Home » Belthangady: ಬೆಳ್ತಂಗಡಿ: ತೋಟದಲ್ಲಿ ಹಾವು ಕಚ್ಚಿ ಮಹಿಳೆ ಸಾವು

Belthangady: ಬೆಳ್ತಂಗಡಿ: ತೋಟದಲ್ಲಿ ಹಾವು ಕಚ್ಚಿ ಮಹಿಳೆ ಸಾವು

0 comments
Snake Bite

Belthangady: ತೋಟದಲ್ಲಿ ಕೆಲಸ ಮಾಡುತಿದ್ದ ವೇಳೆ ಮಹಿಳೆ ಸಾವನ್ನಪ್ಪಿದ ಘಟನೆ ಶಿಶಿಲದಲ್ಲಿ ಡಿ.21 ರಂದು ನಡೆದಿದೆ.ಶಿಶಿಲ ಗ್ರಾಮದ ಗುಡ್ಡೆ ತೋಟ ನಿವಾಸಿ ಪ್ರೇಮ ( 55)ರವರು ಮೃತ ಮಹಿಳೆಯಾಗಿದ್ದಾರೆ.

ಮದ್ಯಾಹ್ನ ದ ವೇಳೆ ತೋಟದಲ್ಲಿ ಕೆಲಸ ಮಾಡುತ್ತಿರುವಾಗ ಇವರಿಗೆ ನಾಗರ ಹಾವು ಕಡಿದಿದೆ.ಹಾವು ಕಡಿದ ತಕ್ಷಣ ಪುತ್ತೂರು ಸರಕಾರಿ ಆಸ್ಪತ್ರೆಗೆ ಶೌರ್ಯ ವಿಪತ್ತು ತಂಡದ ಸದಸ್ಯರ ಸಹಾಯದೊಂದೊಂದಿಗೆ ಕರೆದೋಯ್ಯಲಾಯಿತಾದರೂ ವಿಷ ವಿಪರೀತ ಅವರಿಸಿರುವ ಕಾರಣ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಮೃತ ಮಹಿಳೆ ಓರ್ವ ಹೆಣ್ಣು ಮಗಳು ವಿಜಯ ಹಾಗೂ ಪುತ್ರ ದಯಾನಂದ ಇವರನ್ನು ಅಗಲಿದ್ದಾರೆ.

You may also like