Home » ಆಲ್ಕೋಹಾಲ್ ಸೇವಿಸಿದ್ರೆ ಬಾಯಿ ದುರ್ವಾಸನೆ ಬರುತ್ತಾ ? ತಪ್ಪಿಸಲು ಈ ಸರಳ ಸಲಹೆಗಳನ್ನು ಅನುಸರಿಸಿ

ಆಲ್ಕೋಹಾಲ್ ಸೇವಿಸಿದ್ರೆ ಬಾಯಿ ದುರ್ವಾಸನೆ ಬರುತ್ತಾ ? ತಪ್ಪಿಸಲು ಈ ಸರಳ ಸಲಹೆಗಳನ್ನು ಅನುಸರಿಸಿ

1 comment

Alcohol breath :ನಿಮ್ಮ ಸ್ನೇಹಿತರೊಂದಿಗೆ ಮದ್ಯ ಸೇವಿಸಿ ಹೊರಗೆ ಹೋದರೆ ಬಾಯಿ ದುರ್ವಾಸನೆ ಬರುವುದು ಸಹಜ. ಕಂಠ ಪೂರ್ತಿ ಮದ್ಯ ಸೇವಿಸಿ ಸ್ನೇಹಿತರೊಂದಿಗೆ ಸುತ್ತಾಡಲು ಹೊರಗಡೆ ಹೋಗುವಾಗ ಎಚ್ಚರ ವಹಿಸುವುದು ಮುಖ್ಯವಾಗಿದೆ. ಕೆಲವೊಮ್ಮ ಮುಜುಗರಕ್ಕೆ ಒಳಗಾಗಬಹುದು. ಇಷ್ಟೇ ಅಲ್ಲದೆ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಬಾಯಿ ದುರ್ವಾಸನೆಯಿಂದ ಬಳಲುತ್ತಿರುವವರು ಈ ಸರಳ ಸಲಹೆಗಳನ್ನು ಅನುಸರಿಸುವ ಮೂಲಕ ಬಾಯಿ ದುರ್ವಾಸನೆಯನ್ನು ತಪ್ಪಿಸಬಹುದು . ಆ ಸಲಹೆಗಳು ಯಾವುವು ಅನ್ನೋದರ ಮಾಹಿತಿ ಇಲ್ಲಿದೆ ಓದಿ..

ಫ್ರೆಂಡ್ಸ್ ಜೊತೆ ಪಾರ್ಟಿಯಲ್ಲಿ ಡ್ರಿಂಕ್ಸ್ ಕುಡಿದ ನಂತರ ಬಾಯಿಯಿಂದ ಕೆಟ್ಟ ವಾಸನೆ ಬರಬಾರದು ಅಂದರೆ ಸ್ಟ್ರಾಂಗ್ ಬ್ಲ್ಯಾಕ್ ಕಾಫಿ ಕುಡಿದರೆ ಮದ್ಯದ ವಾಸನೆ ಬಾಯಿಂದ ಬರುವುದಿಲ್ಲ. ಕಪ್ಪು ಕಾಫಿಯ ರುಚಿ ತುಂಬಾ ಪ್ರಬಲವಾಗಿರುವುದರಿಂದ ಮದ್ಯದ ವಾಸನೆಯು (alcohol breath) ಬಾಯಿಯಿಂದ ಬರುವುದಿಲ್ಲ. ಆಲ್ಕೋಹಾಲ್ ಸೇವಿಸಿದ ತಕ್ಷಣ ಬಾಯಿಯನ್ನು ತೊಳೆಯುವುದು ತುಂಬಾ ಒಳ್ಳೆಯದು, ಇದರಿಂದ ಬಾಯಿ ವಾಸನೆ ಬರುವುದಿಲ್ಲ.

ಮೌತ್ ವಾಶ್ ನಿಂದ ಬಾಯಿ ಮುಕ್ಕಳಿಸುವುದರಿಂದ ಮದ್ಯದ ವಾಸನೆಯನ್ನು ಹೋಗಲಾಡಿಸುವುದು ಮಾತ್ರವಲ್ಲದೆ ಬಾಯಿಯಲ್ಲಿ ಬೆಳೆದಿರುವ ಬ್ಯಾಕ್ಟೀರಿಯಾಗಳನ್ನು ಹೋಗಲಾಡಿಸಬಹುದು ಇದರಿಂದ ಬಾಯಿ ದುರ್ವಾಸನೆ ಬರುವುದಿಲ್ಲ. ಹೀಗಾಗಿ, ಪ್ರತಿ ರಾತ್ರಿ ಮಲಗುವ ಮುನ್ನ ಮೌತ್ ವಾಶ್ ಬಳಸುವುದು ಉತ್ತಮ. ಅಲ್ಲದೆ, ಮದ್ಯ ಸೇವಿಸಿದ ನಂತರ ಮೌತ್ ವಾಶ್ ನಿಂದ ಬಾಯಿ ಮುಕ್ಕಳಿಸುವುದರಿಂದ ಮದ್ಯದ ವಾಸನೆ ಬರುವುದಿಲ್ಲ.

ಆಲ್ಕೋಹಾಲ್ ಸೇವಿಸಿದ ನಂತರ ದುರ್ವಾಸನೆ ಬರುವುದನ್ನು ತಡೆಯಲು ಅನೇಕ ಜನರು ಬೆಳ್ಳುಳ್ಳಿ ಈರುಳ್ಳಿಯನ್ನು ಸಲಾಡ್ ಜೊತೆಗೆ ತೆಗೆದುಕೊಳ್ಳುತ್ತಾರೆ, ಆದರೆ ನೀವು ಹೊರಗೆ ಹೋಗುವ ಮೊದಲು ಬೆಳ್ಳುಳ್ಳಿ ಈರುಳ್ಳಿಯನ್ನು ತೆಗೆದುಕೊಂಡರೆ, ಅದು ಬಲವಾದ ವಾಸನೆಯನ್ನು ಹೊಂದಿರುತ್ತದೆ ಮತ್ತು ಇತರರೊಂದಿಗೆ ಮಾತನಾಡಲು ಕಷ್ಟವಾಗುತ್ತದೆ. ಅದಕ್ಕಾಗಿಯೇ ಆಲ್ಕೋಹಾಲ್ ವಾಸನೆ ನಮ್ಮ ಬಾಯಿಯಿಂದ ಹೊರಬರದಂತೆ ತಡೆಯಲು ನೀವು ಮೌತ್ ವಾಶ್ ಅನ್ನು ಬಳಸಬಹುದು. ನೀವು ಈ ಸಲಹೆಗಳನ್ನು ಅನುಸರಿಸಿದರೆ, ನೀವು ನಿಜವಾಗಿಯೂ ಆಲ್ಕೋಹಾಲ್ ಸೇವಿಸಿದ್ದೀರಿ ಎಂದು ಯಾರಿಗೂ ತಿಳಿಯುವುದಿಲ್ಲ.

You may also like

Leave a Comment