Home » Bengaluru: ವಿಲೇಜ್‌ ಅಕೌಂಟೆಂಟ್‌ ನೇಣು ಬಿಗಿದು ಆತ್ಮಹತ್ಯೆ ; 22 ವರ್ಷದ ಯುವತಿಯ ಸಾವಿನ ಸುತ್ತ ಅನುಮಾನ ವ್ಯಕ್ತ!!

Bengaluru: ವಿಲೇಜ್‌ ಅಕೌಂಟೆಂಟ್‌ ನೇಣು ಬಿಗಿದು ಆತ್ಮಹತ್ಯೆ ; 22 ವರ್ಷದ ಯುವತಿಯ ಸಾವಿನ ಸುತ್ತ ಅನುಮಾನ ವ್ಯಕ್ತ!!

0 comments
Commits suicide

Commits suicide : ಯುವತಿಯೋರ್ವಳು ನೇಣು ಬಿಗಿದು ಆತ್ಮಹತ್ಯೆಗೆ (commits suicide ) ಶರಣಾಗಿರುವ ಘಟನೆ ಬೆಂಗಳೂರಿನ (Bengaluru) ಆನೇಕಲ್‌ನಲ್ಲಿ ನಡೆದಿದೆ. ಸದ್ಯ ಘಟನೆ ಕುರಿತು ಹಲವು ಅನುಮಾನಗಳು ವ್ಯಕ್ತವಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮೃತ ಯುವತಿಯನ್ನು ಅಲಿಯಾ ಅಂಜುಂ ಅಣ್ಣಿಗೇರಿ (22) ಎಂದು ಗುರುತಿಸಲಾಗಿದೆ. ಈಕೆ ಬಳ್ಳಾರಿ ಜಿಲ್ಲೆಯವಳಾಗಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸರ್ಜಾಪುರ ನಾಡ ಕಚೇರಿಯಲ್ಲಿ ವಿಲೇಜ್ ಅಕೌಂಟೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಳು ಎಂದು ಹೇಳಲಾಗಿದೆ.

ಅಲಿಯಾ ಆನೇಕಲ್ ಪಟ್ಟಣದ ಪೊಲೀಸ್ ಠಾಣೆ ಸಮೀಪದ ಮುನಿವೀರಪ್ಪ ಗಲ್ಲಿಯಲ್ಲಿ ಶ್ರೀನಿವಾಸ್ ರೆಡ್ಡಿ ಎಂಬುವವರ ಕಟ್ಟಡದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ತಂಗಿ ಕೆಲಸ ಮಾಡುತ್ತಿದ್ದಾಳೆ. ಆಕೆಯ ಮದುವೆ ಆಗುವವರೆಗೂ ತಾನು ಆಕೆಯ ಜೊತೆಯಲ್ಲಿರುತ್ತೇನೆ ಎಂದು ಅಣ್ಣನೂ ಕೂಡ ತಂಗಿಯೊಂದಿಗೆ ಬಂದು ಆನೇಕಲ್ ಪಟ್ಟಣದಲ್ಲಿ ಪ್ರತ್ಯೇಕವಾಗಿ ಮನೆ ಮಾಡಿಕೊಂಡು ವಾಸವಾಗಿದ್ದರು.

ಆದರೆ, ಅಂದು ಯಾವುದೇ ಕಾರ್ಯ ನಿಮಿತ್ತ ಅಲಿಯಾ ಅಂಜುಂ ಅವರ ಅಣ್ಣ, ತಮ್ಮ ಊರು ಬಳ್ಳಾರಿಗೆ ಹೋಗಿದ್ದರು. ಯುವತಿಗೆ
ಭಾನುವಾರ ರಜಾ ದಿನವಾದ್ದರಿಂದ ಮನೆಯಲ್ಲಿಯೇ ಇದ್ದರು. ಅಣ್ಣಾ ಕೂಡ ಇರಲಿಲ್ಲ. ಮನೆಯಲ್ಲಿ ಒಬ್ಬಳೇ ಇರುವ ವೇಳೆ, ಫ್ಯಾನಿಗೆ ಸೀರೆಯನ್ನು ಕಟ್ಟಿ ನೇಣಿಗೆ ಶರಣಾಗಿದ್ದಾಳೆ.

ಯುವತಿ ಆತ್ಮಹತ್ಯೆ ಮಾಡಿಕೊಂಡ ವಿಚಾರ ಕಟ್ಟಡದ ಮಾಲೀಕರ ಗಮನಕ್ಕೆ ಬಂದು, ತಕ್ಷಣವೇ ಆನೇಕಲ್‌ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಯುವತಿಯ ಮೃತದೇಹವನ್ನು ಇಳಿಸಿ, ನಂತರ ದೇಹ ಮತ್ತು ಸ್ಥಳವನ್ನು ಪರಿಶೀಲನೆ ಮಾಡಿದ್ದಾರೆ.

ವಿಚಾರ ತಿಳಿದ ಹೆತ್ತವರಿಗೆ ಆಘಾತ ಉಂಟಾಗಿದೆ. ಸದ್ಯ ಯುವತಿಯ
ಆತ್ಮಹತ್ಯೆಗೆ ಕಾರಣ ಏನೆಂದು ತಿಳಿದಿಲ್ಲ. ಪೊಲೀಸರು ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಇದರಿಂದ ಸಾವಿಗೆ ಕಾರಣ ಏನೆಂದು ತಿಳಿದುಬರಲಿದೆ. ಹಾಗೇ, ಪೊಲೀಸರು ಕೂಡ ಯುವತಿಯ ಸಾವಿನ ಕುರಿತು ತನಿಖೆ ನಡೆಸುತ್ತಿದ್ದಾರೆ.

You may also like

Leave a Comment