Home » Highcourt: ಶಿಸ್ತು ಕಾಪಾಡಲು ಶಿಕ್ಷಕರು ಮಕ್ಕಳನ್ನ ದಂಡಿಸಿದ್ರೆ ಅಪರಾಧವಲ್ಲ: ಹೈಕೋರ್ಟ್

Highcourt: ಶಿಸ್ತು ಕಾಪಾಡಲು ಶಿಕ್ಷಕರು ಮಕ್ಕಳನ್ನ ದಂಡಿಸಿದ್ರೆ ಅಪರಾಧವಲ್ಲ: ಹೈಕೋರ್ಟ್

0 comments
Lack of teachers

Highcourt: ಶಾಲೆಯಲ್ಲಿ ಶಿಸ್ತುಕಲಿಯದ ಮಕ್ಕಳ ಕಾಲಿಗೆ ಛಡಿಯೇಟು ನೀಡಿದ ಶಿಕ್ಷಕನನ್ನು ಆರೋಪದಿಂದ ಮುಕ್ತಗೊಳಿಸಿರುವ ಕೇರಳ ಹೈಕೋರ್ಟ್ (Highcourt) ಮಹತ್ವದ ತೀರ್ಪು ಹೊರಡಿಸಿದೆ.

ಮಕ್ಕಳನ್ನು ಶಿಕ್ಷಕರು ದಂಡಿಸುವುದು ಸರಿ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಇತ್ತೀಚಿನ ತೀರ್ಪಿನಲ್ಲಿ, ಕೇರಳ ಹೈಕೋರ್ಟ್ ಶಾಲಾ ಶಿಕ್ಷಕನೊಬ್ಬ ತನ್ನ ವಿದ್ಯಾರ್ಥಿಗಳನ್ನು ಹೊಡೆದಿದ್ದಕ್ಕಾಗಿ ಹೂಡಲಾದ ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದುಗೊಳಿಸಿತು.

ಮಗಳು ಜವಾಬ್ದಾರಿಯುತ ಪ್ರಜೆ ಆಗಬೇಕೆಂದರೆ ದಂಡನೆ ಅಗತ್ಯವಾಗಿದೆ, ಶಿಕ್ಷಕರ ಕ್ರಮ ಸರಿ ಇದೆ ಎಂದು ಕೋರ್ಟ್ ತೀರ್ಪು ನೀಡಿದೆ. ಪಾಲಕ್ಕಾಡ್ ಶಾಲೆಯಲ್ಲಿ 2019 ರಲ್ಲಿ 5 ನೇ ತರಗತಿ ಓದುತ್ತಿದ್ದ ಮಕ್ಕಳ ಕಾಲಿಗೆ ಛಡಿಯೇಟು ನೀಡಿದ ಶಿಕ್ಷಕನ ಕ್ರಮ ಪ್ರಶ್ನಿಸಿ ಪೋಷಕರು ಹೈಕೋರ್ಟ್ ಮೆಟ್ಟಿಲೇರಿದ್ದರು. ಪೋಷಕರು ತಮ್ಮ ಮಕ್ಕಳ ಜವಾಬ್ದಾರಿಯನ್ನು ಶಿಕ್ಷಕರಿಗೆ ನೀಡುತ್ತಾರೆ. ಮಕ್ಕಳನ್ನು ಶಿಕ್ಷಿಸುವ ಅಧಿಕಾರ ಶಿಕ್ಷಕರಿಗೆ ಇರುತ್ತದೆ. ಈ ಪ್ರಕರಣದಲ್ಲಿ ಶಿಸ್ತು ಕಲಿಸುವುದಕ್ಕಾಗಿ ಶಿಕ್ಷೆ ಕೊಟ್ಟರೇ ಹೊರತು ಉದ್ದೇಶಪೂರ್ವಕವಾಗಿ ಹಲ್ಲೆ ನಡೆಸಿಲ್ಲ ಎಂದು ಕೋರ್ಟ್ ಹೇಳಿದೆ.

You may also like