Home » Murder case : ಪ್ರೇಯಸಿಯನ್ನು ಹುಟ್ಟು ಹಬ್ಬದಂದೇ ಕೊಂದ ಕಿರಾತಕ ಲವ್ವರ್‌! ಬರ್ತ್‌ಡೇ ಕೇಕ್‌ ಕಟ್ ಮಾಡಿ ಕತ್ತು ಕತ್ತರಿಸಿಯೇ ಬಿಟ್ಟ ಪಾಪಿ!

Murder case : ಪ್ರೇಯಸಿಯನ್ನು ಹುಟ್ಟು ಹಬ್ಬದಂದೇ ಕೊಂದ ಕಿರಾತಕ ಲವ್ವರ್‌! ಬರ್ತ್‌ಡೇ ಕೇಕ್‌ ಕಟ್ ಮಾಡಿ ಕತ್ತು ಕತ್ತರಿಸಿಯೇ ಬಿಟ್ಟ ಪಾಪಿ!

0 comments
Murder case

Murder Case : ಪ್ರೀತಿ (love ) ಅನ್ನೋದು ಇತ್ತೀಚಿಗೆ ಪ್ರೇಮಿಗಳ ತಾಳ್ಮೆ ಕೆಡಿಸುತ್ತಿದೆ. ಪ್ರೀತಿಗೋಸ್ಕರ ತ್ಯಾಗ ಮಾಡುವುದು ನೋಡಿದ್ದೇವೆ. ಆದರೆ ಇಲ್ಲೊಬ್ಬ ಜೀವವನ್ನೇ ಕಿತ್ತುಕೊಂಡಿದ್ದಾನೆ. ಪ್ರೀತಿ ಕೆಲವೊಮ್ಮೆ ಅನಾಹುತದಲ್ಲಿ ಕೊನೆಗೊಳ್ಳುವ ಎಷ್ಟೋ ನಿದರ್ಶನ ಕೇಳಿದ್ದೇವೆ ಮತ್ತು ನೋಡಿದ್ದೇವೆ. ಹಾಗೆಯೇ ಇಲ್ಲೊಬ್ಬ ಪ್ರೀತಿಸಿದ ಹುಡುಗಿಯ ಬರ್ತ್ ಡೇ (birthday ) ನೆಪದಲ್ಲಿ ಡೆತ್ ಡೇ (death day ) ಕೂಡ ಮಾಡಿದ್ದಾನೆ.

ಹೌದು, ಪ್ರೀತಿಸುತ್ತಿದ್ದ ಯುವತಿಯನ್ನು ಬರ್ತ್ ಡೇ ನೆಪದಲ್ಲಿ ಕರೆಸಿಕೊಂಡು ಕೇಕ್ ಕತ್ತರಿಸಿದ ಕೈಯಲ್ಲೇ ಕೊರಳು ಕೊಯ್ದು ಕೊಲೆ ಮಾಡಿದ ಭಯಾನಕ ಘಟನೆಯೊಂದು ಬೆಂಗಳೂರಿನ ಲಗ್ಗೆರೆಯಲ್ಲಿ ನಡೆದಿದೆ. ಪೊಲೀಸ್ ಇಲಾಖೆಗೆ ಆಂತರಿಕ ಭದ್ರತಾ ವಿಭಾಗದಲ್ಲಿ ಕ್ಲರ್ಕ್ ಆಗಿದ್ದ ನವ್ಯ (24) ಅವರೇ ಕೊಲೆಯಾದ ಯುವತಿ.

ನವ್ಯ ಹಾಗೂ ಪ್ರಶಾಂತ್ ಇಬ್ಬರು ಕನಕಪುರ ಮೂಲದವರು. ದೂರದಲ್ಲಿ ಸಂಬಂಧಿಕರು. ಕಳೆದ ಆರು ವರ್ಷಗಳಿಂದ ಅವರು ಪ್ರೀತಿಸುತ್ತಿದ್ದರು.
ಕಳೆದ ಮಂಗಳವಾರ ನವ್ಯಳ ಹುಟ್ಟು ಹಬ್ಬ ಇತ್ತು. ಅಂದು ಬ್ಯುಸಿ ಇದ್ದೇನೆಂದು ಹೇಳಿ ಆಕೆಯನ್ನು ಭೇಟಿಯಾಗುವುದನ್ನು ತಪ್ಪಿಸಿಕೊಂಡಿದ್ದ.

