Home » Bengalore: ಪತ್ನಿ ತಡವಾಗಿ ಏಳ್ತಾಳೆ ಎಂದು ಪೊಲೀಸರ ಮೊರೆ ಹೋದ ಪತಿ ; ಅಷ್ಟಕ್ಕೂ ಏನೀ ಕಹಾನಿ?

Bengalore: ಪತ್ನಿ ತಡವಾಗಿ ಏಳ್ತಾಳೆ ಎಂದು ಪೊಲೀಸರ ಮೊರೆ ಹೋದ ಪತಿ ; ಅಷ್ಟಕ್ಕೂ ಏನೀ ಕಹಾನಿ?

0 comments
Bengalore

Bengalore: ಸಂಸಾರದಲ್ಲಿ ಏನಾದರೂ ಒಂದು ಜಗಳ ಇದ್ದೇ ಇರುತ್ತದೆ. ಈ ಜಗಳದಿಂದ ಅದೆಷ್ಟೋ ಜನ ಬೇರಾಗುತ್ತಾರೆ. ಇನ್ನು ಕೆಲವರು ಕೋರ್ಟ್ ಮೊರೆ ಹೋಗುತ್ತಾರೆ. ಸದ್ಯ ಈ ಘಟನೆ ಸ್ವಲ್ಪ ವಿಭಿನ್ನವಾಗಿದೆ. ಆದರೆ ಆಶ್ಚರ್ಯಕರವಾಗಿದೆ. ಹೌದು, ಕಮ್ರಾನ್ ಖಾನ್ ಎಂಬಾತ ತನ್ನ ಪತ್ನಿ ತಡವಾಗಿ ಏಳ್ತಾಳೆ ಎಂದು ಬೆಂಗಳೂರಿನ (Bengalore) ಬಸವನಗುಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಕಮ್ರಾನ್ ಖಾನ್ ತನ್ನ ಅಳಲನ್ನು ಪೊಲೀಸರ ಮುಂದೆ ದೂರಿನ ಮೂಲಕ ತೋಡಿಕೊಂಡಿದ್ದಾರೆ. ಖಾನ್ ತಾನು ರಾಯಲ್ ಆಗಿ ಜೀವನ ನಡೆಸಬೇಕು ಎಂದು ಆಯೇಷಾ ಫರ್ಹಿನ್ ಅನ್ನು ಮದುವೆಯಾಗಿದ್ದೆ ಎಂದು ಹೇಳಿದ್ದಾರೆ. ಆದರೆ ಆಕೆಗೆ ವಿವಾಹಕ್ಕೂ ಮುನ್ನ ಕಾಯಿಲೆಗಳಿದ್ದವು, ಇದನ್ನು ತಿಳಿಸದೇ ನನಗೆ ಕೊಟ್ಟು ಮದುವೆ ಮಾಡಿಸಿದ್ದಾರೆ. ಮದುವೆಯಾಗಿ ಐದು ವರ್ಷಗಳಾಗಿವೆ. ಆಕೆ ನನ್ನನ್ನು ಮದುವೆಯಾಗಿದ್ದೇ ಆಸ್ತಿ (property) ಲಪಟಾಯಿಸಲು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಮದುವೆಯಾದ (marriage) ಬಳಿಕ ತನ್ನ ಪತ್ನಿ ತಡವಾಗಿ ಎದ್ದೇಳ್ತಾಳೆ. ಆಕೆ ರಾತ್ರಿ ಮಲಗಿದ್ರೆ ಮಧ್ಯಾಹ್ನ 12-30ವರೆಗೂ ನಿದ್ದೆ ಮಾಡ್ತಾಳೆ‌. ಅಲ್ಲಿವರೆಗೂ ಏಳೋದಿಲ್ಲ. ಅಡುಗೆ (Cook) ಕೂಡ ಮಾಡುವುದಿಲ್ಲ. ಅಡುಗೆ, ಮನೆ ಕೆಲಸವೆಲ್ಲಾ ನನ್ನ ತಾಯಿಯೇ ಮಾಡುತ್ತಾರೆ. ಅಲ್ಲದೆ, ಆಯೇಷಾ 12-30ವರೆಗೂ ನಿದ್ದೆ ಮಾಡಿ, ಮತ್ತೆ ಸಂಜೆ 5-30‌ಕ್ಕೆ ಮಲಗುತ್ತಾಳೆ. ಏಳೋದು ರಾತ್ರಿ 9-30 ಕ್ಕೆ. ಒಂದು ಬಾರಿ ಅಲ್ಲ ಮದುವೆಯಾದಾಗಿನಿಂದ ಪ್ರತೀದಿನ ಇದೇ ರೀತಿ ಮಾಡುತ್ತಿದ್ದಾಳೆ. ಆಕೆಯ ಹಿಂಸೆಯಿಂದ ಬೇಸತ್ತು ಒಂದು ಬಾರಿ ಮನೆಕೆಲಸ ಮಾಡಲು ಹೇಳಿದ್ದಕ್ಕೆ ತನ್ನ ಜೊತೆ ಜಗಳವಾಡಿ ವಾರಗಟ್ಟಲೆ ತವರು ಮನೆಗೆ ಸೇರಿಕೊಂಡಿದ್ದಳು.

ಇದಿಷ್ಟೇ ಅಲ್ಲ ಹೆಂಡತಿಯು (Wife) ಕುಟುಂಬಸ್ಥರ ಮೂಲಕ ನಮ್ಮ ಮೇಲೆ ಹಲ್ಲೆ (Assault) ನಡೆಸಿದ್ದಾಳೆ. ತುಂಬಾ ಹಿಂಸೆ ನೀಡಿದ್ದಾಳೆ. ಹಾಗಾಗಿ ಪತ್ನಿ ಹಾಗೂ ಆಕೆಯ ಕುಟುಂಬಸ್ಥರ ಮೇಲೆ ಕ್ರಮ ಕೈಗೊಳ್ಳಿ ಎಂದು ಪತಿ ಕಮ್ರಾನ್ ಖಾನ್ ದೂರಿನಲ್ಲಿ ತಮ್ಮ ನೋವನ್ನು ಹೇಳಿಕೊಂಡಿದ್ದು, ಈ ಬಗ್ಗೆ ಪತ್ನಿ ಆಯೇಷಾ ಮಾವ ಆರಿಫುಲ್ಲ , ಅತ್ತೆ ಹೀನಾ ಕೌಸರ್, ಮೈದುನ ಮೊಹಮ್ಮದ್ ಮೋಯಿನ್ ವಿರುದ್ಧ ಪತಿ ಕಮ್ರಾನ್‌ ಖಾನ್‌ ಬಸವನಗುಡಿ‌ ಪೊಲೀಸ್ ಠಾಣೆಯಲ್ಲಿ (Basavanagudi Police Station) ಕಿರುಕುಳದ ದೂರು ನೀಡಿದ್ದು, ದೂರು ದಾಖಲಾಗಿದೆ.

You may also like

Leave a Comment