Home » Kannada Tamanna: ಈ ನಟಿಯನ್ನು ನೋಡಿ ಕನ್ನಡದ ತಮನ್ನಾ ಅನ್ನುತ್ತಿದ್ದಾರೆ ಫ್ಯಾನ್ಸ್! ನೋಡಿದ್ರೆ ನೀವೂ ಹಾಗನ್ನೋದು ಪಕ್ಕಾ!

Kannada Tamanna: ಈ ನಟಿಯನ್ನು ನೋಡಿ ಕನ್ನಡದ ತಮನ್ನಾ ಅನ್ನುತ್ತಿದ್ದಾರೆ ಫ್ಯಾನ್ಸ್! ನೋಡಿದ್ರೆ ನೀವೂ ಹಾಗನ್ನೋದು ಪಕ್ಕಾ!

by ಹೊಸಕನ್ನಡ
1 comment
Kannada Tamanna

Kannada Tamanna : ದಕ್ಷಿಣ ಭಾರತ ಚಿತ್ರರಂಗದಲ್ಲಿ ಮಿಲ್ಕಿ ಬ್ಯುಟಿ ಎಂದು ಖ್ಯಾತಿ ಪಡೆದ ನಟಿ ತಮನ್ನಾ ಅವರು ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. ಮೇಕಪ್ ಇಲ್ಲದೆ ಗ್ಲಾಮರಸ್ ಆಗಿ ಕಾಣೋ ಈಕೆಗೆ ಫಿಧಾ ಆಗದವರೇ ಇಲ್ಲ ಅನ್ಬೋದು. ತಮನ್ನಾ ಅವರ ಬ್ಯುಟಿ, ಅಭಿನಯ, ಡ್ಯಾನ್ಸ್ ಇದೆಲ್ಲವೂ ಎಲ್ಲಾ ಅಭಿಮಾನಿಗಳ ಫೇವರೆಟ್ ಹೇಳಬಹುದು. ಅಂದಹಾಗೆ ಇದೀಗ ಕನ್ನಡ ಇಂಡಸ್ಟ್ರಿಯಲ್ಲೂ ಒಬ್ಬಳು ನಟಿಯನ್ನು ಕಂಡು ನೆಟ್ಟಿಗರೆಲ್ಲರೂ ನೀವು ನೋಡಲು ಥೇಟ್ ತಮನ್ನಾ ( Kannada Tamanna) ತರ ಇದ್ದೀರಾ ಎಂದು ಆಕೆಗೆ ಹೇಳ್ತಿದ್ದಾರೆ. ಹಾಗಿದ್ರೆ ಆ ನಟಿ ಯಾರು ಗೊತ್ತಾ?

ಹೌದು, ತಮನ್ನಾ ಅವರು ಕನ್ನಡದ ಕೆಜಿಎಫ್ ಸಿನಿಮಾದ ‘ಜೋಕೆ, ನಾನು ಬಳ್ಳಿಯ ಮಿಂಚು’ ಹಾಡಿನಲ್ಲಿ ಕಾಣಿಸಿಕೊಂಡಿದ್ದು ಕನ್ನಡಿಗರ ಮನೆಮಾತಾಗಿದ್ದರು. ಆದರೀಗ ನಮ್ಮ ಕನ್ನಡದ ನಟಿಯನ್ನು ನೋಡಿ, ನೀವು ಥೇಟ್ ತಮನ್ನಾ ಅವರ ಜೊತೆಗೆ ಇದ್ದೀರಿ. ಕನ್ನಡ ಚಿತ್ರಪ್ರೇಮಿಗಳು ಹಾಗೂ ನೆಟ್ಟಿಗರು ಹೀಗೆ ಹೇಳುತ್ತಿರುವ ನಟಿ ಯಾರು ಗೊತ್ತಾ?

ಆಕೆ ಮತ್ಯಾರು ಅಲ್ಲ, ಚಿಕ್ಕ ವಯಸ್ಸಿನಿಂದ ಕನ್ನಡ ಕಿರುತೆರೆ ಮತ್ತು ಬೆಳ್ಳಿ ತೆರೆ ಎರಡರಲ್ಲೂ ಸಕ್ರಿಯವಾಗಿ ಜನಪ್ರಿಯತೆ ಗಳಿಸಿದ, ಬಿಗ್ ಬಾಸ್ ಕನ್ನಡ ಓಟಿಟಿ ಸೀಸನ್ 1 ಗೆ ಎಂಟ್ರಿ ಕೊಟ್ಟು, ಅಲ್ಲಿಂದ ಟಿವಿ ಸೀಸನ್ ಗೆ ಬಂದು, ಒಂದಷ್ಟು ವಾರಗಳ ಕಾಲ ಹಾಡು, ಡ್ಯಾನ್ಸ್ ಹಾಗೂ ಕ್ಯೂಟ್ ಲುಕ್ಸ್ ನಲ್ಲಿ ಎಲ್ಲರ ಫೇವರೆಟ್ ಆಗಿರುವ ಸಾನ್ಯಾ ಅಯ್ಯರ್ (ಸಾನ್ಯಾ ಅಯ್ಯರ್) ಅವರೇ ಕನ್ನಡ ತಮನ್ನಾ ಆಗಿಬಿಟ್ಟಿದ್ದಾರೆ.

ಚಿಕ್ಕ ವಯಸ್ಸಿನಲ್ಲೇ ಪುಟ್ಟಗೌರಿ ಮದುವೆ ಧಾರಾವಾಹಿಯಲ್ಲಿ ಗೌರಿಯಾಗಿ ಜನಮೆಚ್ಚುಗೆ ಗಳಿಸಿ, ನಂತರ ಕೆಲವು ಸಿನಿಮಾಗಳಲ್ಲಿ ನಟಿಸಿದರು ಸಾನ್ಯಾ ಅಯ್ಯರ್ . ಬಿಗ್ ಬಾಸ್ ಶೋ ಇವರಿಗೆ ಹೆಚ್ಚು ಜನಪ್ರಿಯತೆ ತಂದುಕೊಟ್ಟಿದೆ.
ಸಾನ್ಯ ಅಯ್ಯರ್ ಅವರು ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದು, ಹಲವು ಫೋಟೋಶೂಟ್ ಗಳನ್ನು ಮಾಡಿ ಅವರನ್ನು ಶೇರ್ ಮಾಡಿಕೊಳ್ಳುತ್ತಾರೆ.

ಇತ್ತೀಚೆಗೆ ಸಾನ್ಯಾ ಅವರು ಶೇರ್ ಮಾಡಿರುವ ಫೋಟೋಸ್ ನೋಡಿ ನೆಟ್ಟಿಗರು ಫಿದಾ ಆಗಿದ್ದು, ನೀವು ಥೇಟ್ ತಮನ್ನಾ ಅವರ ಹಾಗೆ ಕಾಣುತ್ತಿದ್ದಾರೆ ಎಂದು ಕಮೆಂಟ್ಸ್ ನಲ್ಲಿ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಫೋಟೋಸ್ ತುಂಬಾ ಚೆನ್ನಾಗಿದೆ, ಮುದ್ದಾಗಿ ಕಾಣುತ್ತಿದ್ದಾರೆ ಎಂದು ಸಾನ್ಯ ಅವರಿಗೆ ಪ್ರಶಂಸೆ ನೀಡುತ್ತಿದ್ದಾರೆ ನೆಟ್ಟಿಗರು.

You may also like

Leave a Comment