4
Sugarcane: ಕಬ್ಬಿನ (Sugarcane) ಬೆಂಬಲ ನಿಗದಿಗಾಗಿ ನಿನ್ನೆ ಹುಕ್ಕೇರಿ ತಾಲೂಕಿನ ಹತ್ತರಗಿ ಟೋಲ್ ಬಳಿ ರೈತರು ಪ್ರತಿಭಟನೆ (Farmers Protest) ನಡೆಸುತ್ತಿದ್ದರು. ಈ ವೇಳೆ ಏಕಾಏಕಿ ಪೊಲೀಸರತ್ತ ರೈತರು ಕಲ್ಲು ತೂರಿದ್ದರು. ಈ ಸಂಬಂಧ ಇಂದು ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR( ದಾಖಲು ಮಾಡಲಾಗಿದೆ.ಕಲ್ಲು ತೂರಿದ 11 ಮಂದಿ ವಿರುದ್ಧ ಪಿಎಸ್‌ಐ ಆರ್.ವಿ ಪಾಟೀಲ್ ನೀಡಿದ ದೂರಿನನ್ವಯ ಎಫ್‌ಐಆರ್ ದಾಖಲು ಮಾಡಲಾಗಿದೆ. ಪ್ರತಿಭಟನೆ ವೇಳೆ ಪೊಲೀಸರನ್ನ (Belagavi Police) ಹಲ್ಲೆ ಮಾಡಿ ತೀವ್ರ ಗಾಯ ಗೊಳಿಸಿದ್ದಾರೆಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ.
