Home » Bengaluru: ಶಾದಿ.ಕಾಮ್’ನಲ್ಲಿ ಪರಿಚಯ ; ಮದುವೆಯ ನಾಟಕವಾಡಿ ಓಯೋದಲ್ಲಿ ಮಜಾ ; ಮುಂದೇನಾಯ್ತು ಗೊತ್ತಾ?

Bengaluru: ಶಾದಿ.ಕಾಮ್’ನಲ್ಲಿ ಪರಿಚಯ ; ಮದುವೆಯ ನಾಟಕವಾಡಿ ಓಯೋದಲ್ಲಿ ಮಜಾ ; ಮುಂದೇನಾಯ್ತು ಗೊತ್ತಾ?

0 comments
Bengaluru

Bengaluru: ಇಂದಿನ ದಿನದಲ್ಲಿ ಪ್ರೀತಿಯ ಹೆಸರಿನಲ್ಲಿ ವಂಚಿಸುವ ಪ್ರಕರಣ ಸಾಕಷ್ಟು ಬೆಳಕಿಗೆ ಬರುತ್ತಿದೆ. ಸ್ನೇಹ, ಪ್ರೀತಿ, ಆಮಿಷಗಳನ್ನೊಡ್ಡಿ ನಂತರ ಮದುವೆ ನಾಟಕವಾಡಿ ಯುವತಿಯರ ಜೀವನವನ್ನು ಛಿದ್ರಗೊಳಿಸುವ ಪಾಪಿಗಳು ಅಲ್ಲಲ್ಲಿ ಹುಟ್ಟಿಕೊಂಡಿದ್ದಾರೆ. ಇದೀಗ ಅಂತಹದೇ ಘಟನೆಯೊಂದು ಬೆಳಕಿಗೆ ಬಂದಿದ್ದು, ಶಾದಿ.ಕಾಮ್ ನಲ್ಲಿ (Shaadi.com) ಯುವಕ-ಯುವತಿ ಪರಿಚಯವಾಗಿ, ಪರಿಚಯ ಪ್ರೇಮಕ್ಕೆ ತಿರುಗಿ, ಓಯೋದಲ್ಲಿ ಮಜಾ ಮಾಡಿ ಕೊನೆಗೆ ಯುವತಿಗೆ ಕೈಕೊಟ್ಟು ಯುವಕ ಬೇರೊಬ್ಬರ ಜೊತೆ ಮದುವೆಯಾಗಿರುವ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ.

ಹೌದು, ನೋಮನ್​​​​ ಷರೀಫ್​​ ಎಂಬ ಯುವಕ ಶಾದಿ.ಕಾಮ್ ನಲ್ಲಿ ಯುವತಿಯೋರ್ವಳನ್ನು ಪರಿಚಯ ಮಾಡಿಕೊಂಡಿದ್ದು, ಗೆಳೆತನ ಬೆಳೆಸಿದ್ದಾನೆ. ತಂದೆ- ತಾಯಿ ಇಲ್ಲದ ಯುವತಿ ಬದುಕಿನ ಆಸರೆಗೆ, ವಿವಾಹವಾಗಲು ಶಾದಿ.ಕಾಮ್ ನಲ್ಲಿ ಪ್ರೊಫೈಲ್ ಕ್ರಿಯೆಟಿವ್ ಮಾಡಿದ್ದಳು. ಷರೀಫ್’ನ ಅಲ್ಪ ಗೆಳೆತನದ ಪ್ರೀತಿಗೆ ಮರುಳಾದ ಆಕೆ ಪರಿಚಯ ಮುಂದುವರೆಸಿದ್ದಾಳೆ. ಕಾಲಾನಂತರ ಪರಿಚಯ ಪ್ರೀತಿಗೆ ತಿರುಗಿದ್ದು, ಯುವಕ ತಾನು ನಿನ್ನನ್ನು ಮದುವೆಯಾಗುತ್ತೇನೆ ಎಂದು ನಂಬಿಸಿದ್ದಾನೆ. ಆತನ ಮಾತು ನಂಬಿದ ಯುವತಿ ಷರೀಫ್ ಹೇಳಿದಂತೆಲ್ಲಾ ಕೇಳಿದ್ದಾಳೆ.

ಈ ಹೆಣ್ಣುಬಾಕ ತಂದೆ- ತಾಯಿಯನ್ನು ಪರಿಚಯ ಮಾಡಿಸುತ್ತೇನೆ ಎಂದು ಸುಳ್ಳು ಹೇಳಿ, ಯುವತಿಯನ್ನು ಓಯೋ ರೂಂಗೆ ಕರೆಸಿದ್ದಾನೆ. ಆಕೆ ಹೋಟೆಲ್ ಗೆ ಬಂದ ನಂತರ ತಂದೆ-ತಾಯಿ ಇವತ್ತು ಬರಲ್ಲ ಎಂದು ಕಾರಣ‌ ಹೇಳಿ ಮಾತು ಮರೆಸಿದ್ದಾನೆ. ಅಲ್ಲದೆ, ಪದೇ ಪದೇ ಮದುವೆ ಆಗುತ್ತೇನೆ ಎಂದು ಹೇಳಿಯೇ ಯುವತಿಯ ಜೊತೆಗೆ ದೈಹಿಕ ಸಂಪರ್ಕ ಬೆಳೆಸಿದ್ದಾನೆ.

ಆತನ ಮೋಸದ ಮಾತು ನಂಬಿದ ಯುವತಿ ಆತನೊಂದಿಗೆ ಹಲವು ಬಾರಿ ದೈಹಿಕ ಸಂಪರ್ಕ ನಡೆಸಿದ್ದಳು. ಆದರೆ, ಮದುವೆಯಾಗುತ್ತೇನೆಂದು ನಂಬಿಸಿದ್ದ ಷರೀಫ್ ಕೊನೆಗೆ ಬೇರೊಬ್ಬರ ಜೊತೆ ಮದುವೆ ಮಾಡಿಕೊಂಡಿದ್ದಾನೆ. ಮೋಸ ಹೋದೆನೆಂದು ಅರಿತ ಯುವತಿ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಯುವತಿಯ ದೂರಿನ ಮೇರೆಗೆ ಪೊಲೀಸರು FIR ದಾಖಲಿಸಿದ್ದು, ತನಿಖೆ ಮುಂದುವರೆಸಿದ್ದಾರೆ.

 

ಇದನ್ನು ಓದಿ: IPL betting: ಬೆಟ್ಟಿಂಗ್ ಭೂತಕ್ಕೆ ಯುವಕನ ಬ್ರೂಟಲ್ ಮರ್ಡರ್ ! 

You may also like

Leave a Comment