Home » Meat Sale Ban : ಗಮನಿಸಿ ಸಾರ್ವಜನಿಕರೇ, ಮಂಗಳವಾರ ಮಾಂಸ ಮಾರಾಟ ನಿಷೇಧ!

Meat Sale Ban : ಗಮನಿಸಿ ಸಾರ್ವಜನಿಕರೇ, ಮಂಗಳವಾರ ಮಾಂಸ ಮಾರಾಟ ನಿಷೇಧ!

0 comments
Meat Sale Ban

Meat Sale Ban: ಬೆಂಗಳೂರು (Bengaluru) ನಾಗರಿಕರಿಗೆ ಮಹತ್ವದ ಮಾಹಿತಿ ಇಲ್ಲಿದೆ. ಬಿಬಿಎಂಪಿ (BBMP) ಮಾಂಸ ಮಾರಾಟದ ಕುರಿತು ಮಹತ್ವದ ಆದೇಶ ಹೊರಡಿಸಿದೆ. ನಾನ್​ವೆಜ್ ಪ್ರಿಯರಿಗೆ ಶಾಕಿಂಗ್ ಸುದ್ದಿ ನೀಡಿದೆ. ಹೌದು, ನಗರದಲ್ಲಿ ಮಂಗಳವಾರ ಮಾಂಸ ಮಾರಾಟ ನಿಷೇಧಿಸುವ (Meat Sale Ban) ಬಗ್ಗೆ ಬಿಬಿಎಂಪಿ ಆದೇಶ ಹೊರಡಿಸಿದೆ.

ಮಂಗಳವಾರ (ಏ. 4) ಮಹಾವೀರ ಜಯಂತಿಯ ಪ್ರಯುಕ್ತ (Mahavir Jayanti) ಪ್ರಾಣಿವಧೆ ಮತ್ತು ಮಾಂಸ ಮಾರಾಟ ನಿಷೇಧಿಸಿ, ಬಿಬಿಎಂಪಿ ಆದೇಶ ಹೊರಡಿಸಿದೆ. ಈ ಕಾರಣದಿಂದ ಬೆಂಗಳೂರಿನಲ್ಲಿ ಮಂಗಳವಾರ ಮಾಂಸ ಮಾರಾಟ ಮಾಡುವಂತಿಲ್ಲ.

ಮಾರ್ಚ್ 30ರಂದು ಗುರುವಾರ ಶ್ರೀ ರಾಮನವಮಿ (ram navami) ಹಬ್ಬ ಪ್ರಯುಕ್ತ ಬೆಂಗಳೂರಿನಲ್ಲಿ, ಕಲಬುರಗಿ ಚಿಕ್ಕಮಗಳೂರು, ಚಾಮರಾಜನಗರ ಜಿಲ್ಲೆ ಸೇರಿದಂತೆ ವಿವಿಧ ನಗರಸಭಾ ವ್ಯಾಪ್ತಿಯಲ್ಲಿ ಮಾಂಸ ಮಾರಾಟ ಹಾಗೂ ಪ್ರಾಣಿ ವಧೆಯನ್ನು ನಿಷೇಧಿಸಿ, ಆದೇಶ ಹೊರಡಿಸಲಾಗಿತ್ತು. ಸದ್ಯ ಮಂಗಳವಾರ ಕೂಡ ಮಾಂಸ ಮಾರಾಟ ನಿಷೇಧಿಸಲಾಗುತ್ತಿದೆ. ಇದರಿಂದ ನಾನ್​ವೆಜ್ ಪ್ರಿಯರು ಮಾಂಸ ಖರೀದಿ ಮಾಡಲು ಸಾಧ್ಯವಾಗುವುದಿಲ್ಲ.

04.04.2023ರ ಮಂಗಳವಾರ “ಮಹಾವೀರ ಜಯಂತಿ” ಹಬ್ಬದ ಪ್ರಯುಕ್ತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕಸಾಯಿಖಾನೆಯಲ್ಲಿ ಪ್ರಾಣಿವಧೆ ಹಾಗೂ ಮಾರಾಟ ಮಳಿಗೆಗಳಲ್ಲಿ ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ” ಎಂದು ಬಿಬಿಎಂಪಿ ಸುತ್ತೋಲೆಯಲ್ಲಿ ಸೂಚನೆ ನೀಡಿದೆ. ಈ ಸೂಚನೆಯನ್ನು ಬೆಂಗಳೂರಿನ ನಾಗರೀಕರು ಅನುಸರಿಸುವಂತೆ ಸೂಚನೆ ನೀಡಲಾಗಿದೆ.

You may also like

Leave a Comment