Home » Liquor : ಗಮನಿಸಿ ಮದ್ಯಪ್ರಿಯರೇ, ಈ ನಾಲ್ಕು ದಿನ ಮದ್ಯ ಸಿಗಲ್ಲ! ಕಾರಣ ಇಲ್ಲಿದೆ!

Liquor : ಗಮನಿಸಿ ಮದ್ಯಪ್ರಿಯರೇ, ಈ ನಾಲ್ಕು ದಿನ ಮದ್ಯ ಸಿಗಲ್ಲ! ಕಾರಣ ಇಲ್ಲಿದೆ!

5 comments
No Liquor

No Liquor : ಮದ್ಯ ಪ್ರಿಯರೇ ಗಮನಿಸಿ! ನಿಮಗೊಂದು ಮುಖ್ಯ ಮಾಹಿತಿ ಇಲ್ಲಿ ನೀಡಲಾಗಿದೆ. ಚುನಾವಣೆಯ ಕಾವು ಎಲ್ಲೆಡೆ ಕಂಡುಬರುತ್ತಿದೆ. ಈ ನಡುವೆ, ಚುನಾವಣಾ ಆಯೋಗ ವಿಧಾನಸಭೆ ಚುನಾವಣೆ ಮತ್ತು ಮತ ಎಣಿಕೆಯ ಹಿನ್ನೆಲೆ ರಾಜ್ಯದಲ್ಲಿ ಒಟ್ಟು ನಾಲ್ಕು ದಿನಗಳಲ್ಲಿ ಮದ್ಯ(No Liquor) ಸಿಗುವುದಿಲ್ಲ ಎಂದು ಮಾಹಿತಿ ನೀಡಿದೆ.

ವಿಧಾನಸಭೆ ಚುನಾವಣೆ(Assembly election) ಮತ್ತು ಮತ ಎಣಿಕೆಯ (Counting of votes)ಹಿನ್ನೆಲೆ ಕರ್ನಾಟಕ ರಾಜ್ಯದ 8,9,10 ಮತ್ತು 13 ರಂದು ಮದ್ಯ ಸಿಗುವುದಿಲ್ಲ ಎಂದು ಚುನಾವಣಾ ಆಯೋಗ (Election Commission)ಮಾಹಿತಿ ನೀಡಿದೆ. ಇದರ ಜೊತೆಗೆ ಮತದಾನದ ಮುಕ್ತಾಯಕ್ಕೆ ನಿಗದಿಪಡಿಸಿದ ಗಂಟೆಯೊಂದಿಗೆ ಕೊನೆಗೊಳ್ಳುವ 48 ಗಂಟೆಯ ಸಮಯದಲ್ಲಿ ಮತದಾನದ ಪ್ರದೇಶದೊಳಗಿನ ಎಲ್ಲಾ ಸಂಸ್ಥೆಗಳಲ್ಲಿ ಮದ್ಯ(Liquor) ಮಾರಾಟ ಮತ್ತು ಮಾರಾಟವನ್ನು ನಿಷೇಧ ಹೇರಲಾಗಿರುವ ಕುರಿತು ಮಾಹಿತಿ ನೀಡಿದೆ.

ಮೇ 13 ರಂದು ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಶುರುವಾಗಲಿದೆ ಆಯೋಗ ಮಾಹಿತಿ ನೀಡಿದ್ದು, ಮತ ಎಣಿಕೆ ದಿನವೂ ಕೂಡ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ಮೇಲೆ ತಿಳಿಸಿದ ಅವಧಿಯಲ್ಲಿ ವ್ಯಕ್ತಿಗಳಿಂದ ಮದ್ಯದ ಸಂಗ್ರಹಣೆಯನ್ನು ತಡೆ ಹಿಡಿಯುವ ಕುರಿತು ಪತ್ರದಲ್ಲಿ ತಿಳಿಸಲಾಗಿದ್ದು, ಈ ಕ್ರಮಗಳನ್ನು ಜಾರಿಗೊಳಿಸಲು ಸಮಗ್ರ ಸೂಚನೆಗಳನ್ನು ನೀಡುವಂತೆ ರಾಜ್ಯ ಸರ್ಕಾರವನ್ನು ತಿಳಿಸಿದೆ. ಇದು ಮರು ಮತದಾನದ ದಿನಾಂಕಗಳನ್ನು ಕೂಡ ಒಳಗೊಂಡಿರುತ್ತದೆ ಎಂದು ಇಸಿಐ ಕಾರ್ಯದರ್ಶಿ ಸಂಜೀವ್ ಕುಮಾರ್ ಪ್ರಸಾದ್ ಮುಖ್ಯ ಕಾರ್ಯದರ್ಶಿ ಮತ್ತು ಮುಖ್ಯ ಚುನಾವಣಾ ಅಧಿಕಾರಿಗಳಿಗೆ ಪತ್ರದಲ್ಲಿ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

You may also like

Leave a Comment