Home latest 10 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ | ಕೇರಳದ ವ್ಯಕ್ತಿಗೆ 142 ವರ್ಷ ಜೈಲು...

10 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ | ಕೇರಳದ ವ್ಯಕ್ತಿಗೆ 142 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್

0
1
Judge and gavel in courtroom

10 ವರ್ಷದ ಮಗುವಿನ ಮೇಲೆ ಎರಡು ವರ್ಷಗಳ ಕಾಲ ಲೈಂಗಿಕ ಕಿರುಕುಳ ನೀಡಿದ ವ್ಯಕ್ತಿಯೋರ್ವನಿಗೆ ನ್ಯಾಯಾಲಯ ಗರಿಷ್ಠ ಶಿಕ್ಷೆಯನ್ನು ಪ್ರಕಟಿಸಿದೆ. ನಿಜಕ್ಕೂ ಪೋಕ್ಸೋ ಪ್ರಕರಣದಲ್ಲಿ ಆರೋಪಿಗೆ ನೀಡಲಾದ ಗರಿಷ್ಠ ಶಿಕ್ಷೆಯ ಅವಧಿ ಇದಾಗಿದೆ. ಈ ಘಟನೆ ಕೇರಳದಲ್ಲಿ ನಡೆದಿದೆ. 10 ವರ್ಷದ ಬಾಲೆಯ ಪೋಷಕರೊಂದಿಗೆ ಇದ್ದ ಈ ವ್ಯಕ್ತಿ ಸಂಬಂಧಿಕನಾಗಿದ್ದು, ಅದೇ ಮನೆಯಲ್ಲಿ ವಾಸಿಸುತ್ತಿದ್ದು, ಈ ಕೃತ್ಯ ಮಾಡುತ್ತಿದ್ದ ಎನ್ನಲಾಗಿದೆ.

ಕೇರಳದ ಪತ್ತನಂತಿಟ್ಟದ ಪೋಕ್ಸೋ ನ್ಯಾಯಾಲಯವು 10 ವರ್ಷದ ಮಗುವಿನ ಮೇಲೆ ಎರಡು ವರ್ಷಗಳ ಕಾಲ ಲೈಂಗಿಕ ಕಿರುಕುಳ ನೀಡಿದ 41 ವರ್ಷದ ವ್ಯಕ್ತಿಗೆ 142 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 5 ಲಕ್ಷ ರೂ.ದಂಡ ವಿಧಿಸಿದೆ.

ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೋ) ನ್ಯಾಯಾಲಯವು ವ್ಯಕ್ತಿಗೆ ಶಿಕ್ಷೆ ನೀಡಿದೆ. ಆರೋಪಿಯು ದಂಡವನ್ನು ಪಾವತಿಸದಿದ್ದರೆ, ಅವನು ಇನ್ನೂ ಮೂರು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗುವುದು ಎಂದು ಹೇಳಿದೆ.

ಆನಂದನ್ ಪಿ ಆರ್ ಅಲಿಯಾಸ್ ಬಾಬು ಎಂಬಾತ ಮಾರ್ಚ್ 20, 2021 ರಂದು, 2019 -2021 ರ ನಡುವೆ 10 ವರ್ಷದ ಮಗುವಿನ ಮೇಲೆ ಅತ್ಯಾಚಾರ ಎಸಗಿದ್ದಕ್ಕಾಗಿ ಮತ್ತು ಆ ಎರಡು ವರ್ಷಗಳ ಅವಧಿಯಲ್ಲಿ ಆಕೆಯ ಮೇಲೆ ಅಮಾನುಷ ರೀತಿಯಲ್ಲಿ ಅನೇಕ ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಕ್ಕಾಗಿ ತಿರುವಲ್ಲಾ ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.