ

by Praveen Chennavara
0 comments

Bengaluru railway station :ಬೆಂಗಳೂರು : ರೈಲು ನಿಲ್ದಾಣದಲ್ಲಿ (Bengaluru railway station) ಪ್ಲಾಸ್ಟಿಕ್ ಡ್ರಮ್‌ ಒಂದರಲ್ಲಿ ಮಹಿಳೆಯ ಶವ ಪತ್ತೆಯಾದ ಬಗ್ಗೆ ವರದಿಯಾಗಿದೆ.

ಬೆಂಗಳೂರಿನ ಬೈಯಪ್ಪನಹಳ್ಳಿ ರೈಲು ನಿಲ್ದಾಣದ ಪ್ಲಾಸ್ಟಿಕ್ ಡ್ರಮ್‌ನಲ್ಲಿ ಮಹಿಳೆಯ ಶವ ಪತ್ತೆಯಾಗಿದೆ.

ಸೋಮವಾರ ಬೆಳಗ್ಗೆ 11 ಗಂಟೆಯ ಸುಮಾರಿಗೆ ಮೂವರು ದುಷ್ಕರ್ಮಿಗಳು ಶವವಿರುವ ನೀಲಿ ಡ್ರಮ್ ಅ​ನ್ನು ಆಟೋದಲ್ಲಿ‌ ತಂದು ನಗರದ ಬೈಯಪ್ಪನಹಳ್ಳಿ ರೈಲು ನಿಲ್ದಾಣದ ಪ್ರವೇಶ ದ್ವಾರದ ಬಳಿ ಇಟ್ಟು ಹೋಗಿದ್ದಾರೆ.

ಆರೋಪಿಗಳ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು,ಶವವನ್ನು ಬಟ್ಟೆಯಲ್ಲಿ ಸುತ್ತಿ ಡ್ರಮ್ ನಲ್ಲಿ ಹಾಕಿ ಮುಚ್ಚಳದಿಂದ ಮುಚ್ಚಲಾಗಿತ್ತು.

ಶವ ಯಾರದು ಎಂಬ ಬಗ್ಗೆ ಗುರುತು ಸಿಕ್ಕಿಲ್ಲ, ಸುಮಾರು 31 ರಿಂದ 35 ವರ್ಷ ವಯಸ್ಸಿನವರೆಂದು ಹೇಳಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ರೈಲ್ವೇ ಎಸ್ಪಿ ಸೌಮ್ಯಲತಾ, ಅವರು ,“ನಮಗೆ ನೀಲಿ ಡ್ರಮ್​ನಿಂದ ಕೊಳೆತ ವಾಸನೆ ಬರುತ್ತಿದೆ ಎಂದು ದೂರವಾಣಿ ಕರೆ ಬಂದಿತ್ತು. ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಶವ ಇರುವುದು ಗೊತ್ತಾಗಿದೆ” ಎಂದರು.

You may also like

Leave a Comment