Home » Actor Prakash raj: ಟ್ವೀಟ್ ಮಾಡಿ ಕಿಚ್ಚನನ್ನು ಕಿಚಾಯಿಸ್ತಿರೋ ಪ್ರಕಾಶ್ ರಾಜ್! ನಿಮ್ ‘ಮಾಮ’ ಸಹಾಯ ಮಾಡಿದ್ರೆ ನೀವು ದುಡಿದಿದ್ರಲ್ಲಿ 30% ಕೊಡಿ, ಜನರಿಗೆ ಉತ್ತರಿಸಲು ರೆಡಿಯಾಗಿ!

Actor Prakash raj: ಟ್ವೀಟ್ ಮಾಡಿ ಕಿಚ್ಚನನ್ನು ಕಿಚಾಯಿಸ್ತಿರೋ ಪ್ರಕಾಶ್ ರಾಜ್! ನಿಮ್ ‘ಮಾಮ’ ಸಹಾಯ ಮಾಡಿದ್ರೆ ನೀವು ದುಡಿದಿದ್ರಲ್ಲಿ 30% ಕೊಡಿ, ಜನರಿಗೆ ಉತ್ತರಿಸಲು ರೆಡಿಯಾಗಿ!

by ಹೊಸಕನ್ನಡ
2 comments
Prakash raj tweet

Prakash raj tweet : ವಿಧಾನಸಭೆ ಚುನಾವಣೆ ಕಣ ರಂಗೇರಿರುವ ಹೊತ್ತಿನಲ್ಲಿ ಮೂರೂ ಪಕ್ಷಗಳು ಚುನಾವಣೆ ರಣತಂತ್ರಗಳು ಜೋರಾಗಿದೆ. ಪ್ರಸ್ತುತ ಮೂರೂ ಪಕ್ಷಗಳು ಚುನಾವಣೆಗೆ ಆಕಾಂಕ್ಷಿಗಳ ಟಿಕೆಟ್‌ ಫೈನಲ್‌ ಮಾಡೋದ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಕನ್ನಡದ ಹೆಸರಾಂತ ನಟ ಸುದೀಪ್(Sudeep) ಅವ್ರು ಬಿಜೆಪಿ(BJP) ಬೆಂಬಲಿಸಿ ಸಿಎಂ ಬೊಮ್ಮಾಯಿ(CM) ಪರ ಪ್ರಚಾರ ನಡೆಸುವುದಾಗಿ ಹೇಳಿರುವುದು ಬಿಜೆಪಿಗೆ ಆನೆ ಬಲ ಸಿಕ್ಕಂತಾಗಿದೆ. ಈ ವಿಚಾರವಾಗಿ ರಾಜ್ಯದಲ್ಲಿ ಪರ ವಿರೋಧಗಳ ಚರ್ಚೆಯೂ ನಡೆಯುತ್ತಿದೆ. ಈ ನಡುವೆ ಸುದೀಪ್‌ ಅವರ ನಿರ್ಧಾರಕ್ಕೆ ಪ್ರಕಾಶ್‌ ರಾಜ್‌ ತೀವ್ರ ಆಘಾತ ವ್ತಕ್ತಪಡಿಸಿ ಟ್ವಿಟ್ ಗಳ (Prakash raj tweet) ಮೂಲಕ ಕಿಚ್ಚನನ್ನು ಕೆಣಕುತ್ತಿದ್ದಾರೆ.

