Home » Bangalore: ʼಮುಡಾʼ ದಿಂದ 50:50 ಸೈಟ್‌ ಪಡೆದವರಿಂದ ಜಪ್ತಿಗೆ ನಿರ್ಧಾರ

Bangalore: ʼಮುಡಾʼ ದಿಂದ 50:50 ಸೈಟ್‌ ಪಡೆದವರಿಂದ ಜಪ್ತಿಗೆ ನಿರ್ಧಾರ

0 comments

Bangalore: ಮೂಡಾದಿಂದ 50:50 ಅನುಪಾತದಲ್ಲಿ ಸೈಟ್‌ ಪಡೆದವರಿಗೆ ಬಿಗ್‌ ಶಾಕಿಂಗ್‌ ನ್ಯೂಸ್‌ವೊಂದು ಎದುರಾಗಿದೆ. ಅದೇನೆಂದರೆ 50:50 ಅನುಪಾತದಲ್ಲಿ ಸೈಟ್‌ ಪಡೆದವರಿಂದ ಜಪ್ತಿ ಮಾಡುವ ನಿರ್ಧಾರವನ್ನು ಮಾಡಲಾಗಿದೆ.

ಇಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಮುಡಾ ಸದಸ್ಯರ ಸಭೆ ನಡೆದಿದ್ದು, ಅಲ್ಲಿ ಈ ನಿರ್ಧಾರ ಮಾಡಲಾಗಿದೆ. ಹಾಗೂ ಇದಕ್ಕೆ ಮುಡಾದ ಎಲ್ಲಾ ಸದಸ್ಯರು ಒಪ್ಪಿಗೆಯನ್ನು ಸೂಚಿಸಿದ್ದಾರೆ.

ಗುರುವಾರ ಸಭೆ ನಡೆದಿದ್ದು, ಮುಡಾದಲ್ಲಿ 50:50 ಅನುಪಾತದಡಿಯಲ್ಲಿ ನಿವೇಶನಗಳ ಹಂಚಿಕೆಯಲ್ಲಿ ನಡೆದಿರುವ ಬಹುಕೋಟಿ ಹಗರಣ ಬೆಳಕಿಗೆ ಬಂದ ನಂತರ ನಡೆದಿರುವ ಮೊದಲ ಸಾಮಾನ್ಯ ಸಭೆಯಾಗಿದೆ. ಹಾಗೂ ಮುಡಾ ಸಭೆಯಲ್ಲಿ ಸದಸ್ಯರಿಗೆ ಭರ್ಜರಿ ಬಾಡೂಟ ಹಾಕಿಸಲಾಗಿರುವ ಕುರಿತು ವರದಿಯಾಗಿದೆ. ಬಗೆ ಬಗೆಯಾದ ನಾನ್‌ವೆಜ್‌ ಊಟ ಮುಡಾ ಸಭೆಗೆ ಬಂದ ಸದಸ್ಯರಿಗೆ ಬಡಿಸಲಾಗಿತ್ತು.

You may also like

Leave a Comment