Home » T Ramesh Gowda arrested: ಬಿರಿಯಾನಿ ಬೇಕೆಂದು ಹಠ: ಕರ್ನಾಟಕ ರಕ್ಷಣಾ ಸೇನೆ ಅಧ್ಯಕ್ಷ ಬಂಧನ

T Ramesh Gowda arrested: ಬಿರಿಯಾನಿ ಬೇಕೆಂದು ಹಠ: ಕರ್ನಾಟಕ ರಕ್ಷಣಾ ಸೇನೆ ಅಧ್ಯಕ್ಷ ಬಂಧನ

by ಹೊಸಕನ್ನಡ
5 comments

T Ramesh Gowda arrested: ತನಗೆ ಬಿರಿಯಾನಿ ನೀಡಲಿಲ್ಲವೆಂಬ ಕಾರಣಕ್ಕೆ ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ, ರಕ್ಷಣೆಗೆ ಬಂದ ಪೊಲೀಸರ ಕರ್ತವ್ಯಕ್ಕೆ ಕೂಡಾ ಅಡ್ಡಿಪಡಿಸಿದ್ದ ಆರೋಪದಡಿ ಕರ್ನಾಟಕ ರಕ್ಷಣಾ ಸೇನೆ (ಕರಸೇ) ಸಂಸ್ಥಾಪಕ ಅಧ್ಯಕ್ಷ ಟಿ.ರಮೇಶ್‌ ಗೌಡರನ್ನು ಬೆಂಗಳೂರಿನ ಕೊಡಿಗೇಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ (T Ramesh Gowda arrested).

ಈ ಸಂಬಂಧ ಜೂನ್ 10 ರಂದು ರಾತ್ರಿ ನಡೆದಿರುವ ಘಟನೆಯ ಆಧಾರದಲ್ಲಿ ಹೋಟೆಲ್ ಸಹಾಯಕ ವ್ಯವಸ್ಥಾಪಕ ವಿದ್ಯಾನಂದ್ ಹಾಗೂ ಪಿಎಸ್‌ಐ ಎನ್‌.ವಿ. ಕೌಶಿಕ್ ಎಂಬವರು ಎರಡು ಪ್ರತ್ಯೇಕ ದೂರು ನೀಡಿದ್ದಾರೆ. ಈಗ ಎರಡು ಪ್ರತ್ಯೇಕ ಎಫ್‌ಐಆರ್ ದಾಖಲಿಸಿಕೊಂಡು ರಮೇಶ್‌ ಗೌಡರನ್ನು ಬಂಧಿಸಲಾಗಿದೆ. ಜತೆಗೆ ಈ ಕೃತ್ಯದ ವೇಳೆ ಆರೋಪಿ ಜೊತೆಗೆ ಇದ್ದ ಚಂದನ್ ರೆಡ್ಡಿ ಹಾಗೂ ಸುರೇಶ್ ರೆಡ್ಡಿ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಕೊಡಿಗೇಹಳ್ಳಿ ಠಾಣೆ ಪೊಲೀಸರು ಹೇಳಿದ್ದಾರೆ.

ಅಂದು, ಜೂನ್ 10 ರಂದು ರಮೇಶ್ ಹಾಗೂ ಬೆಂಬಲಿಗರು ಸಹಕಾರ ನಗರದಲ್ಲಿರುವ ಸ್ಟಾರ್ ಬಿರಿಯಾನಿ ಹೋಟೆಲ್‌ಗೆ ರಾತ್ರಿ ಹೋಗಿ, ಬಿರಿಯಾನಿ ಕೊಡುವಂತೆ ಹೇಳಿದ್ದರು. ಆದರೆ ಬಿರಿಯಾನಿ ಖಾಲಿ ಆಗಿತ್ತು. ಖಾಲಿ ಆಗಿರುವುದಾಗಿ Andu ಅಲ್ಲಿದ್ದ ವ್ಯವಸ್ಥಾಪಕ ವಿದ್ಯಾನಂದ್ ಹೇಳಿದ್ದರು. ಅಷ್ಟಕ್ಕೆ ಕೋಪಗೊಂಡಿದ್ದ ರಮೇಶ್, ‘ನಾನು ಕರ್ನಾಟಕ ರಕ್ಷಣಾ ಸೇನೆಯ ಅಧ್ಯಕ್ಷ. ನನಗೇ ಬಿರಿಯಾನಿ ಇಲ್ಲವೇ?’ ಎನ್ನುತ್ತಾ ಅವಾಚ್ಯ ಶಬ್ದಗಳಿಂದನಿಂದಿಸಿದ್ದ. ನಂತರ ಆ ಹೋಟೆಲ್ ನ ಫಲಕ ಹಾಗೂ ಪೀಠೋಪಕರಣ ಧ್ವಂಸ ಮಾಡಿದ್ದ. ಮುಂದುವರಿದು, ‘ಹೋಟೆಲ್‌ನಲ್ಲಿರುವ ಎಲ್ಲರನ್ನೂ ಸುಮ್ಮನೇ ಬಿಡುವುದಿಲ್ಲ’ ಎಂದು ಜೀವ ಬೆದರಿಕೆಯೊಡ್ಡಿದ್ದ’ ಎನ್ನಲಾಗಿದೆ.

