Home » IRCTC : IRCTCಯಿಂದ ಬಂಪರ್ ಅವಕಾಶ ! ಕೇವಲ ರೂ.990 ಗೆ ತಿಮ್ಮಪ್ಪನ ದರ್ಶನ !!!ಕಂಪ್ಲೀಟ್ ವಿವರ ಇಲ್ಲಿದೆ

IRCTC : IRCTCಯಿಂದ ಬಂಪರ್ ಅವಕಾಶ ! ಕೇವಲ ರೂ.990 ಗೆ ತಿಮ್ಮಪ್ಪನ ದರ್ಶನ !!!ಕಂಪ್ಲೀಟ್ ವಿವರ ಇಲ್ಲಿದೆ

1 comment
IRCTC

IRCTC Timmappa Darshan offer : ತಿರುಪತಿ ತಿಮ್ಮಪ್ಪನ  ದರ್ಶನ (IRCTC Timmappa Darshan offer) ಪಡೆಯಲು ಕಾತರಿಸುತ್ತಿರುವ ಭಕ್ತಾದಿಗಳಿಗೆ ಬಾಗು ಮುಖ್ಯ ಮಾಹಿತಿ ಇಲ್ಲಿದೆ. IRCTCಯಿಂದ ನಿಮಗಾಗಿ ಭರ್ಜರಿ ಆಫರ್ ನೀಡಲಾಗುತ್ತಿದ್ದು, 990 ರೂ.ಪಾವತಿಸಿ ಒಂದೇ ದಿನದಲ್ಲಿ ತಿಮ್ಮಪ್ಪನ ದರ್ಶನ ಪಡೆಯಬಹುದಾಗಿದೆ.

ತಿರುಪತಿಯ ತಿಮ್ಮಪ್ಪನ ದರ್ಶನಕ್ಕೆ ಹೋಗಬೇಕೆಂದುಕೊಂಡರೂ ಒಂದೇ ದಿನಕ್ಕೆ ದರ್ಶನ ಮಾಡುವುದು ಕಷ್ಟವಾಗಿರುವ ಜೊತೆಗೆ ಸಮಯದ ಅಭಾವದಿಂದ ಪ್ರಯಾಣ ಕೈಗೊಳ್ಳಲಾಗದೆ ಉಳಿದವರು ಸಾಕಷ್ಟು ಮಂದಿ ಇದ್ದಾರೆ. ಹೀಗಾಗಿ, ಇಂತಹ ಮಂದಿಗಾಗಿ ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (IRCTC) ಬಂಪರ್‌ ಆಫ‌ರ್‌ ಘೋಷಣೆ ಮಾಡಿದೆ. ಕೇವಲ ಒಂದೇ ದಿನದಲ್ಲಿಯೇ ಕೇವಲ 990 ರೂ. ಮೂಲಕ ತಿರುಪತಿ ದರ್ಶನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಸದ್ಯ ಏ.15ಕ್ಕೆ ಈ ಸುವರ್ಣ ಅವಕಾಶ ಕಲ್ಪಿಸಲಾಗಿದೆ.

ಬಾಲಾಜಿ ದರ್ಶನಕ್ಕೆಂದು ತಿರುಪತಿಗೆ ಹೋಗುತ್ತಿರುವವರು ಐಆರ್‌ಸಿಟಿಸಿ ಮೂಲಕ ಪ್ಯಾಕೇಜ್‌ನ ನಿಯಮದಂತೆ ಎಸಿ ಬಸ್‌ನಲ್ಲಿ ಪ್ರಯಾಣಿಕರನ್ನು ಕರೆದೊಯ್ದು ತಿರುಪತಿ ತಿಮ್ಮಪ್ಪನ ದರ್ಶನ ಮಾಡಿಸಲಾಗುತ್ತದೆ. ಅಷ್ಟೇ ಅಲ್ಲದೇ, ಬಾಲಾಜಿ ದರ್ಶನದ ಜೊತೆಗೆ ತಿರುಚಾನೂರು ಪದ್ಮಾವತಿ ದರ್ಶನ ಕೂಡ ಮಾಡಿಸಲಾಗುತ್ತದೆ. ದರ್ಶನದ ಬಳಿಕ ಪ್ರಯಾಣಿಕರನ್ನು ಮತ್ತೆ ರೈಲ್ವೆ ನಿಲ್ದಾಣಕ್ಕೆ ಕರೆತರಲಾಗುತ್ತದೆ. ಬಾಲಾಜಿ ದರ್ಶನ್‌ ಟಿಕೆಟ್‌ ಬುಕ್‌ ಮಾಡಿಕೊಳ್ಳಬಹುದಾಗಿದ್ದು, ಟಿಕೆಟ್‌ ಬುಕ್‌(Ticket Booking) ಮಾಡಿಕೊಂಡವರನ್ನು ತಿರುಪತಿ ರೈಲ್ವೆ ನಿಲ್ದಾಣದಿಂದ(Railway Station) ಐಆರ್‌ಸಿಟಿಸಿ ರಸ್ತೆಸಾರಿಗೆ ಕರೆದುಕೊಂಡು ಹೋಗಲಿದೆ.

You may also like

Leave a Comment