Home » Udupi: ಶಿಕ್ಷಣ ಇಲಾಖೆಯಿಂದ ಉಡುಪಿ ಜಿಲ್ಲೆಯ ವಿದ್ಯಾರ್ಥಿಗಳಿಗೆ ವಿಶೇಷ ಮಾರ್ಗಸೂಚಿ ಬಿಡುಗಡೆ! ಏನದು? ಇಲ್ಲಿದೆ ಮಾಹಿತಿ

Udupi: ಶಿಕ್ಷಣ ಇಲಾಖೆಯಿಂದ ಉಡುಪಿ ಜಿಲ್ಲೆಯ ವಿದ್ಯಾರ್ಥಿಗಳಿಗೆ ವಿಶೇಷ ಮಾರ್ಗಸೂಚಿ ಬಿಡುಗಡೆ! ಏನದು? ಇಲ್ಲಿದೆ ಮಾಹಿತಿ

1 comment
Udupi Students

Udupi students : ಇತ್ತೀಚೆಗೆ ಕರಾವಳಿಯಲ್ಲಿ ತಾಪಮಾನ ವಿಪರೀತವಾಗಿದ್ದು, ಜನಜೀವನ ಕಷ್ಟಕರವಾಗಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯು (Education department ) ವಿದ್ಯಾರ್ಥಿಗಳಿಗೆ (Udupi students) ವಿಶೇಷ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಅಂದರೆ ಕರಾವಳಿಯಲ್ಲಿ ತಾಪಮಾನ ಏರಿಕೆಯ ಪರಿಣಾಮ ವಿದ್ಯಾರ್ಥಿಗಳ ಆರೋಗ್ಯ ಕೆಡಬಾರದು ಎಂಬ ಉದ್ದೇಶದಿಂದ ಪ್ರಮುಖ ನಿಯಮ ಜಾರಿಗೆ ತರಲಾಗಿದೆ.

ಸದ್ಯ ಉಡುಪಿ (Udupi) ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ, ಉಡುಪಿ ಜಿಲ್ಲೆಯ ಎಲ್ಲಾ ಶಾಲೆಗಳಿಗೆ ಸುತ್ತೋಲೆ ಬಿಡುಗಡೆ ಮಾಡಿದ್ದು, ಇಲಾಖೆಯ ಮುಖ್ಯ ಶಿಕ್ಷಕರು, ಪೋಷಕರು, ಅಡುಗೆ ಸಿಬ್ಬಂದಿಗಳಿಗೆ ಮತ್ತು ಶಾಲಾ ಮಕ್ಕಳಿಗೆ ಈ ಕುರಿತು ಮುನ್ನೆಚ್ಚರಿಕೆ ಮಾರ್ಗ ಸೂಚಿ ಬಿಡುಗಡೆ ಮಾಡಲಾಗಿದೆ.

ಮುಖ್ಯವಾಗಿ ಬೆಳಗ್ಗೆ 11 ರಿಂದ ಮದ್ಯಾಹ್ನ 3 ರ ವರೆಗೆ ಬಿಸಿಲಿನಲ್ಲಿ ಆಟವಾಡದೇ ಇರಲು ಸೂಚನೆ ನೀಡಲಾಗಿದೆ. ಇನ್ನು ಅಗತ್ಯ ಸಂದರ್ಭದಲ್ಲಿ ಹೊರಗೆ ಹೋಗಲೇಬೇಕಾದ ಸಂದರ್ಭದಲ್ಲಿ ಪಾದರಕ್ಷೆ, ಕೊಡೆ, ಟೊಪ್ಪಿ ಇತರೆ ಬಿಸಿಲು ರಕ್ಷ ಕವಚ ಬಳಕೆ ಮಾಡುವಂತೆ ಸೂಚಿಸಲಾಗಿದೆ. ಅದಲ್ಲದೆ ಬಾಯಾರಿಕೆ ಇಲ್ಲದಿದ್ದರೂ ಸಾಕಷ್ಟು ನೀರನ್ನು ಆಗಾಗ ಕುಡಿಯುವುದು ಮುಖ್ಯ ಎಂದು ತಿಳಿಸಿದ್ದಾರೆ.

ಇನ್ನು ಅಡುಗೆ ತಯಾರಿ ಸಂದರ್ಭದಲ್ಲಿ ಕಿಟಕಿ ಬಾಗಿಲುಗಳನ್ನು ತೆರೆದಿಡಲು ಸೂಚನೆ ನೀಡಲಾಗಿದೆ. ಮುಖ್ಯವಾಗಿ ಆಹಾರದಲ್ಲಿ (food ) ಸೊಪ್ಪು ತರಕಾರಿ ಮತ್ತು ಹಣ್ಣುಗಳನ್ನು ಹೆಚ್ಚು ಬಳಕೆ ಮಾಡಲು ಹೇಳಿದ್ದಾರೆ. ಅದಲ್ಲದೆ ನಿಯಮಿತವಾಗಿ ಕೈ ತೊಳೆದು ಆಹಾರ ಸೇವಿಸುವುದು ಮುಖ್ಯ ಎಂದು ಮಾರ್ಗಸೂಚಿ ಮೂಲಕ ತಿಳಿಸಲಾಗಿದೆ.

You may also like

Leave a Comment