ಆಗ ಗಲಾಟೆಯ ಮಾಹಿತಿ ತಿಳಿದ ಹೊಯ್ಸಳ ಗಸ್ತು ವಾಹನದ ಸಿಬ್ಬಂದಿ ಸ್ಥಳಕ್ಕೆ ಹೋಗಿದ್ದರು. ಗಲಾಟೆ ಮಾಡದಂತೆ ರಮೇಶ್‌ಗೆ ಎಚ್ಚರಿಕೆ ನೀಡಿದ್ದರು. ಆಗ ಸಿಬ್ಬಂದಿ ವಿರುದ್ಧವೂ ಜಗಳ ತೆಗೆದಿದ್ದ ಆರೋಪಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಎನ್ನಲಾಗಿದೆ. ಆಗ ಗಸ್ತಿನಲ್ಲಿದ್ದ ಪಿಎಸ್‌ಐ ಕೌಶಿಕ್ ಸಹ ಸ್ಥಳಕ್ಕೆ ಹೋಗಿದ್ದರು. ಅವರ ಮೇಲೂ ಆರೋಪಿ ಹರಿಹಾಯ್ದಿದ್ದ ಎಂದು ಪೊಲೀಸರು ದೂರಿದ್ದಾರೆ.

ಅಂದು ರಮೇಶ್‌ನನ್ನು ವಶಕ್ಕೆ ಪಡೆದಿದ್ದ ಪೊಲೀಸರು, ಹೊಯ್ಸಳ ವಾಹನದಲ್ಲಿ ತಂದು ಕೂರಿಸಿದ್ದರು. ಅದೇ ಸಂದರ್ಭದಲ್ಲಿ ಆರೋಪಿ, ಸಬ್ ಇನ್ಸ್ಪೆಕ್ಟರ್ ರ ಸಮವಸ್ತ್ರ ಹಿಡಿದು ಜಗ್ಗಿ ಎಳೆದಾಡಿದ್ದ ಎನ್ನುವ ದೂರು ಬಂದಿತ್ತು. ಆತ ಠಾಣೆಗೆ ಹೋಗುತ್ತಿದ್ದಂತೆ, ಅಲ್ಲಿ ನೆಲದ ಮೇಲೆ ಮಲಗಿ ಉರುಳಾಡಿ ರಂಪಾಟ ಮಾಡಿದ್ದ. ಪಿಎಸ್‌ಐ ಜೊತೆ ಠಾಣೆಯಲ್ಲೂ ಜಗಳ ತೆಗೆದಿದ್ದ ಆರೋಪಿ, ‘ನಿನ್ನನ್ನು ಸುಮ್ಮನೇ ಬಿಡುವುದಿಲ್ಲ. ನಾಳೆಯೇ ಠಾಣೆಯಿಂದ ಬೇರೆಡೆ ವರ್ಗಾವಣೆ ಮಾಡಿಸುತ್ತೇನೆ’ ಎಂದು ಬೆದರಿಸಿದ್ದ. ಅಲ್ಲದೆ, ಠಾಣೆಯಲ್ಲಿದ್ದ ಎಲ್ಲರ ಕರ್ತವ್ಯಕ್ಕೂ ಆರೋಪಿ ಅಡ್ಡಿಪಡಿಸಿದ್ದಎಂದು ಪೊಲೀಸ್ ಮೂಲಗಳು ಹೇಳಿವೆ.

ಇದನ್ನೂ ಓದಿ: Siddaramaiah -Sunil kumar: ‘ಅನ್ನ ಭಾಗ್ಯ’ ಕ್ಕೆ ಕೇಂದ್ರದ ಅಡ್ಡಗಾಲು- ಸಿದ್ದರಾಮಯ್ಯ ಆರೋಪ!! ಕೇಂದ್ರದತ್ತ ಬೊಟ್ಟು ಮಾಡಿ ಜಾರಿಕೊಳ್ಳಬೇಡಿ ಎಂದು ಸುನಿಲ್ ಕುಮಾರ್ ಕೌಂಟ್ರು!!

You may also like

Leave a Comment