Home » Naga Chaitanya : ಕೊನೆಗೂ ಗರ್ಲ್ ಫ್ರೆಂಡ್ ಜೊತೆ ಸಿಕ್ಕಾಕೊಂಡ ನಾಗ ಚೈತನ್ಯ! ಯಾರೀ ಬೆಡಗಿ?

Naga Chaitanya : ಕೊನೆಗೂ ಗರ್ಲ್ ಫ್ರೆಂಡ್ ಜೊತೆ ಸಿಕ್ಕಾಕೊಂಡ ನಾಗ ಚೈತನ್ಯ! ಯಾರೀ ಬೆಡಗಿ?

1 comment
Naga chaitanya

Naga chaitanya : ಟಾಲಿವುಡ್ ಸ್ಟಾರ್ (Tollywood)ನಾಗಚೈತನ್ಯ ಹಾಗೂ ಸಮಂತಾ (Samantha)ಅವರು ದೂರ ಆಗಿರುವ ವಿಚಾರ ಎಲ್ಲರಿಗೂ ತಿಳಿದೇ ಇದೆ. ಸಮಂತಾ ಅವರ ಜೊತೆ ಡಿವೋರ್ಸ್(divorce) ಆದ ಬಳಿಕ ನಾಗಾಚೈತನ್ಯ (Naga chaitanya)ಅವರು ಡೇಟಿಂಗ್ ವಿಚಾರದಲ್ಲಿ ಸುದ್ದಿಯಾಗುತ್ತಲೇ ಇರುತ್ತಿದ್ದಾರೆ. ಕಳೆದ ಕೆಲವು ತಿಂಗಳಿಂದ ನಾಗ ಚೈತನ್ಯ ಅವರು ನಟಿಯಾದ ಶೋಭಿತಾ ಅವರ ಜೊತೆ ಡೇಟಿಂಗ್ ನಲ್ಲಿ ಇದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಲೇ ಇದೆ. ಇಬ್ಬರೂ ಕೂಡ ಪ್ರವಾಸ, ಔಟಿಂಗ್ ಅಂತ ಅಲ್ಲಿ ಎಲ್ಲಿ ಸುತ್ತಡುತ್ತಲೇ ಇದ್ದಾರೆ. ಇವರು ಆಗಾಗ ಕ್ಯಾಮರಾ ಕಣ್ಣಿಗೂ ಕೂಡ ಬಿದ್ದಿದ್ದಾರೆ. ಆದರೆ ಇದೀಗ ಅವರಿಬ್ಬರೂ ಲಂಡನ್ ನ ಹೋಟೆಲ್ ನಲ್ಲಿ ಜೊತೆಯಾಗಿ ಇರುವ ಫೋಟೋ ವೈರಲ್ (photo viral) ಆಗಿದೆ.

ಲಂಡನ್ ನ ಹೋಟೆಲ್ ಒಂದಕ್ಕೆ ಡಿನ್ನರ್ಗಾಗಿ ಶೋಭಿತಾ ಅವರ ಜೊತೆ ಹೋಗಿದ್ದ ನಾಗಚೈತನ್ಯ. ಇದೀಗ ಇವರಿಬ್ಬರ ಫೋಟೋ ಸಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಫೋಟೋವನ್ನು ಹೋಟೆಲ್‌ನ ಬಾಣಸಿಗ ಸುರೇಂದರ್ ಮೋಹನ್ ಅವರು ಶೇರ್ ಮಾಡಿದ್ದರು. ಈ ಫೋಟೋದಿಂದಾಗಿ ನಾಗಚೈತನ್ಯ ಹಾಗೂ ಶೋಬಿತಾ ಅವರು ಡೇಟಿಂಗ್ ನಲ್ಲಿ ಇರುವುದು ಕನ್ಫರ್ಮ್ ಎಂದು ನೆಟ್ಟಗಿರುವ ಕಮೆಂಟ್ ಮಾಡುತ್ತಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಫೋಟೋ ಪೋಸ್ಟ್ ಮಾಡಿದ್ದ ಸುರೇಂದರ್ ಮೋಹನ್. ಈ ಫೋಟೋದಲ್ಲಿ ಶೋಭಿತಾ ಕೂಡ ಇದ್ದಾರೆ. ಸುರೇಂದರ್ ಅವರು ಫೋಟೋ ವೈರಲ್ ಆಗುತ್ತಿದ್ದಂತೆ ಡಿಲೀಟ್ ಮಾಡಿದ್ದಾರೆ. ಇನ್ಸ್ಟಾಗ್ರಾಮ್ ಖಾತೆಯಲ್ಲಿ ಇದ್ದ ಫೋಟೋ ಇದೀಗ ಮಾಯವಾಗಿದೆ. ಕಣ್ಮರೆ ಆಗಿರುವ ಫೋಟೋ ಇನ್ನಷ್ಟು ಅನುಮಾನಕ್ಕೆ ಕಾರಣವಾಗಿದೆ.

