Onion price: ಬೆಳ್ಳುಳ್ಳಿ ದರ ಏರಿಕೆಯಿಂದ ಕಂಗಾಲಾಗಿದ್ದ ಜನರಿಗೆ ಮತ್ತೊಂದು ಶಾಕ್ ಎದುರಾಗಿದ್ದು ಇದೀಗ ಈರುಳ್ಳಿ ಬೆಲೆಯು(Onion price)ದಿಢೀರನೆ ಹೆಚ್ಚಳವಾಗಿದೆ. ಈ ಮೂಲಕ ಮೂಲ ಜೇಬಿಗೆ ಇನ್ನಷ್ಟು ಹೊರೆ ಬಿದ್ದಂತಾಗಿದೆ.
ಹೌದು, ಈರುಳ್ಳಿ ರಫ್ತು ನಿಷೇಧವನ್ನು ಕೇಂದ್ರ ಸರಕಾರ ಹಿಂಪಡೆದ ಬೆನ್ನಲ್ಲೇ ಈರುಳ್ಳಿ ಬೆಲೆಯಲ್ಲಿ ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ. ಈರುಳ್ಳಿ ಪ್ರತಿ ಕ್ವಿಂಟಾಲ್ ಬೆಲೆ 1,280 ರೂಪಾಯಿಯಿಂದ 1,800 ರೂಪಾಯಿಗೆ ಏರಿಕೆಯಾಗಿದೆ. ಅದೇ ರೀತಿ ಕನಿಷ್ಠ ಬೆಲೆಯ 1,000 ಹಾಗೂ ಗರಿಷ್ಠ ಬೆಲೆ ಕ್ವಿಂಟಾಲ್ ಗೆ 2,100 ರೂಪಾಯಿಗೆ ಹೆಚ್ಚಳವಾಗಿರುವುದಾಗಿ ವರದಿ ವಿವರಿಸಿದೆ.
ಇದರೊಂದಿಗೆ ದೇಶದ ಅತೀ ದೊಡ್ಡ ಈರುಳ್ಳಿ ಮಾರುಕಟ್ಟೆಯಾದ ಲಾಸಲ್ ಗಾಂವ್ ಕೃಷಿ ಉತ್ಪಾದನಾ ಮಾರುಕಟ್ಟೆ(ಎಪಿಎಂಸಿ)ಯಲ್ಲಿ ಈರುಳ್ಳಿ ರಖಂ ಮಾರಾಟ ಬೆಲೆ ಶೇ.40ರಷ್ಟು ಏರಿಕೆ ಕಂಡಿರುವುದಾಗಿ ವರದಿ ತಿಳಿಸಿದೆ.
