Home » Actor Kiccha Sudeep : ತನ್ನ ವಿರುದ್ಧ ಸುದ್ದಿ ಪ್ರಸಾರ ಮಾಡಬಾರದೆಂದು ಕೋರ್ಟ್ ಮೊರೆ ಹೋದ ನಟ ಸುದೀಪ್!

Actor Kiccha Sudeep : ತನ್ನ ವಿರುದ್ಧ ಸುದ್ದಿ ಪ್ರಸಾರ ಮಾಡಬಾರದೆಂದು ಕೋರ್ಟ್ ಮೊರೆ ಹೋದ ನಟ ಸುದೀಪ್!

1 comment
Actor Kiccha Sudeep

Actor Kiccha Sudeep: ಇತ್ತಿಚೆಗೆ ನಟ ಕಿಚ್ಚ ಸುದೀಪ್ (Actor Kiccha Sudeep) ಅವರಿಗೆ ಎರಡೆರಡು ಬೆದರಿಕೆ ಪತ್ರಗಳು ಬಂದಿದ್ದು, ಪತ್ರದಲ್ಲಿ ನಟನ ಖಾಸಗಿ ವಿಡಿಯೋ (Private Video) ಬಹಿರಂಗ ಪಡಿಸುವುದಾಗಿ ಬರೆಯಲಾಗಿತ್ತು. ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಇದೀಗ ಈ ಬಗ್ಗೆ ನಟ ಕೋರ್ಟ್ ಮೊರೆ ಹೋಗಿದ್ದಾರೆ.

ಹೌದು, ಸುದೀಪ್ ತಮಗೆ ಬಂದಿದ್ದ ಅನಾಮದೇಯ ಪತ್ರದಲ್ಲಿನ ವಿಷಯದ ಕುರಿತು, ತನ್ನ ಮೇಲೆ ಬಂದಿರುವ ಆರೋಪಕ್ಕೆ ಸಂಬಂಧಿಸಿದ ಅಂಶಗಳನ್ನು ಮಾಧ್ಯಮಗಳಲ್ಲಿ‌ ಪ್ರಸಾರ ಮಾಡಬಾರದು. ‌ಈ ಬಗ್ಗೆ ತಡೆ ನೀಡಬೇಕೆಂದು ಕೋರಿ ಮೆಯೋಹಾಲ್ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ‌ ಸಂಬಂಧ ವಿಚಾರಣೆ ನಡೆಸಿರುವ ಸೆಷನ್ಸ್ ಕೋರ್ಟ್ ನಿಂದ ಇಂದು ಆದೇಶ ಹೊರಬೀಳುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

ಇನ್ನು ಪತ್ರದಲ್ಲಿ ಸುದೀಪ್ ಗೆ ಜೀವ ಬೆದರಿಕೆ ಹಿನ್ನೆಲೆ ಕಿಚ್ಚ ಸುದೀಪ್ ಪರವಾಗಿ ಪುಟ್ಟೇನಹಳ್ಳಿ ಠಾಣೆಯಲ್ಲಿ ಮಂಜು ದೂರು ನೀಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ. ಅಲ್ಲದೆ, ಮಂಜು ನಟ ಕಿಚ್ಚ ಸುದೀಪ್ ಅವರಿಗೆ ಗನ್ ಮ್ಯಾನ್ ನೀಡುವಂತೆ ನಗರ ಪೊಲೀಸ್ ಆಯುಕ್ತರ ಕಚೇರಿಗೆ ಮನವಿ ಸಲ್ಲಿಸಿದ್ದಾರೆ. ಹಿರಿಯ ಅಧಿಕಾರಿಗಳು ಮೀಟಿಂಗ್ ನಲ್ಲಿ ಇದ್ದ ಕಾರಣ ವಾಪಸ್ಸಾಗಿದ್ದಾರೆ.

You may also like

Leave a Comment