Bellare: ಜೆಸಿಐ ಬೆಳ್ಳಾರೆಯ 2026 ನೇ ಸಾಲಿನ ಪದಪ್ರದಾನ ಸಮಾರಂಭವು ಜ.05ರಂದು ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಭವನದಲ್ಲಿ ನಡೆಯಿತು.
39 ನೇ ಜೇಸಿ ಅಧ್ಯಕ್ಷರಾಗಿ ಹಾಗೂ ಘಟಕದ 4 ನೇ ಮಹಿಳಾ ಅಧ್ಯಕ್ಷರಾಗಿ ಜೇಸಿ ಪೂರ್ಣಿಮಾ ಪೆರ್ಲಂಪಾಡಿರವರು ಅಧಿಕಾರ ಸ್ವೀಕರಿಸಿದರು. ಕಾರ್ಯದರ್ಶಿಯಾಗಿ ಜೇಸಿ ಹೆಚ್ ಜಿ.ಎಫ್ ವೇದಿತ್ ರೈ ಯಂ, ಕೋಶಾಧಿಕಾರಿಯಾಗಿ ಜೇಸಿ ಯಾಹಿಯಾ ಬೆಳ್ಳಾರೆ, ಉಪಾಧ್ಯಕ್ಷರುಗಳಾಗಿ ಜೀಸಿ ಪುರುಷೋತ್ತಮ ಮಠತ್ತಡ್ಕ, ಜೇಸಿ ಶಿವಕುಮಾರ್ ರೈ ಮಣಿಕ್ಕರ, ಜೇಸಿ ರಮೇಶ್ ಮಠತ್ತಡ್ಕ, ಜೇಸಿ ಗಣೇಶ್ ಕುಲಾಲ್, ಜೇಸಿ ಪ್ರಮೋದ್ ಕುಮಾರ್ ರೈ, ನಿರ್ದೇಶಕರಾಗಿ ಜೇಸಿ ಲೋಕೇಶ್ ತಡಗಜೆ, ಜೇಸಿ ಸುಪ್ರೀತ್ ರೈ, ಜೇಸಿ ಶೇಷಪ್ಪ ಮಠತ್ತಡ್ಕ, ಜೇಸೀ ಭವ್ಯ ಬೆಳ್ಳಾರೆ, ಜೇಸೀ ಜನಾರ್ದನ ಕೆ, ಜತೆ ಕಾರ್ಯದರ್ಶಿಯಾಗಿ ಜೇಸೀ ಹ್ಯಾರೀಸ್ ಇಬ್ರಾಹಿಂ ಪ್ರಮಾಣವಚನ ಸ್ವೀಕರಿಸಿದರು.
ವೇದಿಕೆಯಲ್ಲಿ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಇದರ ಅಧ್ಯಕ್ಷರಾದ ಉಮೇಶ್ ನಾಯಕ್, ವಲಯ 15ರ ವಲಯಾಧ್ಯಕ್ಷರಾದ ಜೆ.ಎಫ್.ಎಫ್ ಸಂತೋಷ್ ಶೆಟ್ಟಿ, ವಲಯ ಉಪಾಧ್ಯಕ್ಷರಾದ ಜೆ.ಎಫ್.ಪಿ ಕಾಶೀನಾಥ್ ಗೋಗಟೆ ಉಪಸ್ಥಿತರಿದ್ದರು. ಜೇಸಿ ಹಾಗೂ ಜೇಸಿಯೇತರ ಮಿತ್ರರು ಉಪಸ್ಥಿತರಿದ್ದರು.
