Home » ‘ಮಾತಿನ ಮಲ್ಲಿ’ ಆರ್ ಜೆ ರಚನಾ ಹೃದಯಾಘಾತ | ಸಖತ್ ಫಿಟ್ ಆಗಿದ್ದ ಮುದ್ದು ಮುಖದ ಚೆಲುವೆ ಬದುಕಿಗೆ ವಿದಾಯ

‘ಮಾತಿನ ಮಲ್ಲಿ’ ಆರ್ ಜೆ ರಚನಾ ಹೃದಯಾಘಾತ | ಸಖತ್ ಫಿಟ್ ಆಗಿದ್ದ ಮುದ್ದು ಮುಖದ ಚೆಲುವೆ ಬದುಕಿಗೆ ವಿದಾಯ

0 comments

ಆರ್ ಜೆ ರಚನಾ ಎಂದರೆ ಮಾತಿನ ಮಲ್ಲಿ, ಪಟ ಪಟ ಅಂತಾ ಮಾತನಾಡುತ್ತಿದ್ದ ಈಕೆ ಇಂದು ಕೊನೆಯುಸಿರೆಳಿದಿದ್ದಾರೆ. 35 ವರ್ಷದ ಆರ್ ಜೆ ರಚನಾ ಹೃದಯಾಘಾತದಿಂದ ನಿಧನರಾಗಿದ್ದಾರೆ‌. ಜೆ ಪಿ ನಗರದ ಫ್ಲ್ಯಾಟ್ ನಲ್ಲಿದ್ದಾಗ ಎದೆನೋವು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ಸಾಗಿಸುವಾಗಲೇ ಹೃದಯಾಘಾತಕ್ಕೊಳಗಾಗಿ ಮೃತರಾಗಿದ್ದಾರೆ.

ರೇಡಿಯೋ ಮಿರ್ಚಿಯಲ್ಲಿ ಹಲವಾರು ವರ್ಷ ರೇಡಿಯೋ ಜಾಕಿಯಾಗಿ ರಚನಾ ಕೆಲಸ ಮಾಡಿದ್ದರು. ಇವರ ಮಾತು ಕೇಳಲೆಂದೇ ಜನ ಕಾಯುತ್ತಿದ್ದರು. ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದ ರಚನಾ ತಮ್ಮ ಮಾತಿನ ಮೂಲಕವೇ ಜನರ ಮನಸ್ಸನ್ನು ಗೆದ್ದಿದ್ದರು.

ಕಳೆದ 3 ವರ್ಷಗಳಿಂದ ರೇಡಿಯೋ ಜಾಕಿ ಕೆಲಸವನ್ನು ಬಿಟ್ಟು ಮನೆಯಲ್ಲೇ ಒಬ್ಬರೇ ಇದ್ದು, ಡಿಪ್ರೆಶನ್, ಸ್ಟ್ರೆಸ್ ನಿಂದ ಹಾರ್ಟ್ ಅಟ್ಯಾಕ್ ಆಗಿದೆ ಎಂಬ ಮಾಹಿತಿ ಇದೆ. ಡಯೆಟ್ , ವರ್ಕೌಟ್ ಮಾಡುತ್ತಿದ್ದರೂ ಈ ರೀತಿ ಸಾವು ಕಂಡಿರುವುದು ದುರಂತ. ಅವರ ಸ್ನೇಹಿತರಿಗೆ ಅತೀವ ಬೇಸರ ಮೂಡಿಸಿದೆ ಈ ಸಾವು. ತಮ‌್ಮ‌ ದೇಹದ ಮೇಲೆ ರಚನಾ ಅವರಿಗೆ ತುಂಬಾ ಪ್ರೀತಿ. ಹಾಗಾಗಿ ಫಿಟ್ ಆಗಿ ಇರಲು ಯಾವಾಗಲೂ ಸೊಪ್ಪು, ಹಣ್ಣು, ತರಕಾರಿಗಳನ್ನೇ ಹೆಚ್ಚಾಗಿ ಸೇವಿಸುತ್ತಿದ್ದರಂತೆ ಆರ್ ಜೆ ರಚನಾ.

ರಚನಾ ಮೃತದೇಹವನ್ನು ಚಾಮರಾಜಪೇಟೆಯ ಅವರ ನಿವಾಸಕ್ಕೆ ಕೊಂಡೊಯ್ಯಲಾಗಿದೆ.

You may also like

Leave a Comment