ಹೌದು, ನಟ ಸುದೀಪ್ (Sudeep), ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಅವರಿಗೆ ಬೆಂಬಲ ಸೂಚಿಸಿ, ಸಿಎಂ ಸೂಚಿಸಿದ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡುವುದಾಗಿ ಹೇಳಿರುವುದು ರಾಜ್ಯದ ಪ್ರಮುಖ ರಾಜಕೀಯ ಬೆಳವಣಿಗೆಯಾಗಿ ಚರ್ಚೆಯಲ್ಲಿದೆ. ಸುದೀಪ್ ಅವರು ಹೀಗೆ ಪರೋಕ್ಷವಾಗಿ ಬಿಜೆಪಿಗೆ ಬೆಂಬಲ ಘೋಷಿಸಿರುವುದನ್ನು ಬಿಜೆಪಿ ಬೆಂಬಲಿಗರು ಸ್ವಾಗತಿಸಿದ್ದರೆ, ಹಲವರು ಟೀಕಿಸಿದ್ದಾರೆ. ನಟ ಪ್ರಕಾಶ್ ರಾಜ್ (Prakash Raj) ಸಹ ಸುದೀಪ್ ಅವರ ಈ ಪರೋಕ್ಷ ಬೆಂಬಲಕ್ಕೆ ಅಸಮಾಧಾನ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಯಾಂಡಲ್‌ವುಡ್‌ ಸ್ಟಾರ್‌ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ತಮ್ಮ ‘ಮಾಮ’ ಹಾಗೂ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿಗೆ ಬೆಂಬಲ ನೀಡುವುದು ಮಾತ್ರವಲ್ಲದೆ ಕೆಲ ಆಪ್ತರ ಪರವಾಗಿ ಪ್ರಚಾರ ಮಾಡುವುದಾಗಿ ಹೇಳಿದ್ದರು. ಇದೇ ವೇಳೆ ಪ್ರಕಾಶ್‌ ರಾಜ್‌ ಅವರ ಟ್ವೀಟ್‌ಗೂ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯೆ ನೀಡಿದ್ದರು. ಈಗ ಸುದೀಪ್‌ ಅವರ ಮಾತಿಗೆ ಪರೋಕ್ಷವಾಗಿ ಟಾಂಗ್‌ ನೀಡಿರುವ ಹಿರಿಯ ನಟ ಪ್ರಕಾಶ್‌ ರಾಜ್‌ ಗುರುವಾರ ಈ ಕುರಿತಾಗಿ ಟ್ವೀಟ್‌ ಮಾಡಿ ‘ನೋಡ್ರಪ್ಪ… ನಿಮ್ ಮಾಮನೊ.. ನಿಮ್ ಅತ್ತೇನೊ.. ನಿಮ್ ಕಷ್ಟಕಾಲದಲ್ಲಿ ಸಹಾಯ ಮಾಡಿದ್ರೆ.. ನೀವು ದುಡಿದಿದ್ರಲ್ಲಿ 10%..20% ಇಲ್ಲ 30 % ಕೊಡಿ….. ಅದು ನಿಮ್ಮಿಷ್ಟ .. ಆದ್ರೆ .. ಪ್ರಜೆಗಳ 30% ಕೊಳ್ಳೆ ಹೊಡೆಯೊಕ್ ಬಿಡ್ಬೀಡಿ .. ಅಷ್ಟೆ..ಅಷ್ಟೇ..’ ಎಂದು ಪರೋಕ್ಷವಾಗಿ ಸುದೀಪ್‌ಗೆ ಟಾಂಗ್‌ ನೀಡಿದ್ದಾರೆ.

ಅಲ್ಲದೆ ಮತ್ತೊಂದು ಟ್ವೀಟ್ ನಲ್ಲಿ ಸುದೀಪ್ ಹೆಸರು ಉಲ್ಲೇಖಿಸಿ “ಸುದೀಪ್, ಒಬ್ಬ ಮೇರು ಕಲಾವಿದನಾಗಿ ಸಮಾಜದ ಎಲ್ಲ ವರ್ಗದ ಪ್ರೀತಿಯಿಂದ ಬೆಳೆದ ನೀವು ,ಜನ ಸಾಮಾನ್ಯನ ದನಿಯಾಗುವಿರಿ ಎಂದು ಆಶಿಸಿದ್ದೆ.ಆದರೆ ತಾವು ಒಂದು ರಾಜಕೀಯ ಪಕ್ಷದ ಬಣ್ಣ ಬಳಿದುಕೊಳ್ಳುತ್ತೀರಿ ಎಂದು ನಿರೀಕ್ಷಿಸಿರಲ್ಲ. ಇನ್ನು ಮುಂದೆ ನಿಮ್ಮನ್ನೂ , ನಿಮ್ ಪಕ್ಷವನ್ನು ಪ್ರಶ್ನಿಸುವ ಜನ ದನಿಗೆ ತಯಾರಾಗಿರಿ” ಎಂದು ಪ್ರಕಾಶ್ ರಾಜ್ ಟ್ವೀಟ್ ಮಾಡಿದ್ದಾರೆ.

ಸುದೀಪ್ ಅವರು ಬಿಜೆಪಿಗೆ ಬೆಂಬಲ ಘೋಷಣೆ ಮಾಡಿದ ಸುದ್ದಿಗೋಷ್ಠಿಯಲ್ಲಿ ಪ್ರಕಾಶ್ ರಾಜ್ ಅವರ ಟ್ವೀಟ್​ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ್ದ ಸುದೀಪ್, ಪ್ರಕಾಶ್ ರಾಜ್ ಒಬ್ಬ ಅದ್ಭುತ ನಟ. ಅವರೊಟ್ಟಿಗೆ ರನ್ನ ಸಿನಿಮಾದಲ್ಲಿ ನಟಿಸಿದ್ದೇನೆ. ಮತ್ತೊಮ್ಮೆ ಅವರೊಟ್ಟಿಗೆ ನಟಿಸಲು ಉತ್ಸುಕನಾಗಿದ್ದೇನೆ ಎಂದಷ್ಟೆ ಹೇಳಿ, ವಿಷಯಾಂತರ ಮಾಡಿ, ಪ್ರಕಾಶ್ ರಾಜ್​ರ ಪ್ರಶ್ನೆಯನ್ನು ಅಲಕ್ಷಿಸಿದ್ದರು.

ಇದನ್ನೂ ಓದಿ: Dhruvanarayan’s wife is no more: ಧ್ರುವನಾರಾಯಣ್ ಪತ್ನಿ ವೀಣಾ ನಿಧನ! ಪತಿ ಅಗಲಿದ 15 ದಿನಗಳ ಅಂತರದಲ್ಲೇ ಪತ್ನಿಯೂ ವಿಧಿವಶ

You may also like

Leave a Comment