Home » Vinod Raj: ಮದುವೆ ಗುಟ್ಟು ಬಹಿರಂಗವಾದ ಕೂಡಲೇ ಮತ್ತೊಮ್ಮೆ ಎಡವಟ್ಟು ಮಾಡಿಕೊಂಡ್ರಾ ವಿನೋದ್‌ ರಾಜ್‌! ಜನ ಏನಂತಿದ್ದಾರೆ ನೋಡಿ!

Vinod Raj: ಮದುವೆ ಗುಟ್ಟು ಬಹಿರಂಗವಾದ ಕೂಡಲೇ ಮತ್ತೊಮ್ಮೆ ಎಡವಟ್ಟು ಮಾಡಿಕೊಂಡ್ರಾ ವಿನೋದ್‌ ರಾಜ್‌! ಜನ ಏನಂತಿದ್ದಾರೆ ನೋಡಿ!

1 comment
Vinod Raj

Vinod Raj: ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ವಿಚಾರವೆಂದರೆ, ನಟ ವಿನೋದ್‌ ರಾಜ್‌ (Vinod Raj) ಅವರ ಹುಟ್ಟು, ಮದುವೆಯ ಗುಟ್ಟಿನ ವಿಚಾರ. ಈ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ (Social Media) ನಿರ್ದೇಶಕ ಪ್ರಕಾಶ್‌ ರಾಜ್‌ ಮೆಹು (Prakash Raj) ಕಿಡಿ ಹಚ್ಚಿದ್ದು, ಇದೀಗ ಆ ಕಿಡಿ ಎಲ್ಲೆಡೆ ಹಬ್ಬಿದೆ.

ವಿನೋದ್ ರಾಜ್ ಅವರಿಗೆ ಈಗಾಗಲೇ ಮದುವೆಯಾಗಿದ್ದು, (Marriage) ಅಷ್ಟೆ ಅಲ್ಲದೇ, ಎದೆಯೆತ್ತರಕ್ಕೆ ಬೆಳೆದಿರುವ ಒಬ್ಬ ಮಗ ಕೂಡ ಇದ್ದಾನೆ ಎಂದು ಪೋಸ್ಟ್ ಮೂಲಕ ಪ್ರಕಾಶ್‌ ರಾಜ್‌ ಹೇಳಿದ್ದರು. ಈ ಹೇಳಿಕೆ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದು, ಇದಕ್ಕೆ
ಲೀಲಾವತಿಯವರು ಪ್ರತಿಕ್ರಿಯಿಸಿ, “ಹೌದು, ನನ್ನ ಮಗನಿಗೆ ಮದುವೆ ಮಾಡಿದ್ದೀನಿ. ತಿರುಪತಿಯಲ್ಲಿ ಮದುವೆ ನಡೆದಿತ್ತು” ಎಂದಿದ್ದರು.

ಬಳಿಕ ವಿನೋದ್ ರಾಜ್ ಖಾರವಾಗಿ ಪ್ರತಿಕ್ರಿಯೆ ನೀಡಿದ್ದು, ಮದುವೆ ವಿಚಾರವಾಗಿ ಇಷ್ಟೊಂದು ಚರ್ಚೆಯಾಗುತ್ತಿದೆ. ಭಯೋತ್ಪಾದನೆ ಆಗಿದೆಯೇ? ಭೂಮಿ ಅಲ್ಲೋಲ ಕಲ್ಲೋಲ ಆಗಿದೆಯಾ? ಮದುವೆಯಾಗಿರುವುದು ಅಷ್ಟೇ! ಎಂದು ಹೇಳುವ ಮೂಲಕ ತಾಯಿ-ಮಗ ಇಬ್ಬರೂ ಮದುವೆ ಆಗಿದೆ ಎಂಬ ಸತ್ಯ ಹೊರಹಾಕಿದ್ದರು, ಇದೀಗ ಮದುವೆ (vinod Raj marriage) ಗುಟ್ಟು ಬಹಿರಂಗವಾದ ಬೆನ್ನಲ್ಲೆ ವಿನೋದ್‌ ಎಡವಟ್ಟು ಮಾಡಿಕೊಂಡ್ರಾ ಎನ್ನುವಂತಿದೆ ಈ ವಿಚಾರ!.

ಹೌದು, ಇಷ್ಟೆಲ್ಲಾ ರಾದ್ಧಾಂತಗಳ ಮಧ್ಯೆ ವಿನೋದ್ ರಾಜ್ ಮುಸ್ಲಿಂ ಬಾಂಧವರ ಜೊತೆಗೆ ಊಟಕ್ಕೆ ಕುಳಿತಿರುವ ದೃಶ್ಯಗಳು ವೈರಲ್ ಆಗಿದ್ದು, ನೆಟ್ಟಿಗರು ಪರ, ವಿರೋಧ ಕಾಮೆಂಟ್ ಮಾಡುತ್ತಿದ್ದಾರೆ.

ಮುಸ್ಲಿಂ ಬಾಂಧವರ ಪವಿತ್ರ ರಂಜಾನ್ ಸಮಯ ನಡೆಯುತ್ತಿದ್ದು, ವಿನೋದ್ ರಾಜ್ ನೆಲಮಂಗಲದಲ್ಲಿ ಇರುವ ದರ್ಗಾಗೆ ಊಟವನ್ನು ನೀಡಿ, ಅವರ ಜೊತೆಗೆ ಕುಳಿತು ಊಟ ಮಾಡಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಫೋಟೋ ನೋಡಿದ ಕೆಲವರು “ಇದೆಲ್ಲ ಈಗ ಬೇಕಿತ್ತಾ” ಎಂದು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ.

You may also like

Leave a Comment