Home » Women teacher-Student love story ಹೈಸ್ಕೂಲಿನಲ್ಲೇ ತನ್ನ ಶಿಕ್ಷಕಿಯನ್ನು ಪ್ರೇಮಿಸಿದ್ದ ಈಕೆ 16 ವರ್ಷಗಳ ಬಳಿಕ ಆಕೆಯನ್ನೇ ಮದುವೆಯಾದ್ಲು!

Women teacher-Student love story ಹೈಸ್ಕೂಲಿನಲ್ಲೇ ತನ್ನ ಶಿಕ್ಷಕಿಯನ್ನು ಪ್ರೇಮಿಸಿದ್ದ ಈಕೆ 16 ವರ್ಷಗಳ ಬಳಿಕ ಆಕೆಯನ್ನೇ ಮದುವೆಯಾದ್ಲು!

by ಹೊಸಕನ್ನಡ
1 comment
Women teacher-Student love story

Women teacher-Student love story : ಹದಿಹರಯದ ಪ್ರಾಯವೆಂದರೆ ಅದು ಶಾಲಾ, ಕಾಲೇಜಿನಲ್ಲಿ ಕಲಿಯುವಂತಹ ಸಮಯ. ಈ ಸಮಯದಲ್ಲಿ ಹುಡುಗ-ಹುಡುಗಿಯರಿಗೆ ಪ್ರೇಮಾಂಕುರವಾಗುವುದು ಸಹಜ. ಕೆಲವೊಮ್ಮೆ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ತಮ್ಮ ಶಿಕ್ಷಕರ ಮೇಲೆ ಪ್ರೀತಿ ಮೂಡುವುದು ಸಾಮಾನ್ಯ. ಇನ್ನು ಕೆಲವೊಮ್ಮೆ ಶಿಕ್ಷಕರಿಗೇ ವಿದ್ಯಾರ್ಥನಿಯರ ಮೇಲೆ ಲವ್ ಆಗಿಬಿಡುತ್ತದೆ. ಇಂತಹ ಹಲವಾರು ಪ್ರಕರಣಗಳು ಬೆಳಕಿಗೆ ಬಂದಿವೆ. ಇತ್ತೀಚೆಗಿದು ತೀರಾ ಸಾಮಾನ್ಯವಾಗಿದೆ. ಆದರೆ ಇಲ್ಲೊಬ್ಬ ಮಹಿಳೆಯ ಶಾಲಾ ಪ್ರೀತಿ ಬಗ್ಗೆ ಕೇಳಿದ್ರೆ ನಿಮಗೆ ನಿಜಕ್ಕೂ ಆಶ್ಚರ್ಯ ಆಗಬಹುದು.

ಹೌದು, ಇಲ್ಲೊಬ್ಬಳು ಅಮೆರಿಕದ ಮಿಚಿಗನ್ ನಿವಾಸಿ, 31 ವರ್ಷದ ಮೊನಿಕಾ ಕೆಚುಮ್ ಎಂಬ ಮಹಿಳೆ ತಾನು ಹೈಸ್ಕೂಲಿನಲ್ಲಿದ್ದಾಗ ತನ್ನ ಶಿಕ್ಷಕಿಯನ್ನು ಅಚಾನಕ್ಕಾಗಿ ಪ್ರೀತಿ ಮಾಡಿದ್ಧಾಳೆ (Women teacher-Student love story). ಆದರೆ ತಾನು ತೇರ್ಗಡೆಯಾದ 16 ವರ್ಷಗಳ ನಂತರ ಪ್ರೀತಿಸಿದ್ದ ಅದೇ ಶಿಕ್ಷಕಿಯನ್ನೇ ಹುಡುಕಿಕೊಂಡು ಬಂದಿದ್ದಾಳೆ. ಹುಡುಕಿಕೊಂಡು ಬಂದಿರೋದು ಮಾತ್ರವಲ್ಲದೆ ಆಕೆಯನ್ನು ಮದುವೆಯಾಗುವುದಾಗಿ ಹೇಳಿ ಸದ್ಯ ನಿಶ್ಚಿತಾರ್ಥವನ್ನೂ ಮಾಡಿಕೊಂಡಿದ್ದಾಳೆ.

