Home » Relationship : ಹೆಂಡತಿಯೋರ್ವಳ ಫೈನಾನ್ಸ್ ಉದ್ಯೋಗಿ ಜೊತೆ ಲವ್ವಿ ಡವ್ವಿ; ಇಬ್ಬರು ಮಕ್ಕಳ ಗೋಳಾಟ, ಕರಗದ ತಾಯಿ ಹೃದಯ!

Relationship : ಹೆಂಡತಿಯೋರ್ವಳ ಫೈನಾನ್ಸ್ ಉದ್ಯೋಗಿ ಜೊತೆ ಲವ್ವಿ ಡವ್ವಿ; ಇಬ್ಬರು ಮಕ್ಕಳ ಗೋಳಾಟ, ಕರಗದ ತಾಯಿ ಹೃದಯ!

1 comment
Relationship

Relationship : ವಿವಾಹವಾದ ಮಹಿಳೆಯೋರ್ವಳು ತನ್ನ ಇಬ್ಬರು ಮಕ್ಕಳು ಹಾಗೂ ಗಂಡನನ್ನು ತೊರೆದು, ಇನ್ನೋರ್ವನನ್ನು ಮದುವೆಯಾಗಿರುವ (Relationship) ಘಟನೆ ರಾಜಸ್ಥಾನದ ಉದಯಪುರದಲ್ಲಿ ನಡೆದಿದೆ.

ರಾಜಸ್ಥಾನದ (rajastan) ಉದಯಪುರ ಜಿಲ್ಲೆಯ ಸಾಲುಂಬಾರ್ ಪ್ರದೇಶದಲ್ಲಿ ಮಮತಾ ಎಂಬ ಮಹಿಳೆ ತನ್ನ ಗಂಡ ಹಾಗೂ ಮಕ್ಕಳನ್ನು ತೊರೆದು, ಫೈನಾನ್ಸ್ ಉದ್ಯೋಗಿಯನ್ನು ಪ್ರೀತಿಸಿ ಮದುವೆಯಾಗಿದ್ದಾಳೆ. ಇತ್ತ ತಾಯಿಯಿಲ್ಲದೆ ಇಬ್ಬರು ಹೆಣ್ಣು ಮಕ್ಕಳು ಗೋಳಾಡುತ್ತಿದ್ದು, ಸದ್ಯ ಮಹಿಳೆಯ ಪತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಫೈನಾನ್ಸ್ (finance) ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕ ಸಾಲದ ಕಂತು ತೆಗೆದುಕೊಳ್ಳಲು ಗ್ರಾಮಕ್ಕೆ ಬರುತ್ತಿದ್ದ ಎನ್ನಲಾಗಿದೆ. ಈ ವೇಳೆ ವಿವಾಹಿತ ಮಹಿಳೆಗೆ ಆತನ ಮೇಲೆ ಪ್ರೀತಿಯಾಗಿದ್ದು, ಏಪ್ರಿಲ್ 2 ರಂದು ತನ್ನ ಪ್ರಿಯಕರನೊಂದಿಗೆ ಮಹಿಳೆ ಕಾನೂನು ರೀತಿಯಲ್ಲಿ ಮದುವೆ ಮಾಡಿಕೊಂಡಿದ್ದಾರೆ.

ಮೊದಲೇ ಮದುವೆಯಾಗಿದ್ದ ಮಹಿಳೆಯ ಈ ನಿರ್ಧಾರಕ್ಕೆ ಕುಟುಂಬಸ್ಥರು, ಸ್ಥಳೀಯರು ದಂಗಾಗಿದ್ದಾರೆ. ಮಹಿಳೆಗೆ 10 ವರ್ಷ ಮತ್ತು 5 ವರ್ಷದ ಹೆಣ್ಣು ಮಕ್ಕಳಿದ್ದಾರೆ. ಇಬ್ಬರೂ ಮಕ್ಕಳು ತಾಯಿಯ ಈ ನಿರ್ಧಾರದಿಂದ ಬೆಚ್ಚಿಬಿದ್ದಿದ್ದು, ಅತ್ತು ಅತ್ತು ತಾಯಿಯನ್ನು ಎಷ್ಟು ಬೇಡಿಕೊಂಡರೂ ತಾಯಿಯ ಮನೆ ಕರಗದೇ ಇಲ್ಲ. ಕೊನೆಗೆ ತಾಯಿಯ ಕಾಲಿಗೆ ಬಿದ್ದು, “ನಮ್ಮನ್ನು ಬಿಟ್ಟು ಹೋಗಬೇಡ ಅಮ್ಮ” ಎಂದು ಎಷ್ಟು ಬೇಡಿ, ಅತ್ತರೂ ಪ್ರಯೋಜನಕ್ಕೆ ಬಾರಲೇ ಇಲ್ಲ. ಮಹಿಳೆ ಮಕ್ಕಳನ್ನು ಬಿಟ್ಟು ಹೊರಟೇ ಹೋದಳು.

ಸದ್ಯ ಮಹಿಳೆಯ ಪತಿ ಹಾಗೂ ಇಬ್ಬರು ಪುತ್ರಿಯರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ವಿವಾಹಿತ ಮಹಿಳೆಯೂ ತನಗೆ ಹಾಗೂ ತನ್ನ ಪ್ರಿಯಕರನಿಗೆ ತನ್ನ ಮಾಜಿ ಪತಿಯಿಂದ ಪ್ರಾಣಕ್ಕೆ ಹಾನಿಯಿದೆ ಎಂದು ಎಸ್ಪಿ ಕಚೇರಿಗೆ ಮನವಿ ಸಲ್ಲಿಸಿದ್ದಾರೆ.

 

ಇದನ್ನು ಓದಿ :  Gold-Silver Price today : ಇಂದು ಕೂಡಾ ಚಿನ್ನದ ದರದಲ್ಲಿ ಭಾರೀ ಇಳಿಕೆ!

You may also like

Leave a Comment