Home » FLASH NEWS: ʻ ನಾನು ಬಡವ ನನ್ನ ಕತ್ತು ಸೀಳಬೇಡಿ ʼ- ಎಂದು ವಿಭಿನ್ನ ರೀತಿಯಲ್ಲಿ ಮೈಸೂರಿನಲ್ಲಿ ಪ್ರತಿಭಟನೆ

FLASH NEWS: ʻ ನಾನು ಬಡವ ನನ್ನ ಕತ್ತು ಸೀಳಬೇಡಿ ʼ- ಎಂದು ವಿಭಿನ್ನ ರೀತಿಯಲ್ಲಿ ಮೈಸೂರಿನಲ್ಲಿ ಪ್ರತಿಭಟನೆ

0 comments

ನಂಜನಗೂಡು: ನಂಜನಗೂಡು ತಾಲೂಕಿನ ಟಿ. ನರಸೀಪುರದಲ್ಲಿ ಕನ್ಹಯ್ಯ ಲಾಲ್ ಅವರ ಹತ್ಯೆ ಖಂಡಿಸಿ  ” ನಾನು ಬಡವ ನನ್ನ ಕತ್ತು ಸೀಳಬೇಡಿ “, ನಾನು ಸತ್ಯ ಹೇಳಲ್ಲ ಸತ್ಯ ಹೇಳುವವರ ಪರವೂ ನಿಲ್ಲಲ್ಲ ಎಂದು ವಿಶೇಷ ಬೃಹತ್‌ ಅಭಿಯಾನ ಆರಂಭಿಸಿದ್ದಾರೆ.

ಸಾಂಸ್ಕೃತಿಕ ನಾಡು ಮೈಸೂರಿನಲ್ಲಿ ಹಿಂದೂ ಕಾರ್ಯಕರ್ತರಿಂದ ‘ ನಾನು ಬಡವ, ನನ್ನ ಕತ್ತು ಸೀಳಬೇಡಿ’ ನಾಮ  ಫಲಕಗಳನ್ನು ಹಿಡಿದುಕೊಂಡು ವಿಶೇಷ ಅಭಿಯಾನ ಮಾಡಲಾಗುತ್ತಿದೆ. ಈ ಅಭಿಯಾನದಲ್ಲಿ ಸಾರ್ವಜನಿಕರು, ವಿದ್ಯಾರ್ಥಿಗಳು ಮತ್ತು ಅಂಗಡಿ ಮಾಲೀಕರು ಸೇರಿದಂತೆ ಅನೇಕರು ಕೈ ಜೋಡಿಸಿದ್ದಾರೆ. 
ನಿನ್ನೆ ಉದಯಪುರದ ಟೈಲರ್ ಅಂಗಡಿ ಮಾಲೀಕ ಕನ್ಹಯ್ಯ ಲಾಲ್ ನನ್ನು ಇಬ್ಬರು ಮುಸ್ಲಿಂ ವ್ಯಕ್ತಿಗಳು ಕೊಲೆ ಮಾಡಿ, ಕೊಲೆ ವಿಡಿಯೋ ಮಾಡಿಕೊಂಡು ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ವಿಡಿಯೋದಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನೂ ಹತ್ಯೆ ಮಾಡುವುದಾಗಿಯೂ ಬೆದರಿಕೆ ಹಾಕಿದ ಬೆನ್ನಲ್ಲೇ ದೇಶಾದ್ಯಂತ ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ. ಇದೀಗ ಕರ್ನಾಟಕದಲ್ಲೂ ಭುಗಿಲೆದ್ದ ಆಕ್ರೋಶ ಕ್ಷಣಕ್ಷಣಕ್ಕೂ ಹೆಚ್ಚಾಗುತ್ತಿದೆ. ಪ್ರತಿಭಟನೆಯ ಕಾವು ಏರುತ್ತಿದೆ. ಅಪರಾಧಿಗಳಿಗೆ ತಕ್ಷಣಕ್ಕೆ ಶಿಕ್ಷೆ ವಿಧಿಸಲು ಜನರ ಒತ್ತಾಯ ಕೇಳಿಬರುತ್ತಿದೆ.

You may also like

Leave a Comment