Home » ಕಾರ್ಮಿಕರಿಗೆ ಮತ್ತೊಂದು ಸಿಹಿ ಸುದ್ದಿ | ಇನ್ನು ಮುಂದೆ ಸಿಗಲಿದೆ ಉಚಿತ ಬಸ್ ಪಾಸ್ ಸೌಲಭ್ಯ

ಕಾರ್ಮಿಕರಿಗೆ ಮತ್ತೊಂದು ಸಿಹಿ ಸುದ್ದಿ | ಇನ್ನು ಮುಂದೆ ಸಿಗಲಿದೆ ಉಚಿತ ಬಸ್ ಪಾಸ್ ಸೌಲಭ್ಯ

0 comments

ಕಾರ್ಮಿಕರಿಗೆ ಇತ್ತೀಚಿಗೆ ಒಂದರ ಮೇಲೊಂದು ಸಿಹಿಸುದ್ದಿ ಸಿಗುತ್ತಿದೆ. ಇದೀಗ ಇನ್ನು ಒಂದು ಹೆಜ್ಜೆ ಮುಂದೆ ಹೋಗಿರುವ ಬಿಎಂಟಿಸಿ, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಉಚಿತವಾಗಿ ಬಸ್ ಪಾಸ್ ವಿತರಿಸಲು ಮುಂದಾಗಿದೆ.

ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಸಹಯೋಗದಲ್ಲಿ ಬಿಎಂಟಿಸಿಯಿಂದ ಕಾರ್ಮಿಕರಿಗೆ ಬಸ್ ಪಾಸ್ ನೀಡಲಾಗುತ್ತದೆ. ಕಾರ್ಮಿಕರು ಬೋರ್ಡ್ ನಿಂದ ನೀಡಲಾದ ನೋಂದಾಯಿತ ಗುರುತಿನ ಚೀಟಿ ಮತ್ತು ಆಧಾರ್ ಕಾರ್ಡ್ ಪ್ರತಿ, ಎರಡು ಸ್ಟಾಂಪ್ ಸೈಜ್ ಫೋಟೋ ನೀಡಿ ಪಾಸ್ ಗಳನ್ನು ಪಡೆಯಬಹುದಾಗಿದೆ.

ಕೆಂಪೇಗೌಡ ಬಸ್ ನಿಲ್ದಾಣ ಹಾಗೂ ಶಿವಾಜಿನಗರ, ಯಶವಂತಪುರ, ಬನಶಕರಿ, ವಿಜಯನಗರ, ವೈಟ್‌ಫೀಲ್ಡ್ ಶಾಂತಿನಗರ, ದೊಮ್ಮಲೂರು, ಕೆಂಗೇರಿ, ಜಯನಗರ, ಕೋರಮಂಗಲದ ಬಸ್ ಟರ್ಮಿನಲ್‌ಗಳು ಸೇರಿದಂತೆ 20 ಸ್ಥಳಗಳಲ್ಲಿ ಪಾಸ್‌ಗಳನ್ನು ವಿತರಿಸಲಾಗುವುದು ಎಂದು ಹೇಳಲಾಗಿದೆ.

You may also like

Leave a Comment