Home » KKRTC ITI Jobs : ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಭರ್ಜರಿ ಉದ್ಯೋಗವಕಾಶ! ಈ ಕೂಡಲೇ ಅರ್ಜಿ ಸಲ್ಲಿಸಿ!

KKRTC ITI Jobs : ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಭರ್ಜರಿ ಉದ್ಯೋಗವಕಾಶ! ಈ ಕೂಡಲೇ ಅರ್ಜಿ ಸಲ್ಲಿಸಿ!

1 comment
KKRTC ITI Jobs

KKRTC ITI Jobs : ಇಂದಿನ ಕಾಲದಲ್ಲಿ ಉದ್ಯೋಗ ಅತ್ಯವಶ್ಯಕವಾಗಿದೆ. ಆದರೆ, ಬಯಸಿದ ಉದ್ಯೋಗ(Job) ಪಡೆಯುವುದು ಸುಲಭದ ಮಾತಲ್ಲ. ಪೈಪೋಟಿಯ ನಡುವೆ ನೆಚ್ಚಿನ ಕೆಲ್ಸ ಗಿಟ್ಟಿಸಿಕೊಳ್ಳೋದು ಯುವಜನತೆಯ ಪಾಲಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇದೀಗ, ಉದ್ಯೋಗಕಾಂಕ್ಷಿಗಳಿಗೆ ಸಿಹಿ ಸುದ್ದಿ ಇದ್ದು, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮವು ಶಿಶಿಕ್ಷು ಹುದ್ದೆಗಳ ಭರ್ತಿಗೆ( KKRTC Recruitment 2023)ನೇಮಕ ಅಧಿಸೂಚನೆ ಬಿಡುಗಡೆಗೊಳಿಸಿದೆ.

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಅಪ್ರೆಂಟಿಸ್ ಕಾಯ್ದೆ 1961 ರ ಅನುಸಾರ, ವೃತ್ತಿ ಶಿಶಿಕ್ಷು ತರಬೇತುದಾರರನ್ನು ನೇಮಕ ಮಾಡಿಕೊಳ್ಳುವ ನಿಟ್ಟಿನಲ್ಲಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ ಮಾಡಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮುನ್ನ ಹುದ್ದೆಯ ವಿವರ, ಅರ್ಹತೆ,ವೇತನಗಳ ಕುರಿತಂತೆ ಮಾಹಿತಿ ತಿಳಿದಿರುವುದು ಅವಶ್ಯಕ. ಈ ಕುರಿತ ಮಾಹಿತಿ ಇಲ್ಲಿದೆ.

ಹುದ್ದೆಗಳ ವಿವರ
ನೇಮಕಾತಿ ಪ್ರಾಧಿಕಾರ : ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ
ಹುದ್ದೆಗಳ ಹೆಸರು : ಶಿಶಿಕ್ಷು ತರಬೇತಿದಾರರು
ಹುದ್ದೆಗಳ ಸಂಖ್ಯೆ : 259

ವಿದ್ಯಾರ್ಹತೆ ( Education Qualification)
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಐಟಿಐ ಪಾಸ್ (ಆಟೋ ಇಲೆಕ್ಟ್ರೀಷಿಯನ್, ವೆಲ್ಡರ್, ಎಸ್‌ಎಮ್‌ ಡಬ್ಲ್ಯೂ, ಪೇಂಟರ್, ಆಟೋ ಎಲೆಕ್ಟ್ರೀಷಿಯನ್, ಡೀಸಲ್ ಮೆಕ್ಯಾನಿಕ್, ಮೆಕ್ಯಾನಿಕಲ್ ಮೋಟರ್ ವೆಹಿಕಲ್ ) ಆಗಿರಬೇಕು.
ಆಯ್ಕೆ ವಿಧಾನ (Selection Procedures)
ಅರ್ಹ ಅಭ್ಯರ್ಥಿಗಳನ್ನು (Candidates) ಸಂದರ್ಶನ (Interview) ಮತ್ತು ಮೂಲ ದಾಖಲೆಗಳ( Document Verification) ಪರಿಶೀಲನೆ ಮೂಲಕ ಆಯ್ಕೆ ಮಾಡಲಾಗುತ್ತದೆ. ದಿನಾಂಕ 23-03-2023 ರಂದು ಬೆಳಿಗ್ಗೆ 09-00 ಗಂಟೆಯಿಂದ ಮಧ್ಯಾಹ್ನ 03-00 ಗಂಟೆಯೊಳಗೆ ನೇರ ಸಂದರ್ಶನ ನಡೆಯಲಿದೆ.

ಶಿಶಿಕ್ಷು ನೇಮಕಾತಿಗೆ (KKRTC ITI Jobs)ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೂಲ ದಾಖಲೆಯ ಜೊತೆಗೆ ಇತರೆ ದಾಖಲೆಗಳೊಂದಿಗೆ ಸಂಬಂಧಪಟ್ಟ ವಿಭಾಗೀಯ ಕಛೇರಿಗಳಿಗೆ ನಿಗದಿತ ಸಮಯಕ್ಕೆ ಸರಿಯಾಗಿ ಸಂದರ್ಶನಕ್ಕಾಗಿ ಹಾಜರಾಗಬೇಕಾಗುತ್ತದೆ. ಈ ಹುದ್ದೆಯ ಕುರಿತ ಹೆಚ್ಚಿನ ಮಾಹಿತಿ ಪಡೆಯಲು www.kkrtc.karnataka.gov.in ಗೆ ಭೇಟಿ ನೀಡಬಹುದು.

ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರುಪಡಿಸಬೇಕಾದ ಮೂಲ ದಾಖಲೆಗಳು(Documents) ಹೀಗಿವೆ:
ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ಜಾತಿ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಐಟಿಐ ಪಾಸ್ ಸರ್ಟಿಫಿಕೇಟ್ ಮತ್ತು ಇತರೆ ದಾಖಲೆಗಳು ಬೇಕಾಗುತ್ತವೆ. ಈ ಹುದ್ದೆಗೆ ನೇರ ಸಂದರ್ಶನ (Walk In Interview )ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ (KKRTC)ವಿವಿಧ ವಿಭಾಗೀಯ ಕಛೇರಿಗಳಲ್ಲಿ ನಡೆಯಲಿದೆ. ಕಲಬುರಗಿ, ಯಾದಗಿರಿ, ಬೀದರ್, ರಾಯಚೂರು, ಬಳ್ಳಾರಿ, ಕೊಪ್ಪಳ, ಹೊಸಪೇಟೆ, ವಿಜಯಪುರ, ಪ್ರಾದೇಶಿಕ ಕಾರ್ಯಾಗಾರ ಯಾದಗಿರಿ ಗಳಲ್ಲಿ ನೇರ ಸಂದರ್ಶನ 23-03-2023 ರಂದು ನಡೆಯಲಿದ್ದು, ಆಸಕ್ತರು ಭಾಗವಹಿಸಿ ಉದ್ಯೋಗ ಪಡೆದುಕೊಳ್ಳಬಹುದು.

You may also like

Leave a Comment