Sullia: ಶಾಂತಿನಗರ ತಾಲೂಕು ಕ್ರೀಡಾಂಗಣದ ಕಾಮಗಾರಿಯ ವೇಳೆ ಮಳೆ ನೀರು ಹರಿದು ಹೋಗಲು ಅಳವಡಿಸಲಾಗಿದ್ದ ಚರಂಡಿಯ ಸ್ಲಾಟ್ಗಳು ವಾಹನಗಳು ಚಲಿಸಿ ಸಂಪೂರ್ಣ ಪುಡಿ ಪುಡಿಯಾಗಿರುವ ದೃಶ್ಯ ಕಂಡು ಬಂದಿದೆ.
ಈ ಬಗ್ಗೆ ಎಚ್ಚೆತ್ತಿರುವ ಇಲಾಖೆ ಕ್ರೀಡಾಂಗಣದಲ್ಲಿ ವಾಹನ ಚಾಲನೆ ನಿರ್ಬಂಧವನ್ನು ಸೂಚಿಸಿ ಆದೇಶ ಹೊರಡಿಸಿದೆ.ಅಲ್ಲದೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಿದೆ.ಕ್ರೀಡಾಂಗಣದ ಕಾಮಗಾರಿ ನಿಧಾನವಾಗಿ ಸಾಗುತ್ತಿದ್ದು ಮಾಡಿರುವ ಕಾಮಗಾರಿಗಳು ಹಾಳಾಗದಂತೆ ನೋಡಿಕೊಳ್ಳಲು ಸಂಬಂಧಪಟ್ಟ ಇಲಾಖೆಯಿಂದ ಕ್ರೀಡಾಂಗಣದ ಬಳಿ ಹೊಸದಾಗಿ ಗೇಟ್ ನಿರ್ಮಾಣಕ್ಕೆ ಹಣ ಮಂಜೂರಾಗಿದೆ ಎಂದು ತಿಳಿದುಬಂದಿದೆ.
ಈಗಾಗಲೇ ಮಾಡಿರುವ ಕಾಮಗಾರಿಯ ಚರಂಡಿಗಳ ಸ್ಲಾಬ್ ಪುಡಿಯಾಗಿರುವುದನ್ನು ಅರಿತ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ ವತಿಯಿಂದ ಆದೇಶವನ್ನು ಹೊರಡಿಸಿದ್ದು ಕ್ರೀಡಾಂಗಣದ ಒಳಗೆ ವಾಹನಗಳ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಸದರಿ ನಿಯಮವನ್ನು ಉಲ್ಲಂಘನೆ ಮಾಡಿದ್ದಲ್ಲಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂಬ ಸೂಚನೆಯನ್ನು ನೀಡಿದೆ