ಆದರೆ ಪ್ರಶಾಂತ್ ಶುಕ್ರವಾರ ರಾತ್ರಿ ಹುಟ್ಟುಹಬ್ಬದ ಸೆಲೆಬ್ರೇಷನ್‌ಗೆ ಸಿದ್ಧತೆ ಮಾಡಿಕೊಂಡಿದ್ದ. ಅದರಂತೆ ಆಕೆಯನ್ನು ಕರೆಸಿಕೊಂಡಿದ್ದ. ಆಕೆಯ ಹೆಸರು ಬರೆಸಿ ಕೇಕ್ ಕೂಡಾ ತಂದಿಟ್ಟಿದ್ದ. ಪ್ರಿಯಕರ ತನಗಾಗಿ ಬರ್ತ್ ಡೇ ಪಾರ್ಟಿ ಇಟ್ಟುಕೊಂಡಿದ್ದಾನೆ ಎಂದು ಖುಷಿಯಲ್ಲಿ ಆಕೆ ಅಲ್ಲಿಗೆ ಹೋಗಿದ್ದಳು.

ಪ್ರಶಾಂತ್ ಸಂಭ್ರಮದಿಂದ ಆಕೆಯನ್ನು ಎದುರುಗೊಂಡ ಆತ ಕೇಕ್ ಕತ್ತರಿಸಿ ಆಕೆಗೆ ತಿನ್ನಿಸಿದ್ದ. ಅದಕ್ಕಿಂತಲೂ ಮೊದಲು ಇಡೀ ಕೋಣೆಯನ್ನು ಅವನು ಹುಟ್ಟುಹಬ್ಬಕ್ಕಾಗಿ ಅಲಂಕರಿಸಿದ್ದ. ಆಕೆ ಸಂಭ್ರಮದಿಂದ ಕೇಕ್ ತಿನ್ನುತ್ತಿದ್ದಂತೆಯೇ ಪ್ರಶಾಂತನೊಳಗಿನ ಕ್ರೂರಿ ಎದ್ದು ನಿಂತಿದ್ದ. ಮೊದಲೇ ಪ್ಲಾನ್ ಮಾಡಿದ್ದಂತೆ ಆತ ಹರಿತವಾದ ಚಾಕುವಿನಿಂದ ಕುತ್ತಿಗೆ ಕೊಯ್ದು ಕೊಲೆ ಮಾಡಿದ್ದಾನೆ. ಕೇಕ್ ಕತ್ತರಿಸಿದ ಕೈಯಲ್ಲೇ ಆಕೆಯನ್ನು ಕೊರಳನ್ನು ಕತ್ತರಿಸಿದ ದುಷ್ಟ ಆಕೆಯನ್ನು ರಕ್ತದ ಮಡುವಿನಲ್ಲಿ ಬಿಟ್ಟು ಹೋಗಿದ್ದಾನೆ.

ಆಕೆಯ ಆಕ್ರಂದನ ಕೇಳಿ ಅಕ್ಕಪಕ್ಕದ ಮನೆಯವರು ಬಂದು ನೋಡಿದಾಗ ಆಕೆ ಶವವಾಗಿ ಬಿದ್ದಿದ್ದಳು. ಇದೀಗ ಶವವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಈಗಾಗಲೇ ಆರೋಪಿ ಪ್ರಶಾಂತ್‌ನನ್ನು ಪೊಲೀಸರು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ. ರಾಜಗೋಪಾಲನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸ್ ವಿಚಾರಣೆ ನಂತರ ಕೊಲೆ (Murder Case )ಮಾಡಲು ನಿಖರ ಕಾರಣ ಏನೆಂದು ತಿಳಿದುಬರಬೇಕಿದೆ

You may also like

Leave a Comment