Car accident: ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ ಮತ್ತೆ ಮರಣ ಪ್ರಯಾಣ ಮುಂದುವರೆದಿದೆ. ಇಂದು ಮತ್ತೊಂದು ಭೀಕರ ಅಪಘಾತ (Car accident ) ಸಂಭವಿಸಿದ್ದು ಸ್ವಿಫ್ಟ್ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹೆಚ್ಚಿನ ಸೇಫ್ಟಿ ಫೀಚರ್ ಹೊಂದಿರುವ ಟಾಟಾ ನೆಕ್ಸಾನ್ ಕಾರಿನಲ್ಲಿದ್ದ ದಂಪತಿ ಸದ್ಯದ ಮಟ್ಟಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಂಡ್ಯ ಜಿಲ್ಲೆ ಮದ್ದೂರು ಬಳಿಯ ಕಿಟ್ಟಿ ಡಾಬಾ ಬಳಿ ಈ ಅಪಘಾತ ಸಂಭವಿಸಿದೆ. ಅಲ್ಲಿ ಟಾಟಾ ನೆಕ್ಸಾನ್ ಹಾಗೂ ಸ್ವಿಫ್ಟ್ ಡಿಜೈರ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು ಅಪಘಾತದಲ್ಲಿ ಸ್ವಿಫ್ಟ್ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು ಕಾರಿನಲ್ಲಿದ್ದ ಮೂವರು ಸಾವನ್ನಪ್ಪಿದ್ದಾರೆ.
ಮೃತರನ್ನು ಉತ್ತರ ಪ್ರದೇಶದ 50 ವರ್ಷದ ನೀರಜ್ ಕುಮಾರ್ ಅವರ ಪತ್ನಿ 47 ವರ್ಷದ ಸೆಲ್ವಿ ಮತ್ತು ಮಂಡ್ಯದ ಕಾರು ಚಾಲಕ 35 ವರ್ಷದ ನಿರಂಜನ್ ಎಂದು ತಿಳಿದು ಬಂದಿದೆ. ಕಾರು ಚಾಲಕನ ಅಜಾಗರೂಕತೆ ಈ ಘಟನೆಗೆ ಕಾರಣ ಎನ್ನಲಾಗಿದೆ.
ಇದೀಗ ಮೃತ ನೀರಜ್ ಕುಮಾರ್ ಹಾಗೂ ಪತ್ನಿ ಬೆಂಗಳೂರಿನಿಂದ ಮೈಸೂರಿಗೆ ಬಾಡಿಗೆ ಕಾರಿನಲ್ಲಿ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಮದ್ದೂರು ಮಾರ್ಗವಾಗಿ ಮಡಿಕೇರಿಗೆ ತೆರಳುತ್ತಿದ್ದ ವೇಳೆ ರಸ್ತೆಯಲ್ಲಿ ನಿಂತಿದ್ದ ನೀರಿನ ಮೇಲೆ ಚಕ್ರ ಹರಿದಾಗ ಬ್ಯಾಲನ್ಸ್ ತಪ್ಪಿ ಅಪಘಾತ ಸಂಭವಿಸಿದೆ. ದುರ್ಘಟನೆ ಸಂಭವಿಸುತ್ತಲೇ ನೀರಜ್ ಕುಮಾರ್, ಪತ್ನಿ ಸೆಲ್ವಿ ಹಾಗೂ ಚಾಲಕ ನಿರಂಜನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಪುತ್ರ ಶ್ರೀವತ್ಸಗೆ ಗಂಭೀರ ಗಾಯವಾಗಿದ್ದು,ಆತನನ್ನು ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಅತ್ತ ಅಪಘಾತದಲ್ಲಿ ಟಾಟಾ ನೆಕ್ಸಾನ್ ಕಾರಿನಲ್ಲಿದ್ದ ಪತಿ-ಪತ್ನಿಗೆ ಗಂಭೀರಗಳಾಗಿದ್ದು ಅವರನ್ನು ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನು ಓದಿ: Adipurush movie ban: ದೇಶಾದ್ಯಂತ ಸಂಚಲನ ಸೃಷ್ಟಿಸಿದ ‘ಆದಿಪುರುಷ್’ ಸಿನಿಮಾ ಬ್ಯಾನ್.. !? ಏನಿದು ಹೊಸ ಸಮಾಚಾರ!!
