Home » Girls smoking cigarettes and singing national anthem: ಧಂ ಎಳೆಯುತ್ತಾ ‘ಜನ ಗಣ ಮನ’ ಹಾಡಿ ಹುಚ್ಚಾಟ ಮೆರೆದ ಹುಡುಗಿಯರು! ರಾಷ್ಟ್ರಗೀತೆಗೆ ಅಪಮಾನ ಮಾಡಿದಕ್ಕಾಗಿ ಕೇಸ್‌ ದಾಖಲು

Girls smoking cigarettes and singing national anthem: ಧಂ ಎಳೆಯುತ್ತಾ ‘ಜನ ಗಣ ಮನ’ ಹಾಡಿ ಹುಚ್ಚಾಟ ಮೆರೆದ ಹುಡುಗಿಯರು! ರಾಷ್ಟ್ರಗೀತೆಗೆ ಅಪಮಾನ ಮಾಡಿದಕ್ಕಾಗಿ ಕೇಸ್‌ ದಾಖಲು

by ಹೊಸಕನ್ನಡ
1 comment
Singing national anthem

Singing national anthem : ಎಲ್ಲೇ ಇರಲಿ, ಹೇಗೆ ಇರಲಿ ರಾಷ್ಟ್ರ ಗೀತೆ(National Anthem) ನಮ್ಮ ಕಿವಿಗೆ ಬಿದ್ದ ಕೂಡಲೆ ಮೈ ರೊಮಾಂಚನವಾಗುತ್ತೆ. ಆ ಕೂಡಲೆ ಎದ್ದು ನಿಂತೋ ಅಥವಾ ಏನಾದರು ಕೆಲಸ ಮಾಡುತ್ತಿದ್ದರೆ ಅದನ್ನು ಅಲ್ಲೇ ಬಿಟ್ಟೋ ರಾಷ್ಟ್ರ ಗೀತೆಗೆ ಗೌರವ ಸಲ್ಲಿಸುತ್ತೇವೆ. ಕಾನೂನು ಕೂಡ ಇದನ್ನೇ ಹೇಳುತ್ತದೆ. ಆದರೆ ಇಲ್ಲೊಂದೆಡೆ ಯುವತಿಯರಿಬ್ಬರು ಧಂ ಎಳೆಯುತ್ತಾ, ರಾಷ್ಟ್ರಗೀತೆಗೆ ಅಪಮಾನ ಮಾಡಿ, ವಿಡಿಯೋವನ್ನು ಫೇಸ್ ಬುಕ್ ಗೆ ಅಪ್ಲೋಡ್ ಮಾಡಿ ಹುಚ್ಚಾಟ ನಡೆಸಿದ್ದಾರೆ.

ಹೌದು, ಪಶ್ಚಿಮ ಬಂಗಾಳದಲ್ಲಿ(West Bengal) ಯುವತಿಯರಿಬ್ಬರು ಯುವತಿಯರು ಸಿಗರೇಟ್‌ ಸೇದುತ್ತಾ ರಾಷ್ಟ್ರಗೀತೆಗೆ (Singing national anthem )ಅಪಮಾನ ಮಾಡಿ, ಹುಚ್ಚಾಟ ನಡೆಸಿದ್ದಾರೆ. ರಾಷ್ಟ್ರಗೀತೆಯನ್ನು ಅಣಕಿಸಿ ಫೇಸ್‌ಬುಕ್‌ನಲ್ಲಿ ವಿಡಿಯೋ ಅಪ್ಲೋಡ್ ಮಾಡಿದ್ದ ಇಬ್ಬರು ಯುವತಿಯರ ವಿರುದ್ಧ ಪಶ್ಚಿಮ ಬಂಗಾಳದಲ್ಲಿ ಪೊಲೀಸರಿಗೆ ದೂರು ನೀಡಲಾಗಿದೆ. ವಕೀಲ ಅತ್ರಯೀ ಹಾಲ್ದರ್ ಅವರು ಲಾಲ್‌ಬಜಾರ್ ಸೈಬರ್ ಘಟಕ ಹಾಗೂ ಬಾರಕ್‌ಪುರ ಕಮಿಷರಿಯೇಟ್‌ಗಳಲ್ಲಿ ದೂರು ದಾಖಲಿಸಿದ್ದಾರೆ.

