Woman married Bhaiya : ಆಕೆ 8 ವರ್ಷಗಳವರೆಗೆ ಆತನನ್ನು ಭಯ್ಯಾ(Bhayya) ಎಂದು ಕರೆಯುತ್ತಿದ್ದ ವ್ಯಕ್ತಿಯನ್ನೇ ಮದುವೆಯಾಗಿ ಆತನಿಂದಲೇ ಮಗುವನ್ನು ಪಡೆದಿದ್ದು, ಈ ವಿಚಾರ ಕುರಿತು ಮಾತನಾಡಿ, ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾಗಳಲ್ಲಿ ಕೂಡ ಅಪ್ಲೋಡ್ ಮಾಡಿದ್ದಾಳೆ. ಮಹಿಳೆಯ ಈ ಹೇಳಕೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಯಾಗುತ್ತಿದ್ದು, ನೆಟ್ಟಿಗರು ಬಗೆ ಬಗೆಯಾಗಿ ಕಮೆಂಟ್ ಮಾಡುತ್ತಿದ್ದಾರೆ.
ಭಾರತದಲ್ಲಿ ತಮಗಿಂತ ಹಿರಿಯರಿರುವ ವಯಕ್ತಿಯನ್ನಾಗಲಿ ಅಥವಾ ಅಪರಿಚಿತರನ್ನು ಹೆಚ್ಚಿನವರು ಭಯ್ಯ ಎಂದು ಸಂಭೋದಿಸುತ್ತಾರೆ. ಭಯ್ಯ ಎಂದರೆ ಎಲ್ಲರಿಗೂ ಗೊತ್ತಿರುವಂತೆ ಅಣ್ಣ ಎಂಬ ಅರ್ಥ ಕೊಡುತ್ತದೆ. ಆದರೆ ಇಲ್ಲೊಬ್ಬಳು ಪುಣ್ಯಾತ್ಗಿತ್ತಿ ಭಯ್ಯ ಭಯ್ಯ ಎನ್ನುತ್ತಲೇ ಆತನನ್ನು ಮದುವೆ ಆಗಿ, ಮಗು ಹೆತ್ತು, ಸಂತೋಷದ ಸಂಗತಿಯನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾಳೆ.
ಹೌದು, ವಿನಿ(Vini) ಎಂಬಾಕೆ ತನ್ನ ಕತೆಯನ್ನು ತಾನೇ ಇನ್ಸ್ಟಾಗ್ರಾಂ(Instagram) ಮೂಲಕ ಹಂಚಿಕೊಂಡಿದ್ದಾರೆ. 8 ವರ್ಷಗಳವರೆಗೆ ಭಯ್ಯಾ (Woman married Bhaiya) ಎಂದು ಕರೆಯುತ್ತಿದ್ದೆ, ಇದೀಗ ಅವರನ್ನೇ ಮದುವೆಯಾಗಿ ಒಂದು ಮಗುವಿಗೆ ತಾಯಿಯಾಗಿದ್ದೇನೆ ಎಂದು ವಿಡಿಯೋ ಕುರಿತು ಬರೆಯಲಾಗಿದ್ದು, ವಿಡಿಯೋದಲ್ಲಿ ವಿನಿ ಮತ್ತು ಆಕೆಯ ಪತಿ ಜೈ ಅವರ ಬಾಲ್ಯದ ಫೋಟೋಗಳು ಒಳಗೊಂಡಂತೆ ಅನೇಕ ಫೋಟೋಗಳಿವೆ. ಜೊತೆಗೆ ಮಗುವಿನ ಚಿತ್ರಗಳು ಸಹ ಇವೆ.
ಅಂದಹಾಗೆ ವಿನಿ ಮತ್ತು ಜೈ ಇಬ್ಬರು ಸಂಬಂಧಿಗಳು. ಇಬ್ಬರ ನಡುವಿನ ವಯಸ್ಸಿನ ವ್ಯತ್ಯಾಸ ಕಾರಣ ಸುಮಾರು 8 ವರ್ಷಗಳವರೆಗೆ ಭಯ್ಯಾ ಎಂದು ಕರೆಯುತ್ತಿದ್ದರಂತೆ. ಸಂಬಂಧಿಕರು ಇಬ್ಬರ ಮದುವೆ ಮಾಡಿಸಿದ ಬಳಿಕ ಇದೀಗ ಗಂಡ-ಹಂಡತಿಯಾಗಿ ಸುಂದರ ಸಂಸಾರ ಸಾಗಿಸುತ್ತಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅದರಲ್ಲೂ ವಿಶೇಷವಾಗಿ ವಿಡಿಯೋದ ಶೀರ್ಷಿಕೆಗಾಗಿ ಪಾಸಿಟಿವ್ ಮತ್ತು ನೆಗೆಟಿವ್ ಎರಡೂ ರೀತಿಯ ಕಾಮೆಂಟ್ಗಳು ಬಂದಿವೆ. ಈ ವಿಡಿಯೋ ನೋಡಿ ನಿಮಗೆ ಏನು ಅನಿಸುತ್ತದೆ ಎಂಬುದನ್ನು ಕಾಮೆಂಟ್ ಮೂಲಕ ತಿಳಿಸಿ.
ಇದೀಗ ವಿಡಿಯೋ ಜಾಲತಾಣದಲ್ಲಿ 5 ಮಿಲಿಯನ್ಗು ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದ್ದು, ಪರ-ವಿರೋಧ ಚರ್ಚೆಯನ್ನು ಹುಟ್ಟುಹಾಕಿದೆ. ವಿಶೇಷವಾಗಿ ವಿಡಿಯೋದ ಶೀರ್ಷಿಕೆಗಾಗಿ ಪಾಸಿಟಿವ್ ಮತ್ತು ನೆಗೆಟಿವ್ ಎರಡೂ ರೀತಿಯ ಕಾಮೆಂಟ್ಗಳು ಬಂದಿವೆ. ಈ ವಿಡಿಯೋ ನೋಡಿ ನಿಮಗೆ ಏನು ಅನಿಸುತ್ತದೆ ಎಂಬುದನ್ನು ಕಾಮೆಂಟ್ ಮೂಲಕ ತಿಳಿಸಿ.