ಅಂದಹಾಗೆ 31 ವರ್ಷದ ಮೋನಿಕಾ ಅಂದು ಹೈಸ್ಕೂಲಿನಲ್ಲಿ ಕಲಿಯುತ್ತಿದ್ದಾಗ ತನ್ನ ಶಿಕ್ಷಕಿಯಾದ ಪೋಸ್ಟರ್ ಮಿಚೆಲ್ ಅವರನ್ನು ಪ್ರೀತಿಸುತ್ತಿದ್ದಳು. 2004ರಲ್ಲಿ ಫೋಸ್ಟರ್ ಅವರು ಮೋನಿಕಾಗೆ ವಿಜ್ಞಾನ ಶಿಕ್ಷಕಿಯಾಗಿದ್ದರು. ಆಗ ಮೋನಿಕಾಳ ವಯಸ್ಸು ಕೇವಲ 13 ವರ್ಷ. ಶಾಲೆ ಬಿಟ್ಟು 16 ವರ್ಷಗಳ ನಂತರವೂ ಶಿಕ್ಷಕಿಯ ಕುರಿತಾಗಿ ಆಕೆಯ ಪ್ರೀತಿ (Love) ಹಾಗೆಯೇ ಇತ್ತು. ಹಾಗಾಗಿ ಮೋನಿಕಾ ತನ್ನ ಮೆಚ್ಚಿನ ಶಿಕ್ಷಕಿಯನ್ನು ಹುಡುಕಲು ನಿರ್ಧರಿಸಿದಳು. ಕೊನೆಗೆ ಫೇಸ್‌ಬುಕ್‌ನಲ್ಲಿ 56 ವರ್ಷದ ತನ್ನ ನೆಚ್ಚಿನ ಶಿಕ್ಷಕಿ ಫೋಸ್ಟರ್‌ನನ್ನು ಹುಡುಕಾಡಲು ಆರಂಭಿಸೇ ಬಿಟ್ಟಳು.

ಅಂತೂ ಕೊನೆಗೆ ಆಗಸ್ಟ್ 2021ರಲ್ಲಿ ಮೋನಿಕಾ ಹಾಗೂ ಫೋಸ್ಟರ್ ಪರಸ್ಪರ ಭೇಟಿಯಾದರು. ಮತ್ತೆ ಮತ್ತೆ ಭೇಟಿಯಾಗಿ ಹತ್ತಿರವಾದರು. ಡಿನ್ನರ್‌ ಡೇಟ್ ನಂತರ ಇಬ್ಬರ ನಡುವೆ ಬಾಂಧವ್ಯ ಬೆಳೆಯಿತು. ಆಪ್ತರಾದರು. ಮೋನಿಕಾ ಮತ್ತು ಮಿಚೆಲ್ ಅವರ ಸ್ನೇಹವು ಹತ್ತಿರವಾಗುತ್ತಿದ್ದಂತೆ, ತಮ್ಮ ನಡುವಿರುವುದು ಪ್ರಣಯ ಸಂಬಂಧ ಎಂದು ಅವರು ಶೀಘ್ರದಲ್ಲೇ ಅರಿತುಕೊಂಡರು. ನಂತರ 2022 ರಲ್ಲಿ, ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡರು

ಈ ಕುರಿತು ಮಾತನಾಡಿದ ಪೋಸ್ಟರ್ ಮಿಚೆಲ್ ಅವರು, ಭೇಟಿಯ ಬಳಿಕ ಇಬ್ಬರೂ ಹೆಚ್ಚು ಆಪ್ತತೆಯನ್ನು ಬೆಳೆಸಿಕೊಂಡೆವು. ಈಗ ನಾವಿಬ್ಬರೂ ಯಾವ ವಿಷಯವನ್ನಾದರೂ ಚರ್ಚಿಸಬಹುದು. ಇಬ್ಬರೂ ಪರಸ್ಪರ ಸುರಕ್ಷಿತ ಭಾವನೆಯನ್ನು ಅನುಭವಿಸುತ್ತೇವೆ’ ಎಂದು ಹೇಳಿದ್ದಾರೆ. ಅಲ್ಲದೆ ಮೋನಿಕಾ ತನಗೆ ಹೇಗೆ ಪ್ರಪೋಸ್ ಮಾಡಿದರು ಎಂಬುದನ್ನು ಕೂಡ ಪೋಸ್ಟರ್ ಬಹಿರಂಗಪಡಿಸಿದರು.

ಫೋರ್ಕ್‌ಲಿಫ್ಟ್ ಡ್ರೈವರ್ ಮತ್ತು ಕಂಟೆಂಟ್ ಕ್ರಿಯೇಟರ್ ಆಗಿರುವ ಮೋನಿಕಾ, ಲಿಸ್ಬಿಯಿನ್ ಆಗಿರುವ ಕುರಿತು ಕುಟುಂಬದಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಆದರೆ ಮೋನಿಕಾ ಅವರು 16 ವರ್ಷಗಳ ನಂತರ ಫೋಸ್ಟರ್‌ನ್ನು ಫೇಸ್‌ಬುಕ್‌ನಲ್ಲಿ ಮೀಟ್ ಆಗುವ ವರೆಗೆ ನಾವು ವಿದ್ಯಾರ್ಥಿ-ಶಿಕ್ಷಕಿಗಿಂತ ಬೇರೆ ಯಾವುದೇ ಸಂಬಂಧವನ್ನು (Relationship) ಹೊಂದಿರಲಿಲ್ಲ ಎಂದು ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ: Actress Rakshita Prem Birthday : ರಕ್ಷಿತಾ ಹುಟ್ಟುಹಬ್ಬಕ್ಕೆ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಸ್ಪೆಷಲ್‌ ಆಗಿ ವಿಶ್‌ ಮಾಡಿದ್ದು ಯಾವ ರೀತಿ ಗೊತ್ತಾ?

You may also like

Leave a Comment