ಕಳೆದ ನವೆಂಬರ್ ನಲ್ಲಿ ನಾಗಚೈತನ್ಯ ಮತ್ತು ಶೋಭಿತಾ ಲಂಡಲ್‌ನಲ್ಲಿರುವ ಫೋಟೋ ವೈರಲ್ ಆಗಿತ್ತು. ಆದರೆ ಆ ಫೋಟೋದಲ್ಲಿ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. ಆದರೂ ಕೂಡ ಅವರ ಡೇಟಿಂಗ್ ವಿಚಾರ ವಾದಂತಿಯಲ್ಲಿತ್ತು. ಆದರೆ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. ಇಬ್ಬರ ಫೋಟೋಗಳನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಲಾಗಿದೆ. ಈ ವಿಚಾರ ಫೇಕೆ ಎಂಬ ಮಾತು ಕೇಳಿ ಬಂದಿತ್ತು. ಇದೀಗ ಮತ್ತೆ ಇಬ್ಬರೂ ಒಟ್ಟಿಗೆ ಲಂಡನ್ ನ ಹೋಟೆಲ್ ನಲ್ಲಿ ಕಾಣಿಸಿಕೊಂಡಿರುವುದು ನೆಟ್ಟಿಗರಿಗೆ ಅಚ್ಚರಿಯಾಗಿದೆ.

ನಾಗ ಚೈತನ್ಯ ಅವರ ಒಂದು ಹಳೆಯ ಸಂದರ್ಶನದಲ್ಲಿ ನಿರೂಪಕರು ಶೋಬಿತ ಅವರ ಜೊತೆಗಿನ ಡೇಟಿಂಗ್ ನ ವಿಚಾರದ ಬಗ್ಗೆ ಪ್ರಶ್ನೆ ಕೇಳಿದಾಗ ನಾಗ ಚೈತನ್ಯ ಅವರು ಜೋರಾಗಿ ನಕ್ಕು, ಈ ನನ್ನ ನಗುವೇ ಇದಕ್ಕೆ ಉತ್ತರ ಎಂದಿದ್ದರು. ಹಾಗೆಯೇ ಶೋಭಿತ ಅವರು ಕೂಡ ಪರೋಕ್ಷವಾಗಿ ವದಂತಿಗಳನ್ನು ಅಲ್ಲಿಯೆ ತಳ್ಳಿ ಹಾಕಿದ್ದರು. ಇಬ್ಬರು ಕೂಡ ಡೇಟಿಂಗ್ ಹಾಗೂ ಪ್ರೀತಿ ವಿಚಾರದ ಬಗ್ಗೆ ಯಾವುದೇ ಮಾಹಿತಿಯನ್ನು ಎಲ್ಲಿಯೂ ಬಿಟ್ಟು ಕೊಟ್ಟಿಲ್ಲ. ಆದರೂ ನೆಟ್ಟಿಗರು ಇವರಿಬ್ಬರೂ ಡೇಟಿಂಗ್ ನಲ್ಲಿ ಇರುವುದು ಕನ್ಫರ್ಮ್ ಎನ್ನುತ್ತಿದ್ದಾರೆ. ಈ ವಿಷಯದ ಕನ್ಫರ್ಮ್ ಗಾಗಿ ಕಾದು ನೋಡಬೇಕಷ್ಟೆ.

ಇದನ್ನೂ ಓದಿ: Chamayavilakku Festival: ಸಾಮೂಹಿಕವಾಗಿ ಹೆಂಗಳೆಯರಾದ ಹುಡುಗರು, ‘ಅವಳಂತೆ’ ಬಟ್ಟೆ ತೊಟ್ಟ ‘ಅವನಿಗೆ’ ಸಿಕ್ತು ಬಹುಮಾನ!

You may also like

Leave a Comment