Home » Crime News: ತನ್ನ ಇಬ್ಬರು ಮಕ್ಕಳ ಕೊಂದ ತಾಯಿ; ಇದೀಗ ಪಶ್ಚಾತ್ತಾಪ

Crime News: ತನ್ನ ಇಬ್ಬರು ಮಕ್ಕಳ ಕೊಂದ ತಾಯಿ; ಇದೀಗ ಪಶ್ಚಾತ್ತಾಪ

1 comment
Crime

Crime News: ಜಾಲಹಳ್ಳಿ ಬಳಿಯ ರಾಮಭೋವಿ ಕಾಲೊನಿಯಲ್ಲಿ ತನ್ನ ಇಬ್ಬರು ಮಕ್ಕಳನ್ನು ನಿರ್ದಯವಾಗಿ ಕೊಲೆ ಮಾಡಿದ್ದ ಆರೋಪಿ ಗಂಗಾದೇವಿ, ಮಕ್ಕಳು ತನ್ನಂತೆ ಜೀವನದಲ್ಲಿ ಕಷ್ಟ ಪಡಬಾರದೆಂಬ ಕಾರಣಕ್ಕೆ ಅವರನ್ನು ಕೊಲೆ ಮಾಡಿದ್ದಾಗಿ ಪೊಲೀಸರ ವಿಚಾರಣೆ ವೇಳೆ ಹೇಳಿಕೆ ಕೊಟ್ಟಿದ್ದಾಳೆ.

ಇದನ್ನೂ ಓದಿ: Temple Facts: ದೇವಸ್ಥಾನದಲ್ಲಿ ಗಂಟೆಯನ್ನು ಬಾರಿಸೋದು ಯಾಕೆ? ಇಲ್ಲಿದೆ ನಿಮಗಾಗಿ ಮಾಹಿತಿ

ಮಕ್ಕಳಾದ ಒಂಬತ್ತು ವರ್ಷದ ಗೌತಮ್ ಮತ್ತು ಏಳು ವರ್ಷದ ಲಕ್ಷ್ಮಿಯನ್ನು ಕೊಲೆ ಮಾಡಿದ್ದ ಗಂಗಾದೇವಿ, ಬಳಿಕ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಕೊಲೆ ವಿಚಾರ ತಿಳಿಸಿದ್ದಳು. ಆ ನಂತರ ಪೊಲೀಸರು ಆಕೆಯನ್ನು ಬಂಧಿಸಿದ್ದರು. ಪೊಲೀಸರ ವಿಚಾರಣೆ ವೇಳೆ ಪಶ್ಚಾತ್ತಾಪದ ಮಾತನಾಡಿರುವ ಗಂಗಾದೇವಿ, ‘ನಾನು ವೈವಾಹಿಕ ಜೀವನದಲ್ಲಿ ಪತಿಯಿಂದ ಸಾಕಷ್ಟು ನೋವು ಅನುಭವಿಸಿದ್ದೇನೆ. ಈ ದುಸ್ಥಿತಿ ಮಕ್ಕಳಿಗೆ ಬರಬಾರದೆಂಬ ಕಾರಣಕ್ಕೆ ಅವರನ್ನು ಕೊಲೆ ಮಾಡಿದೆ,” ಎಂದು ತಪ್ರೊಪ್ಪಿಕೊಂಡಿದ್ದಾಳೆ.

ಇದನ್ನೂ ಓದಿ: Maidan Film: ಮೈದಾನ್ ಹಿಂದಿ ಚಲನಚಿತ್ರ ಪ್ರದರ್ಶನ ಪ್ರಕರಣ; ಹೈಕೋರ್ಟ್ ನೀಡಿತು ಹಸಿರು ನಿಶಾನೆ

ಕೌಟುಂಬಿಕ ಕಲಹದ ಕಾರಣಕ್ಕೆ ಗಂಗಾದೇವಿ ಪತಿಯಿಂದ ದೂರವಾದ ನಂತರ ಮಕ್ಕಳು ಮತ್ತು ತನ್ನ ತಾಯಿಯೊಂದಿಗೆ ರಾಮ್ ಭೋವಿ ಕಾಲೊನಿಯಲ್ಲಿ ವಾಸವಾಗಿದ್ದಳು. ಆಕೆಯ ತಾಯಿ ಕೆಲಸದ ನಿಮಿತ್ತ ಮಂಗಳವಾರ (2.9) ಊರಿಗೆ ಹೋಗಿದ್ದರಿಂದ ಗಂಗಾದೇವಿ ಮತ್ತು ಮಕ್ಕಳು ಮಾತ್ರ ಮನೆಯಲ್ಲಿದ್ದರು. ಆರೋಪಿಯು ಇದೇ ಸರಿಯಾದ ಸಮಯವೆಂದು ನಿರ್ಧರಿಸಿ, ಮಂಗಳವಾರ ರಾತ್ರಿ ಮಕ್ಕಳಿಬ್ಬರು ನಿದ್ದೆ ಮಾಡುತ್ತಿದ್ದಾಗ ಮುಖಕ್ಕೆ ತಲೆ ದಿಂಬು ಇಟ್ಟು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಗಂಗಾದೇವಿ ಮಕ್ಕಳ ಅಂತ್ಯಕ್ರಿಯೆಯ ವಿಧಿವಿಧಾನ ಪೂರೈಸಲು ಒಪ್ಪಲಿಲ್ಲ. ಮತ್ತೊಂದೆಡೆ ಗಂಗಾದೇವಿಯ ಪತಿ ನರೇಶ್, ಪೋಕ್ಲೋ ಪ್ರಕರಣದಲ್ಲಿ ಬಂಧಿತರಾಗಿ ಜೈಲಿನಲ್ಲಿದ್ದಾರೆ. ಹೀಗಾಗಿ, ಮರಣೋತ್ತರ ಪರೀಕ್ಷೆಯ ಬಳಿಕ ಮಕ್ಕಳ ಶವಗಳನ್ನು ನರೇಶ್ ರ ಪೋಷಕರಿಗೆ ಒಪ್ಪಿಸಲಾಯಿತು. ಅವರು ಮಕ್ಕಳ ಅಂತ್ಯಕ್ರಿಯೆ ನಡೆಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

You may also like

Leave a Comment