Home » Mysuru: ಮಹಿಳೆಯರೇ ಹುಷಾರ್, ತೊಳೆದಿಟ್ಟ ಪಾತ್ರೆಯೊಳಗೆ ನಾಗರಹಾವು ಪ್ರತ್ಯಕ್ಷ!

Mysuru: ಮಹಿಳೆಯರೇ ಹುಷಾರ್, ತೊಳೆದಿಟ್ಟ ಪಾತ್ರೆಯೊಳಗೆ ನಾಗರಹಾವು ಪ್ರತ್ಯಕ್ಷ!

0 comments

Mysuru: ಚಳಿಗಾಲದಲ್ಲಿ ಹಾವುಗಳು (Snakes) ಎಲ್ಲೆಂದರಲ್ಲಿ ಪ್ರತ್ಯಕ್ಷ ಆಗಿಬಿಡುತ್ವೆ. ಇದೀಗ ಅಡುಗೆ ಪಾತ್ರೆಯೊಳಗೂ (Vessels) ಉರಗ ಪ್ರತ್ಯಕ್ಷವಾಗಿದೆ.

ಹೌದು ಮೈಸೂರಿನಲ್ಲಿ (Mysuru) ಈ ಘಟನೆ ನಡೆದಿದ್ದು ಜನರು ಆತಂಕಕ್ಕೀಡಾಗುವಂತೆ ಮಾಡಿದೆ.ಮಹಿಳೆಯರೇ ಪಾತ್ರೆಗಳನ್ನು ತೊಳೆಯುವಾಗ ಎಚ್ಚರವಾಗಿರಿ. ಅಪ್ಪಿ ತಪ್ಪಿ ನೀವೇನಾದ್ರೂ ಗಮನಿಸದೇ ಪಾತ್ರೆಯೊಳಗೆ ಕೈ ಹಾಕಿದ್ರೆ ಕಥೆ ಅಷ್ಟೇ.

ಮೈಸೂರಿನಲ್ಲಿ ಪಾತ್ರೆಗಳನ್ನು ತೊಳೆದು ಇಟ್ಟಿದ್ದ ಸ್ಥಳದಲ್ಲಿ ಅಡಗಿಕೊಂಡಿದ್ದ ನಾಗರಹಾವನ್ನು ರಕ್ಷಣೆ ಮಾಡಲಾಗಿದೆ. ಮೈಸೂರಿನ ಟಿ ಕೆ ಲೇಹೌಟ್ ನ ಮನೆಯೊಂದರಲ್ಲಿ ಈ ಘಟ‌ನೆ ನಡೆದಿದೆ. ಇಲ್ಲಿನಮನೆಯ ವರಾಂಡದಲ್ಲಿ ಪಾತ್ರೆಗಳನ್ನು ತೊಳೆದು ಇಟ್ಟಿದ್ದಾಗ ಬಂದು ನಾಗರಹಾವು ಸೇರಿಕೊಂಡಿತ್ತು.ಈ ವೇಳೆ ಹಾವನ್ನು ಕಂಡೊಡನೆ ಗಾಬರಿಗೊಂಡ ಜನ ಖ್ಯಾತ ಉರಗ ಸಂರಕ್ಷಕ ಸ್ನೇಕ್ ಶಾಮ್ ಗೆ ಕರೆ ಮಾಡಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಸ್ನೇಕ್ ಶಾಮ್ ನಾಗರಹಾವು ರಕ್ಷಣೆ ಮಾಡಿ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.

You may also like