Home » ಸಾಬೂನಿನಲ್ಲಿ ಮೂಡಿದ ಅಪ್ಪು ; ಏನೀ ಮರ್ಮ ?

ಸಾಬೂನಿನಲ್ಲಿ ಮೂಡಿದ ಅಪ್ಪು ; ಏನೀ ಮರ್ಮ ?

0 comments

ಪುನೀತ್ ಹುಟ್ಟುಹಬ್ಬದಂದು ಅಭಿಮಾನಿಗಳು ಅವರ ಗೌರವಾರ್ಥ ಒಂದೊಂದು ಕಾರ್ಯ ಮಾಡುತ್ತಿದ್ದಾರೆ. ಮಾಡಿದ್ದಾರೆ.  ಇಲ್ಲಿ ಮಂಗಳೂರಿನ ಒಬ್ಬರು ಸಾಬೂನಿನಲ್ಲಿ (Soap Carving) ಪುನೀತ್ ರಾಜ್ ಕುಮಾರ್ ಅವರನ್ನು ಅರಳಿಸಿದ್ದಾರೆ. ಈ ಹಿಂದೆ ಕೆಲವರು ರಂಗೋಲಿಯಲ್ಲಿ ಅಪ್ಪುವನ್ನು ಚಿತ್ರಿಸಿದ್ದರು‌.

ಈಗ ಹೊಸತಾಗಿ ಸಾಬೂನಿನಲ್ಲಿ ಅಪ್ಪು ಕಂಗೊಳಿಸುತ್ತಿದ್ದಾರೆ.  ಹಲವು ವೇದಿಕೆಗಳಲ್ಲಿ ಅಪ್ಪು ಲೈವ್ ಆರ್ಟ್ ಮೂಲಕ ಕೈಚಳಕ ತೋರಿದ್ದ ದೇವಿಕಿರಣ್ ಈಗ ಮತ್ತೊಂದು ಸಾಹಸ ಮಾಡಿದ್ದಾರೆ. ಸಾಬೂನಿನ ಮೂಲಕ ಪುನೀತ ಕಲಾಕೃತಿ ಮೂಡಿಸಿದ್ದಾರೆ.

ಅಪ್ಪು ಹುಟ್ಟಿದ ಹಬ್ಬಕ್ಕೆ ಎರಡು ಗಂಟೆಗಳ ಪರಿಶ್ರಮದಲ್ಲಿ ಮಂಗಳೂರಿನ (Mangaluru) ಚಿತ್ರಕಲಾವಿದ ದೇವಿಕಿರಣ್ ಗಣೇಶ್ ಪುರ  ಸಾಬೂನು ಕಲಾಕೃತಿಯಲ್ಲಿ ಅಪ್ಪುವನ್ನು ಮೂಡಿಸಿದ್ದಾರೆ.

You may also like

Leave a Comment