Home » BYJU’S: ಸಂಕಷ್ಟ ಹಾದಿಯಲ್ಲಿ ಬೈಜೂಸ್ : 25 ರಷ್ಟು ಸಿಬ್ಬಂದಿಗಳಿಗೆ ಮಾತ್ರ ವೇತನ ಪಾವತಿ

BYJU’S: ಸಂಕಷ್ಟ ಹಾದಿಯಲ್ಲಿ ಬೈಜೂಸ್ : 25 ರಷ್ಟು ಸಿಬ್ಬಂದಿಗಳಿಗೆ ಮಾತ್ರ ವೇತನ ಪಾವತಿ

1 comment
BYJU'S

ದಿನದಿಂದ ದಿನಕ್ಕೆ ಆನ್ಲೈನ್ ಶಿಕ್ಷಣ ಸಂಸ್ಥೆ ಬೈಜೂಸ್ ಸಂಕಷ್ಟಕ್ಕೆ ಸಿಲುಕುತ್ತಿದೆ. ಇದರ ಮುಂದುವರೆದ ಭಾಗವಾಗಿ ಹಣಕಾಸಿನ ತೊಂದರೆಯಿಂದ ಬಳಲುತ್ತಿರುವುದರಿಂದ ತನ್ನ ನೌಕರರ ಪೈಕಿ ಕಡಿಮೆ ವೇತನ ಪಡೆಯುವ ಶೇ.25ರಷ್ಟು ಮಂದಿಗೆ ಮಾತ್ರ ಪೂರ್ಣ ವೇತನ ಬಿಡುಗಡೆ ಮಾಡಿದೆ. ಇದರೊಂದಿಗೆ ಉಳಿದ ನೌಕರರಿಗೆ ಅಲ್ಪ ಪ್ರಮಾಣದ ಸಂಬಳ ಪಾವತಿಸಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಇದನ್ನೂ ಓದಿ: ESCOM Online Services: ಇನ್ನು ಹತ್ತು ದಿನ ಎಸ್ಕಾಂ ಆನ್ಲೈನ್ ಸೇವೆಗಳು ಬಂದ್

ತನ್ನ ಉದ್ಯೋಗಿಗಳಿಗೆ ಬೈಜೂಸ್ ಆಡಳಿತ ಮಂಡಳಿ ಪತ್ರ ಬರೆದಿದ್ದು. ಕಡಿಮೆ ವೇತನ ಪಡೆವ ನೌಕರರಿಗೆ ಶುಕ್ರವಾರ ರಾತ್ರಿ ಸಂಬಳ ಬಿಡುಗಡೆ ಮಾಡಲಾಗಿದೆ. ಮಿಕ್ಕವರಿಗೆ ಸ್ವಲ್ಪ ಪ್ರಮಾಣದ ಹಣ ಹಾಕಿದ್ದೇವೆ. ಮುಂದೆ ಪೂರ್ತಿ ಸಂಬಳ ಪಾವತಿಸುತ್ತೇವೆ. ಹಣಕಾಸಿನ ಸಮಸ್ಯೆಯಿಂದಾಗಿ ಸಂಬಳ ಪಾವತಿಯಾಗಿರಲಿಲ್ಲ ಕ್ಷಮೆ ಇರಲಿ’ ಎಂದು ಸಿಬ್ಬಂದಿಯನ್ನು ಕ್ಷಮೆ ಯಾಚಿಸಿದೆ.

You may also like

Leave a Comment