Home » ಬೆಳ್ಳಂಬೆಳಗ್ಗೆ ನವವಿವಾಹಿತೆಯ ಬರ್ಬರ ಹತ್ಯೆ | ಪಾಗಲ್ ಪ್ರೇಮಿಯಿಂದ ನಡೆಯಿತು ಮಾರಣಹೋಮ

ಬೆಳ್ಳಂಬೆಳಗ್ಗೆ ನವವಿವಾಹಿತೆಯ ಬರ್ಬರ ಹತ್ಯೆ | ಪಾಗಲ್ ಪ್ರೇಮಿಯಿಂದ ನಡೆಯಿತು ಮಾರಣಹೋಮ

0 comments

ನವವಿವಾಹಿತೆಯೋರ್ವಳನ್ನು ಆಕೆಯ ಲವ್ವರ್ ಬರ್ಬರವಾಗಿ ಹತ್ಯೆ ಮಾಡಿದ ಘಟನೆಯೊಂದು ಇಂದು ಬೆಳ್ಳಂಬೆಳಗ್ಗೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

ದೇವನಹಳ್ಳಿ ತಾಲೂಕಿನ ಆವತಿ ಗ್ರಾಮದಲ್ಲಿ ಬೆಳ್ಳಂಬೆಳಗ್ಗೆ ಚಾಕುವಿನಿಂದ ಇರಿದು ನವವಿವಾಹಿತೆಯ ಬರ್ಬರವಾಗಿ ಹತ್ಯೆಗೈದ ದುರಂತ ಘಟನೆ ನಡೆದಿದ್ದು, ಇದೀಗ ಬೆಳಕಿಗೆ ಬಂದಿದೆ.

ಪ್ರೀತಿ ನಿರಾಕರಿಸಿ ಬೇರೊಬ್ಬನ ಜತೆ ವಿವಾಹವಾಗಿದ್ದ ಕಾರಣಕ್ಕಾಗಿ ಮನೆಗೆ ನುಗ್ಗಿ ಚಾಕುವಿನಿಂದ ಇರಿದು ಸೌಮ್ಯಾ(23 ) ಎಂಬಾಕೆಯನ್ನು ಬರ್ಬರವಾಗಿ ಪಾಗಲ್‌ ಪ್ರೇಮಿಯೇ ಹತ್ಯೆಗೈದಿದ್ದಾನೆ. ಪಾಗಲ್‌ ಪ್ರೇಮಿ ಸುಬ್ರಹ್ಮಣ್ಯ ಎಂಬುವನಿಂದ ಕೃತ್ಯಎಸಗಲಾಗಿದೆ ಎಂಬ ಶಂಕೆ ವ್ಯಕ್ತಪಡಿಸಲಾಗಿದೆ.

ಬೆಂಗಳೂರು ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

You may also like

Leave a Comment