2
Chikkamagalore: ನಾಳೆ ಹಸೆಮಣೆಯೇರಬೇಕಿದ್ದ ನವವಧು ಇಂದು ಹೃದಯಾಘಾತದಿಂದ ಸಾವನ್ನಪ್ಪಿರುವ ದಾರುಣ ಘಟನೆ ಚಿ (chikkamagalore) ಜಿಲ್ಲೆಯ ಅಜ್ಜಂಪುರದಲ್ಲಿ ನಡೆದಿದೆ.
ಶೃತಿ (32) ಎಂಬ ಯುವತಿ ಜೊತೆ ತರೀಕೆರೆಯ ದಿಲೀಪ್ ಜೊತೆ ನಾಳೆ ಶೃತಿ ವಿವಾಹ ನಿಗದಿಯಾಗಿತ್ತು. ಅಜ್ಜಂಪುರ ತಾಲೂಕಿನ ಸೊಲ್ಲಾಪುರ ಗ್ರಾಮದಲ್ಲಿ ಮದುವೆ ಸಿದ್ಧತೆಯಲ್ಲಿ ಸಂತಸದಲ್ಲಿದ್ದ ವಧು ಇದ್ದಕ್ಕಿದ್ದಂತೆ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
ಮದುವೆಗೆ ಒಂದು ದಿನ ಮೊದಲು ವಧು ಹೃದಯಾಘಾತದಿಂದ ಮೃತಪಟ್ಟಿದ್ದು, ಕುಟುಂಬದಲ್ಲಿ ದುಃಖ ಮಡುಗಟ್ಟಿದೆ.
