Tomato Vehicle Hijack: ಬೈಕ್ಗೆ ಟೊಮೆಟೊ ಸಾಗಿಸುತ್ತಿದ್ದ ವಾಹನ (Tomato Vehicle) ಟಚ್ ಆಗಿದೆ ಎಂದು ದುಷ್ಕರ್ಮಿಗಳು ಜಗಳ ಶುರುಮಾಡಿ 3 ಸಾವಿರ ಕೆಜಿ ಟೊಮೆಟೊ, ಗಾಡಿ ಡ್ರೈವರ್, ರೈತನ ಸಹಿತ ಹೈಜಾಕ್ (Tomato Vehicle Hijack) ಮಾಡಿರುವ ಘಟನೆ ಬೆಂಗಳೂರಿನ (Bengaluru) ಆರ್ಎಂಸಿ ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಿಂದ ಕೋಲಾರಕ್ಕೆ (Hiriyuru To Kolar) ಟೊಮೆಟೊ ಸಾಗಾಟ ಮಾಡಲಾಗುತ್ತಿತ್ತು. ನಗರದ ಪೀಣ್ಯ ಬಳಿ ಬೈಕ್ಗೆ ವಾಹನ ಟಚ್ ಆಗಿದೆ ಎಂದು ಕೆಲ ದುಷ್ಕರ್ಮಿಗಳು ಜಗಳಕ್ಕೆ ನಿಂತರು. ಬೈಕ್ಗೆ ಹಾನಿಯಾಗಿದೆ, ಹಣ ಕೊಡುವಂತೆ ಹೇಳಿದ್ದಾರೆ. ಹಣ ಇಲ್ಲ ಎಂದಾಗ ಆನ್ಲೈನ್ ಟ್ರಾನ್ಸ್ಫರ್ ಮಾಡಿಕೊಂಡಿದ್ದಾರೆ.
ನಂತರ ವಾಹನದಲ್ಲಿ ಭಾರೀ ಮೊತ್ತದ ಟೊಮೆಟೊ ತುಂಬಿರೋದನ್ನು ನೋಡಿ ರೈತ ಮತ್ತು ಚಾಲಕನ ಸಹಿತ ವಾಹನವನ್ನೇ ಹೈಜಾಕ್ ಮಾಡಿದ್ದಾರೆ. ಟೊಮೆಟೋ ಬೆಲೆ ಗಗನಕ್ಕೇರಿದೆ ಹಾಗಾಗಿ ಈ ದುಷ್ಕರ್ಮಿಗಳು ನಂತರ ಚಿಕ್ಕಜಾಲ ಬಳಿ ರೈತ ಹಾಗೂ ಚಾಲಕನನ್ನು ಕೆಳಗಿಳಿಸಿ ವಾಹನದೊಂದಿಗೆ ಪರಾರಿಯಾಗಿದ್ದಾರೆ.
ಮೂರು ಲಕ್ಷಕ್ಕೂ ಅಧಿಕ ಮೌಲ್ಯದ ಟೊಮೆಟೊ ವಾಹನ ಹೈಜಾಕ್ ಮಾಡಿರುವ ಬಗ್ಗೆ ರೈತ (Farmer) ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಪೊಲೀಸರು ಸಿಸಿಟಿವಿ ದೃಶ್ಯಗಳನ್ನಾಧರಿಸಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ಇದನ್ನು ಓದಿ: Doctor Recieves Fake Note: 500ರ ನಕಲಿ ನೋಟು ಕೊಟ್ಟು ಡಾಕ್ಟರ್’ಗೇ ಕೈ ಕೊಟ್ಟ ರೋಗಿ !! ಯಾಮಾರಿದ ವೈದ್ಯರು ಮಾಡಿದ್ದೇನು?
