Home » Free Travel Facility For Senior Citizen : ಹಿರಿಯ ನಾಗರಿಕರೇ ನಿಮಗಿದೋ ಜಾಕ್‌ಪಾಟ್‌ ಸುದ್ದಿ!

Free Travel Facility For Senior Citizen : ಹಿರಿಯ ನಾಗರಿಕರೇ ನಿಮಗಿದೋ ಜಾಕ್‌ಪಾಟ್‌ ಸುದ್ದಿ!

1 comment
Free Travel Facility For Senior Citizen

Free Travel Facility For Senior Citizen : ಕೇಂದ್ರ ಮತ್ತು ರಾಜ್ಯ ಸರ್ಕಾರ ಹಿರಿಯ ನಾಗರಿಕರಿಗೆ ಹಲವು ಸೌಲಭ್ಯಗಳನ್ನು ಒದಗಿಸುತ್ತಿವೆ. ಈ ಮಧ್ಯೆ ಇದೀಗ ಹಿರಿಯ ನಾಗರಿಕರಿಗೆ (Senior Citizen) ಜಾಕ್‌ಪಾಟ್‌ ಸುದ್ದಿ ಇಲ್ಲಿದೆ. ಹೌದು, ರಾಜ್ಯ ಸರ್ಕಾರ ಹಿರಿಯ ಪ್ರಯಾಣಿಕರ ಟಿಕೆಟ್ ದರವನ್ನು ಇಳಿಕೆ ಮಾಡಿದ್ದು (Free Travel Facility For Senior Citizen) , ಇನ್ನು ಮುಂದೆ ಅರ್ಧದಷ್ಟು ಪ್ರಯಾಣ ದರವನ್ನು ಪಾವತಿಸಿದರೆ ಸಾಕು!!.

ಈ ಸೌಲಭ್ಯವನ್ನು ಮಹಾರಾಷ್ಟ್ರ (maharastra) ಮತ್ತು ಹರಿಯಾಣ ಸರ್ಕಾರಗಳು ಇದೀಗ ಪ್ರಾರಂಭಿಸಿದ್ದು, ಇದರಿಂದ ಹಿರಿಯ ನಾಗರಿಕರಿಗೆ ಭಾರೀ ಸಹಾಯವಾಗಲಿದೆ. ಈ ಸೌಲಭ್ಯವು ಏಪ್ರಿಲ್ 1 ರಿಂದ ಜಾರಿಗೆ ಬಂದಿದೆ. ಸದ್ಯ ಈ ಸೌಲಭ್ಯವನ್ನು ಪ್ರಸ್ತುತ ರಾಜ್ಯ ಸಾರಿಗೆ ಸಂಸ್ಥೆ ಒದಗಿಸುತ್ತಿದೆ‌.

ಮಹಾರಾಷ್ಟ್ರದಲ್ಲಿ ಮಹಿಳಾ ಸಮ್ಮಾನ್ ಯೋಜನೆ (mahila samman yojana) ಅಡಿಯಲ್ಲಿ, ಮಹಿಳೆಯರಿಗೆ ಬಸ್ ಟಿಕೆಟ್ ದರದಲ್ಲಿ ಶೇಕಡಾ 50 ರಷ್ಟು ಕಡಿಮೆ ಮಾಡಲಾಗಿದ್ದು, ಇದೀಗ ಹಿರಿಯ ನಾಗರಿಕರ ಪ್ರಯಾಣ ದರದಲ್ಲಿಯೂ ಶೇ.50ರಷ್ಟು ಇಳಿಕೆಯಾಗಿದೆ. ಬಜೆಟ್ ಅಧಿವೇಶನದಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಈ ವಿಷಯವನ್ನು ಪ್ರಕಟಿಸಿದ್ದು, ಇದರೊಂದಿಗೆ ಹರಿಯಾಣ ಸರ್ಕಾರವು ಹಿರಿಯ ನಾಗರಿಕರ ಟಿಕೆಟ್ ದರವನ್ನು ಕಡಿಮೆ ಮಾಡಿದೆ.

ಯಾರೆಲ್ಲಾ ಈ ಪ್ರಯೋಜನ ಪಡೆಯಬಹುದು?
• ಈ ಸೌಲಭ್ಯವು ಹರಿಯಾಣ ರಾಜ್ಯದಲ್ಲಿ ವಾಸಿಸುವ ಜನರಿಗೆ ಮಾತ್ರ ಲಭ್ಯವಿದೆ.
• ಈ ಪ್ರಯೋಜನವನ್ನು 65 ರಿಂದ 75 ವರ್ಷದೊಳಗಿನ ಹಿರಿಯ ನಾಗರಿಕರು ಪಡೆಯಲಿದ್ದಾರೆ.
• ಇದಿಷ್ಟೇ ಅಲ್ಲದೆ, ರಾಜ್ಯ ಸರ್ಕಾರವು 75 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಉಚಿತ ಬಸ್ ಸೇವೆಗಳನ್ನು ಒದಗಿಸುತ್ತದೆ.
• ಈ ಸೌಲಭ್ಯವನ್ನು ಪಡೆಯಬೇಕಾದರೆ ಬಸ್‌ನಲ್ಲಿ ಪ್ರಯಾಣಿಸುವ ವೇಳೆ ಟಿಕೆಟ್ ಬುಕ್ ಮಾಡುವಾಗ ನಿಮ್ಮ ಹರಿಯಾಣ ನಿವಾಸದ ಪುರಾವೆಯನ್ನು ತೋರಿಸಬೇಕು.

ಈ ಮಧ್ಯ ದೆಹಲಿ (Delhi) ಮತ್ತು ಪಂಜಾಬ್‌ನಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕಲ್ಪಿಸಲಾಗಿದೆ. ಕರ್ನಾಟಕ (karnataka) ಮತ್ತು ಆಂಧ್ರಪ್ರದೇಶದಲ್ಲಿ ಹಿರಿಯ ನಾಗರಿಕರಿಗೆ ಬಸ್ ದರದಲ್ಲಿ ರಿಯಾಯಿತಿ ನೀಡಲಾಗುತ್ತದೆ ಎನ್ನಲಾಗಿದೆ.

You may also like

Leave a Comment