ವಿಡಿಯೋದಲ್ಲಿ ಒಬ್ಬಾಕೆ ಕೈಯಲ್ಲಿ ಸಿಗರೇಟ್ ಹಿಡಿದು ವಿಚಿತ್ರವಾಗಿ ನಗುತ್ತಾ ರಾಷ್ಟ್ರಗೀತೆಯನ್ನು ಮನಬಂದಂತೆ ಹಾಡಿದ್ದಾಳೆ. ಪಕ್ಕದಲ್ಲಿ ಕುಳಿತಿದ್ದ ಯುವತಿ ಸಹ ಆಕೆಯಂತೆಯೇ ವರ್ತಿಸಿದ್ದು, ಆ ಸಿಗರೇಟ್ ಅನ್ನು ಕಿತ್ತುಕೊಂಡು, ಇದು ಧ್ವಜ, ಧ್ವಜ ಎಂದು ಇಂಗ್ಲಿಷ್‌ನಲ್ಲಿ ಹೇಳಿದ್ದಾಳೆ. ಕೊನೆಯಲ್ಲಿ ರಾಷ್ಟ್ರಗೀತೆ ಹಾಡಿದ ಮೊದಲ ಯುವತಿ ಕ್ಷಮೆ ಕೇಳುತ್ತೇನೆ ಹಾಸ್ಯವಾಗಿ ಹೇಳಿದ್ದಾಳೆ.

ಈ ಪೋಸ್ಟ್ ಮಾಡಲಾಗಿದ್ದ ಫೇಸ್‌ಬುಕ್ ಖಾತೆಯನ್ನು ಡಿಲೀಟ್ ಮಾಡಿರುವುದರಿಂದ ಈಗ ವಿಡಿಯೋ ಅದರಲ್ಲಿ ಲಭ್ಯವಿಲ್ಲ. ಆದರೆ ಕೆಲವರು ವೀಡಿಯೋವನ್ನ ಟ್ವಿಟ್ಟರ್‌ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಸಿಗರೇಟ್ ಸೇದುತ್ತಾ ಕುಳಿತಿರುವ ಯುವತಿಯರು ಉದ್ದೇಶಪೂರ್ವಕವಾಗಿ ರಾಷ್ಟ್ರಗೀತೆಯ ಸಾಲುಗಳನ್ನ ವ್ಯಂಗ್ಯವಾಗಿ ಹಾಡಿ, ಅಪಮಾನ ಮಾಡಿದ್ದಾರೆ ಎನ್ನಲಾಗಿದೆ.

ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಅನುಪಮ್ ಭಟ್ಟಾಚಾರ್ಯ ಎಂಬುವವರು ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು ಅಲ್ಲಿಂದ ನೂರಾರು ಮಂದಿ ಶೇರ್ ಮಾಡಿದ್ದಾರೆ. ಕಾಮೆಂಟ್ ಬಾಕ್ಸ್‌ನಲ್ಲಿ ಯುವತಿಯರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಅವರಿಬ್ಬರನ್ನೂ ಕೂಡಲೇ ಬಂಧಿಸಬೇಕು ಎಂದಿರುವ ಜನರು, ಅವರ ಪೋಷಕರ ವಿರುದ್ಧ ಕೂಡ ಹರಿಹಾಯ್ದಿದ್ದಾರೆ. ಅವರಿಬ್ಬರ ಗುರುತನ್ನು ಬಹಿರಂಗಪಡಿಸಿಲ್ಲ. ಅವರಿಬ್ಬರೂ ಪ್ರಾಪ್ತ ವಯಸ್ಸು ದಾಟಿದವರೇ ಅಥವಾ ಅಪ್ರಾಪ್ತರೇ ಎನ್ನುವುದು ಖಚಿತವಾಗಿಲ್ಲ.

ಈ ಖಾತೆ ಬಗ್ಗೆ ಹೆಚ್ಚುವರಿ ಮಾಹಿತಿ ನೀಡುವಂತೆ ಲಾಲ್‌ಬಜಾರ್ ಪೊಲೀಸರು ಫೇಸ್‌ಬುಕ್‌ಗೆ ಪತ್ರ ಬರೆದಿದ್ದಾರೆ ಎಂದು ಮೂಲಗಳು ತಿಳಿಸಿದ್ದಾರೆ. ಫೇಸ್‌ಬುಕ್ ಖಾತೆ ಡಿಲೀಟ್ ಮಾಡಿದ ನಂತರ ಇಬ್ಬರು ಹೆಣ್ಣುಮಕ್ಕಳು ಮತ್ತೊಂದು ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಲೈವ್ ಬಂದಿದ್ದು, ತಮ್ಮ ಗೆಳೆಯರ ಬಳಗದಲ್ಲಿ ಪಂಥ ಕಟ್ಟಿದ ಬಳಿಕ ತಮಾಷೆಗಾಗಿ ಈ ರೀತಿ ವಿಡಿಯೋ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ. ಈ ಸಂಬಂಧ ಕೇಸ್‌ ದಾಖಲಿಸಿಕೊಂಡಿರುವ ಪಶ್ಚಿಮ ಬಂಗಾಳ ಪೊಲೀಸರು (Westbengal Police) ತನಿಖೆ ನಡೆಸುತ್ತಿದ್ದಾರೆ.

 

 

 

ಇದನ್ನು ಓದಿ : PM Kisan 14th Installment : ಪಿಎಂ ಕಿಸಾನ್ 14 ನೇ ಕಂತು ಬಿಡುಗಡೆಗೆ ಈ ದಾಖಲೆ ಅಗತ್ಯ! 

You may also like

Leave a Comment